ನಾಗಠಾಣಮಠ ಶ್ರೀಗಳ ಮೌನ ಅನುಷ್ಠಾನ

ನಾಗಠಾಣಮಠ ಶ್ರೀಗಳ ಮೌನ ಅನುಷ್ಠಾನ

ಚಿತ್ರ ಬರಹ : ಶಹಪುರ ತಾಲೂಕಿನ ಸಗರ ಗ್ರಾಮದ ನಾಗಠಾಣ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮೌನ ಅನುಷ್ಠಾನ ಕೈಗೊಂಡಿದ್ದಾರೆ.

ನಾಗಠಾಣಮಠ ಶ್ರೀಗಳ ಮೌನ ಅನುಷ್ಠಾನ.

ಶಹಾಪುರ : ಭೂಮಂಡಲದ ಸಮಸ್ತ ಜೀವ ರಾಶಿಗಳಿಗೆ ಒಳಿತಾಗಲಿ ಎಂಬ ಸಂಕಲ್ಪದೊಂದಿಗೆ ಲೋಕಕಲ್ಯಾಣಕ್ಕಾಗಿ,ಧರ್ಮ ಜಾಗೃತಿಗಾಗಿ, ತಾಲೂಕಿನ ಸಗರ ಗ್ರಾಮದ ನಾಗಠಾಣ ಹಿರೇಮಠದ ಶ್ರೀ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶಂಕರನಾರಾಯಣ ಕೆರೆಯ ದಡದಲ್ಲಿರುವ ಬೆಲ್ಲದ ಸಂಗಯ್ಯನ ಗರ್ಭಗುಡಿಯ ಗವಿಯೊಳಗೆ 21 ದಿನಗಳ ಕಾಲ ನಿರಾಹಾರ ಮೌನ ಅನುಷ್ಠಾನ ಕೈಗೊಂಡಿದ್ದಾರೆ.

ಶ್ರೀಗಳು ಮೌನ ಅನುಷ್ಠಾನ ಕೈಗೊಂಡಿರುವ ಮೂರನೇ ದಿನದಿಂದಲೇ ಪ್ರತಿನಿತ್ಯ ಮಳೆ ಸುರಿಯುತ್ತಿದ್ದು,ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ,ರೈತಾಪಿ ವರ್ಗದವರಲ್ಲಿ ಖುಷಿ ತಂದುಕೊಟ್ಟಿದೆ,ಗುರುವಿನ ಕೃಪೆಯಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.ಈ ಮೌನ ಅನುಷ್ಠಾನವು ಸಪ್ಟಂಬರ್ 3 ರಂದು ಮುಕ್ತಾಯಗೊಳ್ಳಲಿದೆ ಎಂದು ಭಕ್ತ ಸಮೂಹದ ಆಪ್ತರಾದ ಶಿವಲಿಂಗಯ್ಯ ಸ್ವಾಮಿ ಗಣಾಚಾರಿ ಮಠ,ಗದಿಗೆಪ್ಪ ಬಾವಿಕಟ್ಟಿ ತಿಳಿಸಿದ್ದಾರೆ.

ವರದಿ ಶಹಾಪುರ ಗ್ರಾಮೀಣ ಬಸವರಾಜ ಶಿನ್ನೂರ