ಬಸವ ಜ್ಯೋತಿ ಪಾದಯಾತ್ರೆ
ಬಸವ ಜ್ಯೋತಿ ಪಾದಯಾತ್ರೆ
ಕಮಲನಗರ: ಭಾಲ್ಕಿ ಹಿರೇಮಠದ ಲಿಂ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ ೧೩೫ ನೇ ಜಯಂತೋತ್ಸವ ನಿಮಿತ್ಯ ಕಮಲನಗರ ಪಟ್ಟಣದಿಂದ ಭಾಲ್ಕಿಯ ಬಸವಶ್ರಾಮದವರಿಗೆ ಇದೆ ತಿಂಗಳ ಡಿ೧೨ಮತ್ತು೧೩ರಂದು ಬಸವ ಜ್ಯೋತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರು ಅವರ ದಿವ್ಯ ಸಾನಿಧ್ಯದಲ್ಲಿ ಬಸವ ಜ್ಯೋತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಕಮಲನಗರ ಪಟ್ಟಣದ ಶಾಖಾ ಮಠದಿಂದ ದಿನಾಂಕ ೧೨/೧೨/೨೦೨೪ ರಂದು ಬೆಳಿಗ್ಗೆ ೧೦/೦೦ ಗಂಟೆಗೆ ಉದ್ಘಾಟನಾ ಸಮಾರಂಭ ಜರುಗುವುದು. ಮಧ್ಯಾಹ್ನ ೧೨/೦೦ ಗಂಟೆಗೆ ಪಾದಯಾತ್ರೆ ಪ್ರಾರಂಭವಾಗಿ ಡಿಗ್ಗಿ, ಹೊಳಸಮುದ್ರ, ಸಾವಳಿ, ಸಂಗಮದಲ್ಲಿ ವಸತಿ ಮಾಡಲಾಗಿದೆ.
ದಿನಾಂಕ ೧೩/೧೨/೨೦೨೪ ರಂದು ಆಳಂದಿ, ಡೋಣಗಾಪುರ ಮಾರ್ಗವಾಗಿ ಭಾಲ್ಕಿಯ ಬಸವೇಶ್ವರ ವೃತ್ತದಲ್ಲಿ ಬಂದು ತಲುಪಲಿದೆ. ಈ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವಹಿಸಬೇಕೆಂದು ಕಮಲನಗರದ ಸದ್ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.