ಕಾಲುದಾರಿ ಬಂದ್ ಮಾಡಿ ಬೀಗುತ್ತಿರುವ ವ್ಯಕ್ತಿಗಳಿಂದ, ಹಣಾದಿ ರಸ್ತೆ ಬಿಡಿಸಿ ಕೊಡಿ : ಆಡಳಿತ ಕಛೇರಿ ಮುಂದೆ ರೈತರ ಪ್ರತಿಭಟನೆ

ಕಾಲುದಾರಿ ಬಂದ್ ಮಾಡಿ ಬೀಗುತ್ತಿರುವ ವ್ಯಕ್ತಿಗಳಿಂದ, ಹಣಾದಿ ರಸ್ತೆ ಬಿಡಿಸಿ ಕೊಡಿ : ಆಡಳಿತ ಕಛೇರಿ ಮುಂದೆ ರೈತರ ಪ್ರತಿಭಟನೆ 

ಚಿಂಚೋಳಿ : ತಾಲೂಕಿನ ಗೌಡನಹಳ್ಳಿ – ಗಾರಂಪಳ್ಳಿ ಸಂಚರಿಸುವ ಕಾಲುದಾರಿ (ಹಣಾದಿ) ರಸ್ತೆಯನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ, ಚಿಂಚೋಳಿ ಯೂನಿಟ್ ಆಫ್ ಮೂಲ ನಿವಾಸಿ ಬಹುಜನ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. 

ಬಳಿಕ ಮಾತನಾಡಿದ ಪ್ರತಿಭಟನೆಕಾರರು, ಗೌಡನಹಳ್ಳಿ – ಗಾರಂಪಳ್ಳಿ- ದೇಗಲ್ಮಡಿ ಗ್ರಾಮದ ಮಧ್ಯ ಕಾಲುದಾರಿ ಹಣಾದಿ ರಸ್ತೆ ಇರುವುದನ್ನು ಸರಕಾರದ ನಕ್ಷೆಯಲ್ಲಿ ತೋರಿಸಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ರೈತರ ಬೇಡಿಕೆಗೆ ಇಲಾಖೆ ಮತ್ತು ಗುತ್ತೀಗೆದಾರರು ರೈತರಿಗೆ ಹಳ್ಳ ದ ದಂಡೆಯಿಂದ ರಸ್ತೆ ನಿರ್ಮಿಸಿ ಓಡಾಡಲು ಅನುಕೂಲ ಕಲ್ಪಿಸಿಕೊಡಲಾಗಿತ್ತು. ಆದರೆ ಕೆಲವು ವ್ಯಕ್ತಿಗಳು ಸರಕಾರದ ಜಾಗವನ್ನು ಕಬ್ಜೆ ಮಾಡಿ ರಸ್ತೆ ಬಂದ್ ಮಾಡಲಾಗಿರುವುದರಿಂದ ರೈತರು ಹೋಲಗಳಲ್ಲಿ ಬೆಳೆದಿರುವ ಫಸಲನ್ನು ತೆಗೆದು ಸಾಗಿಸುವುದಕ್ಕೆ ದಾರಿಯಿಲ್ಲದೆ ಒದ್ದಾಡುವ ಪರಿಸ್ಥಿತಿ ಎದುರಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪ್ರಭಾವಿ ವ್ಯಕ್ತಿಗಳ ಒತ್ತಡದ ಆಮಿಷಗಳಿಗೆ ಬಲಿಯಾಗದೆ, ಮಣಿಯದೆ ರೈತ ಕೂಲಿಕಾರರಿಗೆ ಅನ್ಯಾಯಕ್ಕೆ ಅವಕಾಶ ಕಲ್ಪಿಸಿಕೊಡದೆ, ಬಂದ್ ಮಾಡಿರುವ ಓಡಾಡುವ ಕಾಲುದಾರಿ ರಸ್ತೆಯನ್ನು ತೆರೆಸಿ, ರೈತರು ಬೆಳೆದ ಫಸಲನ್ನು ಸುಗಮವಾಗಿ ಸಾಗಿಸಲು ಅನುವು ಮಾಡಿ ಕೊಡಬೇಕೆಂದು ಸಂಘಟಕ ಮಾರುತಿ ಗಂಜಗಿರಿ ಮತ್ತು ಗೋಪಾಲ ಗಾರಂಪಳ್ಳಿ ಅವರು ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ ಆಡಳಿತಕ್ಕೆ ಒತ್ತಾಯಿಸಿದ್ದಾರೆ. 

ಈ ಸಂದರ್ಭದಲ್ಲಿ ಮೋಹನ ಐನಾಪೂರ, ಮೌನೇಶ ಗಾರಂಪಳ್ಳಿ, ರಾಜು ತೋಡಿ, ಹರೀಶಕುಮಾರ ದೇಗಲ್ಮಡಿ, ಹರ್ಷವರ್ಧನ್, ಇಸ್ಮಾಯಿಲ್ ಸಾಬ್, ಫಸಿಲಾ ಬೇಗಂ, ಉಸ್ಮಾನ ಅಲಿ, ಮೈನೋದ್ದಿನ್, ಚಾಂದ ಬೀ, ಮಹೆಬೂಬ್ ಸಾಬ, ಸದ್ದಾಂ ಹುಸೇನ್, , ರಿಜವಾನ ಬೇಗಂ, ಚಾಂದ ಪಾಶಾ, ಸಲೀಂಸಾಬ್, ಹಬೀಬ್ ಸಾಬ್ಪುತಲಿಬೀ, ಫಸಿಲಾ ಬೇಗಂ ಅವರು ಸಲ್ಲಿಸಿದ ಮನವಿ ಪತ್ರಕ್ಕೆ ಸಹಿ ಹಾಕಿದರು.