ಹಲಕರ್ಟಿ ವೀರಭದ್ರೇಶ್ವರ ಜಾತ್ರೆ: ನವಂಬರ್ 20ರಂದು ರಥೋತ್ಸವ
ಹಲಕರ್ಟಿ ವೀರಭದ್ರೇಶ್ವರ ಜಾತ್ರೆ: ನವಂಬರ್ 20 ರಂದು ರಥೋತ್ಸವ
ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಹಲಕರ್ಟಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯರ ನೇತೃತ್ವದಲ್ಲಿ ನ.19 ರಂದು ರಾತ್ರಿ ಅಗ್ನಿ ಪ್ರವೇಶ, ನ 20 ರಂದು ಸಂಜೆ 6 ಗಂಟೆಗೆ ಸಹಸ್ರಾರು ಭಕ್ತರ ಮಧ್ಯೆ ಭವ್ಯ ರಥೋತ್ಸವ ನಡೆಯಲಿದ್ದು, ತನ್ನನಿಮಿತ್ತ ನ. 15ರಿಂದ ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನೀಂದ್ರ ಶಿವಾಚಾರ್ಯರು, ನ. 15 ರಂದು ರಾತ್ರಿ 10 ಗಂಟೆಗೆ ಚಿಕ್ಕವೀರಪ್ಪ ಅವರ ಮನೆಯಿಂದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಸಕಲ ವಾಧ್ಯಗಳೊಂದಿಗೆ ಅಂಬಲಿ ಬಂಡಿ ತರಲಾಗುವದು. ನ.16 ರಂದು ಸಂಜೆ 4 ಗಂಟೆಗೆ ಜೋಡು ಪಲ್ಲಕ್ಕಿಯೊಂದಿಗೆ ರುದ್ರಬಸವಣ್ಣಗೆ ಹೋಗುವದು, ಸಂಜೆ 6 ಗಂಟೆಗೆ ಚೌಡಮ್ಮನ ಗಂಗಸ್ಥಾಳಕ್ಕೆ ಹೋಗುವದು.
ನ. 18 ರಂದು ರಾತ್ರಿ 1 ಗಂಟೆಗೆ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳ ಸರಪಳಿ ಹರಿಯುವದು. ದಿ. 19 ರಂದು ಸಂಜೆ 4 ಗಂಟೆಗೆ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ದೈವದ ಸರಪಳಿ, ರಾತ್ರಿ 11 ಗಂಟೆಗೆ ಪುರವಂತರ ಹಾಗೂ ಭಕ್ತರಿಂದ ಅಗ್ನಿಪ್ರವೇಶ, ಪುರವಂತರ ಸೇವೆ ನಡೆಯುವದು.
ನ. 20 ರಂದು ಸಂಜೆ 4 ಗಂಟೆಗೆ ಚೌಡೇಶ್ವರ ಆಡುವಿಕೆ, ಹಿರೇಮಠ ಸಂಸ್ಥಾನ ಮಠದಲ್ಲಿ ಉಡಿ ತುಂಬುವದು. ಸಂಜೆ 6 ಗಂಟೆಗೆ ಶಶಿಧರ ದೇಶಮುಖ ಮನೆಯಿಂದ ಕುಂಭ ತರುವದು. ನಂತರ ಭಕ್ತರ ಜಯಘೋಷದೊಂದಿಗೆ ರಥೋತ್ಸವ ಜರುಗಲಿದೆ ಎಂದು ವಿವರಿಸಿದರು.
ಕಾರ್ಯದರ್ಶಿ ಚಂದ್ರಕಾಂತ ಮೇಲಿನಮನಿ, ಪ್ರಮುಖರಾದ ರಾಜುಗೌಡ ಪೊಲೀಸ್ ಪಾಟೀಲ, ರಾಚಯ್ಯ ಸ್ವಾಮಿ, ನೀಲಕಂಠಪ್ಪ ಸಂಗಶೆಟ್ಟಿ, ಪ್ರಕಾಶ ಚಂದನಕೇರಿ, ವೀರೇಶ ಕಪ್ಪರ, ಗುರುನಾಥ ಮಣಿಗಿರಿ, ಸಿದ್ದು ಮುಗುಟಿ, ರವಿ ಸಂಗಶೆಟ್ಟಿ, ಸೂಗಣ್ಣ ಸಾಹು ಚಂದನಕೇರಿ, ಮೋನಪ್ಪ ಕೋಲಕುಂದಿ, ನಾನಾಸಾಹೇಬ್ ಕೋಲಕುಂದಿ, ಭೀಮು ಕೋಲಕುಂದಿ, ಸಾಬಣ್ಣ ಕೋಲಕುಂದಿ, ಕರಣಪ್ಪ ಇಸಬಾ, ಸಯ್ಯದ್ ಫಯಾಜ್ ಪಟೇಲ, ಅಬ್ದುಲ್ ಲತೀಫ್ ಜುನೈದಿ, ಈರಣ್ಣ ಇಸಬಾ ಮತ್ತಿತರರಿದ್ದರು.
ವಾಡಿ ಸುದ್ದಿ ನಾಗರಾಜ್ ದಂಡಾವತಿ