20 ರಂದು ಶಾಲಾ ಕಾಲೇಜುಗಳ ಸ್ನೇಹ ಸಮ್ಮೇಳನ

20 ರಂದು ಶಾಲಾ ಕಾಲೇಜುಗಳ ಸ್ನೇಹ ಸಮ್ಮೇಳನ
ಕಲಬುರಗಿ: ಇಲ್ಲಿನ ಬ್ರಹ್ಮಪುರ ಬಡಾವಣೆಯ ಸ್ವಾಮಿ ವಿವೇಕಾನಂದ ನಗರದ ಕಸ್ತೂರಿಬಾಯಿ ಪಿ.ಬುಳ್ಳಾ ಸಾಂಸ್ಕೃತಿಕ ಸಭಾಭವನದಲ್ಲಿ ದಿ.20 ರಂದು ಸಂಜೆ 5 ಗಂಟೆಗೆ ಅಖಿಲ ಕರ್ನಾಟಕ ಸ್ನೇಹಗಂಗಾ ವಾಹಿನಿಯ ಸಂಚಾಲಿತ ಶಾಲಾ ಕಾಲೇಜುಗಳ ಸ್ನೇಹ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವಾಹಿನಿಯ ಗೌರವ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಪಿ. ಬುಳ್ಳಾ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಉದ್ಘಾಟಿಸಲಿದ್ದು, ಗೌರವಾಧ್ಯಕ್ಷ ಡಾ. ಬಿ.ಪಿ. ಬುಳ್ಳಾ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಅಪ್ಪಾರಾವ ಅಕ್ಕೋಣಿ, ಕೆಪಿಎಸ್‌ಸಿ ಮಾಜಿ ಸದಸ್ಯೆ ಹಾಗೂ ಕಲ್ಯಾಣ ಕರ್ನಾಟಕ ಶೈಕ್ಷಣಿಕ ಸುಧಾರಣಾ ಸಮಿತಿ ಸದಸ್ಯೆ ಡಾ. ನಾಗಬಾಯಿ ಬಿ. ಬುಳ್ಳಾ, ಗುಲಬರ್ಗಾ ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ವಾಸುದೇವ ಸೇಡಂ, ಪತ್ರಕರ್ತ ಭೀಮಾಶಂಕರ ಎಂ. ಫಿರೋಜಾಬಾದ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಆರ್ಷದ್ ಎಂ.ಡಿ. ಮುಖ್ಯ ಅತಿಥಿಗಳಾಗಿ ಆಗಮಿಸುವರು.
ವಾಹಿನಿಯ ಕಾರ್ಯಾಧ್ಯಕ್ಷ ಸಾಯಬಣ್ಣ ವಡಗೇರಿ, ಉಪಾಧ್ಯಕ್ಷ ರಾಮಲಿಂಗ ನಾಟೀಕಾರ್, ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕಾಲೇಜಿನ ಪ್ರಾಚಾರ್ಯ ಸೋನಾಲಿ ಬಟಗೇರಿ, ಗಂಗಾ ಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ವಿಜಯಲಕ್ಷಿö್ಮÃ ಬೆಳಮಗಿ ಸೇರಿ ಅನೇಕ ಗಣ್ಯಾತಿಗಣ್ಯರು ಪಾಲ್ಗೊಳಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದ್ದಾರೆ.