ಸಿಎನ್‌ಜಿ/ಎಲ್‌ಪಿಜಿ ಗ್ಯಾಸ್ದರ ಏರಿಕೆ ಕಾಂಗ್ರೆಸ್ ಸಮಿತಿ ಖಂಡಿಸಿ ಪ್ರತಿಭಟನೆ

ಸಿಎನ್‌ಜಿ/ಎಲ್‌ಪಿಜಿ ಗ್ಯಾಸ್ದರ ಏರಿಕೆ ಕಾಂಗ್ರೆಸ್ ಸಮಿತಿ ಖಂಡಿಸಿ ಪ್ರತಿಭಟನೆ
ಕಲಬುರಗಿ, ಏಪ್ರಿಲ್ 9: ಕೇಂದ್ರ ಸರ್ಕಾರ ಸಿಎನ್‌ಜಿ ಮತ್ತು ಎಲ್‌ಪಿಜಿ ಗ್ಯಾಸ್ದರ ಏರಿಕೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಖಾಲಿ ಗ್ಯಾಸ್ಸಿಲಿಂಡರ್‌ಗಳೊಂದಿಗೆ ಪ್ರತಿಭಟನೆ ನಡೆಯಿತು.
ಈ ಪ್ರತಿಭಟನೆಗೆ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಕೀಲ ಸರಡಗಿ ನೇತೃತ್ವ ವಹಿಸಿದ್ದರು. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಶಿವಾನಂದ ಹೂನಗುಂಟಿ, ಈರಣ್ಣ ಪಾಟೀಲ್, ಅಮರ ಶಿರವಾಳ, ಗಣೇಶ್ ನಾಗನಹಳ್ಳಿ, ಸಂಕ್ಪಾಲ್ ಕಾಂಬಳೆ, ಮೊಹಮ್ಮದ್ ಅಸ್ವಾನ್, ಸೈಯದ್ ರಖೀಬ್, ಅಜರ್ ಬಾದಲ್, ರಾಜು ಮಡಗಿ, ಎಜಾಜ್ ನಿಂಬಾಳ್ಕರ್, ಟೈಗರ್ ವಿಘ್ನೇಶ್ವರ, ಮಿಸ್ತ್ರಿ ಶರ್ಫುದ್ದೀನ್, ಪ್ರಶಾಂತ್ ನಾಟೇಕರ್, ಅಸ್ಲಂ ಸಿಂದಗಿ, ಸಮ್ರೀನ್, ಗೀತಾ ಹಾಗೂ ಸಂಗೀತಾ ಸೇರಿದಂತೆ ಹಲವಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಭಾಗವಹಿಸಿದವರು, ಸದಾ ಸಾರ್ವಜನಿಕರ ಮೇಲೆ ಬಡಿದಾಡುವ ಹಿತಾಹಿತವಿಲ್ಲದ ಬೆಲೆಯ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.