ಮಳೆಗೆ ಬೆಳೆ ಹಾನಿ ಸೂಕ್ತ ಪರಿಹಾರಕ್ಕೆ ಪ್ರಶಾಂತಗೌಡ ಆರ್.ಮಾಲಿಪಾಟೀಲ ಆಗ್ರಹ
ಮಳೆಗೆ ಬೆಳೆ ಹಾನಿ ಸೂಕ್ತ ಪರಿಹಾರಕ್ಕೆ ಪ್ರಶಾಂತಗೌಡ ಆರ್.ಮಾಲಿಪಾಟೀಲ ಆಗ್ರಹ
ಕಲಬುರಗಿ: ವರುಣನ ಅವಾಂತರಕ್ಕೆ ಜೇವರ್ಗಿ ತಾಲೂಕು ಮತ್ತು ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದಾರೆ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಆರ್.ಮಾಲಿಪಾಟೀಲ ಆಗ್ರಹಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಮಳೆಯು ಮುಂದುವರೆದಿದ್ದು ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗಿವೆ ಅವಾಂತರಿAದ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಹತ್ತಿ ಮತ್ತು ತೋಗರಿ ಬೆಳೆಯು ಹಾನಿಯಾಗಿದೆ. ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ಕಡೆ ಸಾವಿರಾರು ಎಕರೆ ಪ್ರದೇಶದ ಹತ್ತಿ ಮತ್ತು ತೋಗರಿ ಬೆಳೆಯು ನೆಲಕಚ್ಚಿ ಹಾನಿಯಾಗಿದೆ.
ಅದೆ ರೀತಿ ಹತ್ತಿ ಮತ್ತು ತೋಗರಿ ಬೆಳೆಯು ಬೆಳೆಯಲ್ಲಿ ನೀರು ಸಂಗ್ರಹವಾಗಿ ಹತ್ತಿ ಮತ್ತು ತೋಗರಿ ಬೆಳೆಯು ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಹತ್ತಿ ಮತ್ತು ತೋಗರಿ ಬೆಳೆಯು ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಬೆಳೆ ಹಾನಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಮಳೆಗೆ ಹಾನಿಗೊಳಗಾದ ರೈತರ ಹೊಲಗಳ ಸಮೀಕ್ಷೆ ಮಾಡಿ ಜಿಲ್ಲಾಡಳಿತ ಮತ್ತು ಸರಕಾರ ಹೆಚ್ಚಿನ ಪರಿಹಾರ ನೀಡಬೇಕು ಒಂದು ವೇಳೆ ವಿಳಂಬ ಮಾಡಿದ್ದಲ್ಲಿ ರಾಜ್ಯ ರೈತ ಸಂಘದ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಲಿಪಾಟೀಲ ಅವರು ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.