ಬದುಕಿನ ಯಶಸ್ಸು ಪರಿಶ್ರಮದಲ್ಲಿದೆ ಡಾ.ಮಹೇಶ ಗಂವ್ಹಾರ

ಬದುಕಿನ ಯಶಸ್ಸು ಪರಿಶ್ರಮದಲ್ಲಿದೆ ಡಾ.ಮಹೇಶ ಗಂವ್ಹಾರ

ಬದುಕಿನ ಯಶಸ್ಸು ಪರಿಶ್ರಮದಲ್ಲಿದೆ ಡಾ.ಮಹೇಶ ಗಂವ್ಹಾರ

ಕಲಬುರಗಿ. ನಮ್ಮ ಜೀವನದ ಯಶಸ್ಸು ಪರಿಶ್ರಮದಲ್ಲಿದೆ ,ದುಡಿಮೆಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಶ್ರೀಮತಿ ವಿ.ಜಿ.ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಮಹೇಶ ಗಂವ್ಹಾರ ನಗರದ ಸರಕಾರಿ ಮಹಾವಿದ್ಯಾಲಯದಲ್ಲಿ ( ಸ್ವಾಯತ್ತ) ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಪ್ರಥಮ ವರ್ಷದ ಎಂ.ಎ. ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಹೇಳಿದರು, ಮುಂದುವರೆದು ಮಾತನಾಡಿದ ಅವರು ಯುವಕರು ದೇಶದ ಅಭಿವೃದ್ದಿಯಲ್ಲಿ ತಮ್ಮನ್ನು ತಾವು ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡು ತಮ್ಮ ಹೆತ್ತವರ ಪಾಲಕರ ಸಮಾಜದ ಹಿತಕ್ಕೆ ಕಾರಣರಾಗಬೇಕು ಎಂದರು .

ಜೀವನದ ಯಶಸ್ಸಿನಲ್ಲಿ ಶಿಕ್ಚಣದ ಪಾತ್ರ ದೊಡ್ಡದು ಶಿಕ್ಚಣ ನಮಗೆ ಆಲೊಚನೆಗಳನ್ನು ವ್ಯಕ್ತ ಪಡಿಸುವ ಸಾಮರ್ಥ್ಯ ಒದಗಿಸುತ್ತದೆ .ಗುರಿ ತಲುಪಲಾರದೆ ಇರುವುದು ಸೋಲಲ್ಲ ತಲಪಲು ಒಂದು ಗುರಿ ಇಲ್ಲದಿರುವುದೆ ನಿಜವಾದ ಸೋಲು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರುಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಸವಿತಾ ತಿವಾರಿ ವಹಿಸಿಕೊಂಡಿದ್ದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ರಾದ ಪ್ರೊ.ವಿಜಯಲಕ್ಷ್ಮಿ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು,ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ.ಉಮೇರಾ ನುಜ್ಹತ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು,ಕುಮಾರ ರಾಜರಡ್ಡಿ ಸ್ವಾಗತಿಸಿದರು, ಕುಮಾರಿ ಸಾವಿತ್ರಿ ಪ್ರಾರ್ಥಿಸಿದರು ಕುಮಾರ ರಾಜಕುಮಾರ ಕಾರ್ಯಕ್ರಮ ನಿರುಪಿಸಿದರು ಕೊನೆಯದಾಗಿ ಕುಮಾರಿ ಜಗದೇವಿ ವಂದಿಸಿದರು. ಇದೇ ಸಂಧರ್ಭದಲ್ಲಿ ತೃತೀಯ ಹಾಗೂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಾದ ಸೌಮ್ಯಶ್ರೀ,ಮಹೇಬೂಬ ಪಟೇಲ,ಸೊನಾಲಿ,ಹಾಗೂ ವಿ.ಬಿ.ಮರಿಯಮ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು .ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ

ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.