ಹಸನ್ಮುಖಿಯಾಗಿ ಅರಿವು ಕೇಂದ್ರದಅಂಬರೀಷ ಮೇತ್ರೆ ಅವರ ಕಾರ್ಯ ಶ್ಲಾಘನೀಯ: ಪಿಡಿಓ ಪ್ರಶಾಂತರೆಡ್ಡಿ

ಹಸನ್ಮುಖಿಯಾಗಿ ಅರಿವು ಕೇಂದ್ರದಅಂಬರೀಷ ಮೇತ್ರೆ ಅವರ ಕಾರ್ಯ ಶ್ಲಾಘನೀಯ: ಪಿಡಿಓ ಪ್ರಶಾಂತರೆಡ್ಡಿ

ಹಸನ್ಮುಖಿಯಾಗಿ ಅರಿವು ಕೇಂದ್ರದಅಂಬರೀಷ ಮೇತ್ರೆ ಅವರ ಕಾರ್ಯ ಶ್ಲಾಘನೀಯ: ಪಿಡಿಓ ಪ್ರಶಾಂತರೆಡ್ಡಿ

ವರದಿ: ವೀರಣ್ಣ ಮಂಠಾಳಕರ್

ಕಲ್ಯಾಣ ಕಹಳೆ ವಾರ್ತೆ

ಬಸವಕಲ್ಯಾಣ: ಅಂಬರೀಷ ಮೇತ್ರೆ ಅವರ ಕಾರ್ಯವನ್ನು ಮೆಚ್ಚಿ ಮೋರಖಂಡಿ ಗ್ರಾಮ ಪಂಚಾಯತ್ ಅರಿವು ಕೇಂದ್ರ ತಾಲೂಕು ಜಿಲ್ಲಾ ಅಷ್ಟೇ ಅಲ್ಲ ರಾಜ್ಯ ಮಟ್ಟದ ಮುಖ್ಯಮಂತ್ರಿಗಳ ಇಲಾಖೆಯ ಸಚಿವರು RDPR ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರು ಟ್ವಿಟ್ಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತರೆಡ್ಡಿ ನುಡಿದರು.

ಬಸವಕಲ್ಯಾಣ ತಾಲೂಕಿನ ಮೋರಖಂಡಿ ಗ್ರಾಮ ಪಂಚಾಯತ್ ಅರಿವು ಕೇಂದ್ರದ ಮೇಲ್ವಿಚಾರಕ ಅಂಬರೀಷ್ ಬಿ ಮೇತ್ರೆ ಅವರ ವರ್ಗಾವಣೆ ಪ್ರಯುಕ್ತ ಹಮ್ಮಿಕೊಂಡ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. 

ಗ್ರಾಮ ಪಂಚಾಯತ್ ವತಿಯಿಂದ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಮುಂದೊರೆದು ಮಾತನಾಡಿದ ಅವರು,, ಬಸವಕಲ್ಯಾಣ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಅರಿವು ಕೇಂದ್ರಗಳ ಸದಸ್ಯರೊಂದಿಗೆ ಅತ್ಯಂತ ಮುತುರ್ವಜಿಯಿಂದ ಕಾರ್ಯ‌ನಿರ್ವಹಿಸುತ್ತಲೇ ಹಸನ್ಮುಖಿಯಾಗಿ ಅಂಬರೀಷ ಮೇತ್ರೆ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ನೇರ ನಡೆ ನುಡಿ ಉತ್ತಮ ವ್ಯಕ್ತಿತ್ವವುಳ್ಳ ಅಂಬರೀಷ ಅವರು, ಎಲ್ಲರೊಂದಿಗೆ ಪ್ರೀತಿ, ಗೌರವ ವಿಶ್ವಾಸದಿಂದ ನಡೆದುಕೊಂಡು ಜೊತೆ ಜೊತೆಗೆ ಓದುಗರಿಗೂ ಉತ್ತೇಜನ ನೀಡಿ, ಯುವಕರಿಗೆ ಮಾರ್ಗದರ್ಶಿಯಾಗಿದ್ದು ಅತ್ಯಂತ ಕಾಳಜಿಯಿಂದ ಕಾರ್ಯ ನಿರತವಹಿಸಿದ್ದಾರೆ ಎಂದು ಹೇಳಿದರು.

ನಮ್ಮ ಜಿಲ್ಲಾ ತಾಲೂಕು ನಮ್ಮ ಗ್ರಾಮಕ್ಕೆ ಕೀರ್ತಿ ತಂದು ಕೊಟ್ಟಿದ್ದಲ್ಲದೆ ಅರಿವು ಕೇಂದ್ರದ ಜಿಲ್ಲಾಧ್ಯಕ್ಷರು ಹಲವಾರು ಒಳ್ಳೇಯ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಎಲ್ಲಾ ಅಧಿಕಾರಿಗಳ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ದುಡ್ಡು ಸಂಪಾದನೆ ಮಾಡಿಲ್ಲ. ಆದೃ ಎಲ್ಲರ ಮನಸು ಹೃದಯದಲ್ಲಿ ಇದ್ದಾರೆ. ನೀವು ಕೂಡ ಇಂತಹ ಕೆಲಸ ಕಾರ್ಯ ಸಾಧನೆ ಮಾಡಿದರೆ ಸದಾ ಪ್ರತಿಯೊಬ್ಬರ ನೆನಪುಗಳಲ್ಲಿ ಉಳಿಯುತ್ತಿರಿ ಎಂದು ಅರಿವು ಕೇಂದ್ರದ ಸದಸ್ಯರಿಗೆ ಸಲಹೆ ನೀಡಿದರು.

ಗ್ರಾಮ ಪಂಚಾಯತ್ ಸದ್ಯಸರು ಹಾಗೂ ಪೋಷಕರಾಗಿರುವ ದತ್ತು ಮಾತನಾಡಿ. ಅರಿವು ಕೇಂದ್ರದ ಗ್ರಾಮ ಪಂಚಾಯತ್ ಜಿಲ್ಲಾಧ್ಯಕ್ಷ ಅಂಬರೀಷ್ ಬಿ ಮೇತ್ರೆ ಅವರ ವರ್ಗಾವಣೆ ಓದುಗರಿಗೆ ದಾರಿದೀಪ ಆದಂತೆ, ಇವರ ವರ್ಗಾವಣೆಯಿಂದ ಮನಸ್ಸಿಗೆ ನೋವು ತಂದಿದೆ ಎಂದು ಅಭಿಪ್ರಾಯ ಪಟ್ಟರು.

ಅರಿವು ಕೇಂದ್ರ ಗ್ರಂಥಾಲಯದಲ್ಲಿ ಶಾಲಾ ಮಕ್ಕಳು ಕಾಲೇಜು ವಿದ್ಯಾರ್ಥಿಗಳು ಸದಾ ಕಂಪ್ಯೂಟರ್ ಹೋಮ್ ವರ್ಕ್ ವಿದ್ಯಾಭ್ಯಾಸ ಇನ್ನಿತರ ಚಟುವಟಿಕೆ. ಕ್ರೀಡಾಕೂಟ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಮುಖ್ಯವಾಗಿ. ಅರಿವು ಕೇಂದ್ರದಲ್ಲಿ ಓದುತ್ತಿರುವ. ಪೋಷಕರು ಮಕ್ಕಳು ಇಂದು ಪೊಲೀಸ್ ಆರ್ಮಿ.ಉಪನ್ಯಾಸಕರು ಪೊಲೀಸ್. ಟೀಚರ್.ಪೋಸ್ಟ್ ಆಫೀಸ್ TET. ಉತ್ತಿರ್ಣರಾಗಿ. ಅರಿವು ಕೇಂದ್ರದಲ್ಲಿ ಸರಕಾರಿ ಉದ್ಯೋಗ ಪಡೆದುಕೊಂಡು ಇಂದು ರಾಜ್ಯ ಮಟ್ಟದಲ್ಲಿ ಹೆಸರು ತಂದ ಕೀರ್ತಿ ಗ್ರಾಮ ಪಂಚಾಯತ್ ಮೋರಖಂಡಿ ಹಾಗೂ ಅರಿವು ಕೇಂದ್ರದ ಗ್ರಂಥಪಾಲಕ ಅಂಬರೀಷ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಮೋರಖಂಡಿ ಗ್ರಂಥಪಾಲಕ ಹಾಗೂ ಜಿಲ್ಲಾ ಗ್ರಾ.ಪಂ. ಗ್ರಂಥಾಲಯಗಳ ಜಿಲ್ಲಾಧ್ಯಕ್ಷ ಅಂಬರೀಷ್ ಬಿ ಮೇತ್ರೆ ಮಾತನಾಡಿ, ಬಸವಕಲ್ಯಾಣ ಕಾರ್ಯ ಕ್ಷೇತ್ರದಲ್ಲಿ ಮೋರಖಂಡಿ ಗ್ರಾಮಕ್ಕೆ ಸೇವೆಗೆ ಬಂದಿದ್ದೇ ಬಸವಣ್ಣನವರ, ಮತ್ತು ಸಿದ್ದೇಶ್ವರರ ಆಶೀರ್ವಾದದಿಂದ ಇದು ನನ್ನ ಪುಣ್ಯ, ಕಾರ್ಯಕ್ಷೇತ್ರ ಸ್ಥಳವಾಗಿಸಿಕೊಂಡಿದ್ದೆ. 

ಸೇವೆಗೆ ಸೇರಿದ ದಿನಗಳಿಂದ ಹಿಡಿದು ಈವರೆಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸರ್ವ ಸದ್ಯಸರು, ಮತ್ತು ಗ್ರಾಮದಲ್ಲಿನ ಹಿರಿಯರು, ಯುವಕರು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳ ಸಹಕಾರ ಮನೋಭಾವನೆಯಿಂದ ಸ್ಪಂಧಿಸಿದ್ದಾರೆ. ಇಲ್ಲಿಂದ ನನಗೂ ಬಿಟ್ಟು ಹೋಗೋಕೆ ಮನಸ್ಸಿಲ್ಲ ಆದರೂ ಕುಟುಂಬದ ಜವಾಬ್ದಾರಿಗಳು ಆರ್ಥಿಕ ಪರಿಸ್ಥಿತಿಯ ಅನಿವಾರ್ಯ ಕಾರಣನಂತರಗಳಿಂದ ವರ್ಗಾವಣೆ ಮಾಡಿಕೊಳ್ಳಬೇಕಾಯಿತು ಎಂದು ಭಾವುಕರಾಗಿ ನುಡಿದರು.

ಮೋರಖಂಡಿ ಗ್ರಾಮದಲ್ಲಿ ಪ್ರೀತಿ ಗೌರವ ಮಮಕಾರ ಸಿಕ್ಕಿದ್ದು ನನಗೆ ತುಂಬಾ ಖುಷಿ ಹೆಮ್ಮೆ ಎನಿಸುತ್ತದೆ. ಪ್ರತಿಯೊಬ್ಬರು ಸಹಾಯ ಸಹಕಾರ ತಾವೆಲ್ಲರೂ ನೀಡಿದ್ದು ಅದು ನನ್ನ ಪುಣ್ಯ. ನಿಮ್ಮ ಜೊತೆ ಕಳೆದ ದಿನಗಳು ತಿಂಗಳು ವರ್ಷ ಕಾಣಲೇ ಇಲ್ಲ. 

ಗ್ರಾಮ ಪಂಚಾಯತ್ ಸಿಬ್ಬಂದಿಗಳೊಂದಿಗೆ ಹೆಚ್ಚು ದಿನ ಕಳೆದಿದ್ದು. ಕಷ್ಟ ಸುಖ ದುಃಖ ಹಂಚಿಕೊಳ್ಳುತ್ತಾ ಕೆಲಸ ಕಾರ್ಯ ಮಾಡಿದ್ದು ಸದಾ ನನ್ನ ನೆನಪುಗಳಲ್ಲಿ ಉಳಿಯುತ್ತವೆ. ನನ್ನ ಕೈಲಾದಷ್ಟು ಸೇವೆ ನೀಡಿದ್ದೇನೆ. ನಾನ್ಯಾವತ್ತು ತಾಲೂಕಾಧ್ಯಕ್ಷನಾಗಿದ್ದಾಗ, ಜಿಲ್ಲಾಧ್ಯಕ್ಷ ಇದ್ದಾಗ ಅಧಿಕಾರಿಗಳು ಆಗಲಿ ಸಾರ್ವಜನಿಕರಾಗಲಿ, ಅಭಿಮಾನಿ ವರ್ಗ ಆಗಲಿ ಅಹಂಕಾರ ತೋರಿಸಿಲ್ಲ.. ನನ್ನ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲೆಂದು ಹಾರೈಸಿದ್ದಾರೆ.

ದುಡ್ಡು ಬರುತ್ತೆ ಹೋಗುತ್ತೆ ಆದರೆ ಕೆಲಸ ಕಾರ್ಯ ಸಾಧನೆ ನಮ್ಮೆಲ್ಲ ನೆನಪುಗಳಲ್ಲಿ ಶಾಶ್ವತ ಇರುತ್ತದೆ.. ಅರಿವು ಕೇಂದ್ರದಲ್ಲಿ ಓದಿ ಪೋಷಕರು ಮಕ್ಕಳು ಸರಕಾರಿ ಉದ್ಯೋಗ ಪಡೆದುಕೊಂಡರೆ ನನಗು ಹೆಮ್ಮೆ.. ನಿಮ್ಮ ಮಕ್ಕಳು ಅರಿವು ಕೇಂದ್ರದಲ್ಲಿ ಓದಿ ಸದುಪಯೋಗ ಪಡೆದುಕೊಳ್ಳಬೇಕು. 

ಹೀಗೆ ನಿಮ್ಮ ಪ್ರೀತಿ ಗೌರವ ಸದಾ ಇರಲಿ. ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಧಾರಾಣಿ ಜಯರಾಜ್, ಉಪಾಧ್ಯಕ್ಷ ಸಂಜೀವಕುಮಾರ ಗಾಯಕವಾಡ, ಸರ್ವ ಸದ್ಯಸರು ಸೇರಿದಂತೆ ಕಾರ್ಯದರ್ಶಿ ವೀರನಾಥ್, ಕರ ವಸೂಲಿಗಾರ ರೋಹಿಣಿ. ಕಾಯಕ ಮಿತ್ರ ರಜನಿ, ನಿಂಬು ಶಿವಕುಮಾರ ಸ್ವಾಗತಿಸಿ ವಂದಿಸಿದರು.ವಿಠಲ ಪಾಂಚಾಳ್ ನಿರೂಪಿಸಿದರು.