ಆರೋಗ್ಯ ಭಾಗ್ಯಕ್ಕಾಗಿ ಪುಸ್ತಕ ಬಾಗಿನ ನೀಡಿದ ರೇಖಾ ಶಿವರಾಜ ಅಂಡಗಿ
ಆರೋಗ್ಯ ಭಾಗ್ಯಕ್ಕಾಗಿ ಪುಸ್ತಕ ಬಾಗಿನ ನೀಡಿದ ರೇಖಾ ಶಿವರಾಜ ಅಂಡಗಿ
ಸಿರಿ-ಸಂಪತ್ತು ಲಕ್ಷ್ಮಿ ಅರಿಷಿಣ-ಕುಂಕುಮ, ಎಲೆ-ಅಡಿಕೆ, ಹಣ್ಣುಗಳ ಜೊತೆ ಪುಸ್ತಕ ಬಾಗಿನವನ್ನು ಮುತ್ತೈದೆಯರಿಗೆ ನೀಡಿದ ರೇಖಾ ಶಿವರಾಜ ಅಂಡಗಿ .
ಕಲಬುರಗಿ ನಗರದ ವಿದ್ಯಾನಗರದಲ್ಲಿ ಶುಕ್ರವಾರದಂದು ಸಾಯಂಕಾಲ ಶ್ರಾವಣ ಮಾಸದ ಶ್ರೀ ಸಂಪತ್ತ ಲಕ್ಷ್ಮಿ ಅರಿಷಿಣ-ಕುಂಕುಮ ೫ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಪುಸ್ತಕ ಬಾಗಿನ ವಿಶೇಷ ಚಿಂತನೆ ಅಡುಗೆ ಮನೆಯ ಔಷಧಾಲಯ ಆಹಾರವೇ ಔಷಧ, ಅನ್ನುವಂತೆ ನಾಡಿನ ಖ್ಯಾತ ವೈದ್ಯ, ಸಾಹಿತಿ, ವಾಗ್ಮಿ ಮತ್ತು ಕ್ವಿಜ್ ಮಾಸ್ಟರ್ ಡಾ. ನಾ. ಸೋಮೇಶ್ವರ ಅವರು ಬರೆದ “ನಾವು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು” ಎಂಬ ಉತ್ತಮ ಆರೋಗ್ಯದ ಕುರಿತು ಮಹತ್ವದ ಪುಸ್ತಕ ಬಾಗಿನ ಕೊಡುವ ಮೂಲಕ ಅಂಡಗಿ ಪ್ರತಿಷ್ಠಾನ ಟೇಂಗಳಿ ಅಧ್ಯಕ್ಷ ಶಿವರಾಜ ಅಂಡಗಿ ಮತ್ತು ರೇಖಾ ಅಂಡಗಿ ದಂಪತಿಗಳು ಮನೆಗೆ ಬಂದ ಎಲ್ಲಾ ತಾಯಂದಿರಿಗು, ಅಕ್ಕ-ತಂಗಿಯರಿಗೂ ಪುಸ್ತಕ ಕೊಟ್ಟು ಗೌರವಿಸಿದರು.
ಇಂದಿನ ಯುವತಿ-ಯುವಕರು ಹೊಸ ರುಚಿಗಾಗಿ ಹೆಚ್ಚು ಮಸಾಲೆ ಪದಾರ್ಥಗಳು ಅತಿ ಕರೆದ ಎಣ್ಣೆ ಬಳಸಿ ಬಾಯಿ ರುಚಿಗಾಗಿ ಜಿಂಕ ಆಹಾರ ತಾವು ತಿಂದು ಮಕ್ಕಳಿಗು ತಿನ್ನಿಸುತ್ತಿರುವ ಪದ್ದತಿ ಆರೋಗ್ಯಕಡೆ ಹೆಚ್ಚಿನ ಗಮನ ನೀಡದೆ ಇರುವ ಹಾಗು ಇಂದಿನ ದಿನ-ಮಾನಗಳಲ್ಲಿ ಹಣ ಗಳಿಸುವ ಭರಾಟೆಯಲ್ಲಿ ವಿಶ್ರಾಂತಿಯಿಲ್ಲದೆ ದುಡಿದು ಆರೋಗ್ಯ ಕೆಡಿಸಿಕೊಂಡು ಆ ಆರೋಗ್ಯ ಸುಧಾರಿಸಿಕೊಳ್ಳಲು ಹಣ ಖರ್ಚು ಮಾಡುವ ಪ್ರವೃತ್ತಿ ಕಡಿಮೆ ಮಾಡಿ ಎಂದು ಅರಿಷಿಣ-ಕುಂಕುಮಕ್ಕೆ ಮನೆಗೆ ಬಂದವರನ್ನು ರೇಖಾ ಶಿವರಾಜ ದಂಪತಿಗಳು ವಿನಂತಿಸಿಕೊಂಡರು.
ಡಾ. ನಾ. ಸೋಮೇಶ್ವರ ಅವರು ಉತ್ತಮ ಆರೋಗ್ಯ ಬಗ್ಗೆಯೇ ಸುಮಾರು ೬೦ ಪುಸ್ತಕಗಳು ಬರೆದಿದ್ದಾರೆ. ಅವುಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿವೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನವು “ಶ್ರೇಷ್ಠ ಲೇಖಕ, ಜೀವಮಾನ ಪ್ರಶಸ್ತಿಗಳನ್ನು” ನೀಡಿದೆ ಚಂದನ ದೂರದರ್ಶನ ವಾಹಿನಿಯಲ್ಲಿ ಸುಮಾರು ೨೧ ವರ್ಷಗಳಿಂದ “ಥಟ್ಟಾ ಅಂತ ಹೇಳಿ” ಎನ್ನುವ ಕ್ವಿಜ್ ಸ್ಪರ್ಧೆಗೆ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಇಂತಹ ಮಹಾನ ವಾಗ್ಮಿ ಲೇಖಕರ ಪುಸ್ತಕ ಓದುವುದರ ಮೂಲಕ ಉತ್ತಮ ಆರೋಗ್ಯ ಕಾಪಾಡಲು ಅನುಕೂಲಕರವಾಗಲೆಂದು ಮನೆಗೆ ಬಂದ ಸುಮಾರು 45 ಕಿಂತ ಹೆಚ್ಚು ಅಕ್ಕ ತಂಗಿಯರಿಗೆ ಆ ಮೌಲಿಕ ಪುಸ್ತಕ ನೀಡಿ ಗೌರವಿಸಿದ್ದು ವಿಶೇಷ.