ಮಡಿವಾಳರ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸ ಮಾ. ೧೬ ರಂದು ಅಹ್ಹೋರಾತ್ರಿ ಹೋರಾಟದ ಬಿತ್ತಿಪತ್ರ ಬಿಡುಗಡೆ

ಮಡಿವಾಳರ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸ ಮಾ. ೧೬ ರಂದು ಅಹ್ಹೋರಾತ್ರಿ ಹೋರಾಟದ ಬಿತ್ತಿಪತ್ರ ಬಿಡುಗಡೆ

ಮಡಿವಾಳರ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸ ಮಾ. ೧೬ ರಂದು ಅಹ್ಹೋರಾತ್ರಿ ಹೋರಾಟದ ಬಿತ್ತಿಪತ್ರ ಬಿಡುಗಡೆ

ನರೇಗಲ್ಲ: ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ (ರಿ) ಮತ್ತು ಉತ್ತರ ಕರ್ನಾಟಕ ಮಡಿವಾಳರ ಸಂಘ (ರಿ) ಹಾಗೂ ಜಗದ್ಗುರು ಡಾ. ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠ, ಚಿತ್ರದುರ್ಗ ಶ್ರೀ ಮುಕ್ತಾನಂದ ಸ್ವಾಮೀಜಿ, ಶ್ರೀಕ್ಷೇತ್ರ ಕರಿಂಜೆ-ಮೂಡಬಿದ್ರೆ, ದಕ್ಷಿಣ ಕನ್ನಡ ಇವರುಗಳ ಸಾನಿಧ್ಯದಲ್ಲಿ ನಮಗೆ ಸಿಗಬೇಕಾದ ಹಕ್ಕನ್ನು ಪಡೆದುಕೊಳ್ಳಲು ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಮಾ. ೧೬ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಗದಗ ಜಿಲ್ಲಾ ಉಪಾದ್ಯಾಕ್ಷ ದ್ಯಾಮ್ಮಣ್ಣ ಮಡಿವಾಳರ ಹೇಳಿದರು.

ನರೇಗಲ್ಲ ಸಮಿಪದ ತೋಟಗಂಟಿ ಗ್ರಾಮದಲ್ಲಿ ಸೋಮವಾರ ಮಡಿವಾಳ ಸಮಾಜದವರು ಬೆಂಗಳೂರಿನ ಫ್ರೀಡಮ್ ಪಾರ್ಕನಲ್ಲಿ ಹೋರಾಟ ನಡೆಸುವ ಬಿತ್ತಿಪತ್ರ ಬಿಡುಗಡೆಗೊಳಿಸಿ ಅವರು ಮಾನಾಡಿದರು. ಕರ್ನಾಟಕ ರಾಜ್ಯದಲ್ಲಿ ನಮ್ಮ ಸಮಾಜಕ್ಕೆ ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಕೂಗು ಹಲವಾರು ದಶಕಗಳಿಂದ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ನಮಗೆ ಸಿಗಬೇಕಾದ ಸ್ಥಾನಮಾನವಾಗಲಿ ನಮ್ಮ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಇಲ್ಲಿಯವರೆಗೆ ಬಂದಿರುವ ಯಾವುದೇ ಸರ್ಕಾರಗಳು ಮಾಡಲೇ ಇಲ್ಲ. ನಮ್ಮ ಸಮಾಜಕ್ಕೆ ನಿಜವಾಗಿಯೂ ಸಿಗಬೇಕಾದ ಪರಿಶಿಷ್ಟ ಜಾತಿಯ ಹಕ್ಕಿನಿಂದ ನಾವು ಇಂದು ವಂಚಿತರಾಗಿದ್ದೇವೆ. ನಮಗೆ ಯಾವ ಹಕ್ಕು ಸಿಗಬೇಕು ಅದು ಸಿಗದೆ ಆ ಜಾಗದಲ್ಲಿ ಬಲಿಷ್ಟ ಜಾತಿಗಳು ಆಕ್ರಮಿಸಿಕೊಂಡು ನಮ್ಮ ಸಮಾಜ ಸಂಪೂರ್ಣವಾಗಿ ನಿರ್ಲಕ್ಷಿತವಾಗಿದೆ. ಅದಕ್ಕಾಗಿ ಈ ಹೋರಾಟ ನಡೆಸುತ್ತಿದ್ದು ಅಂದು ಸಮಾಜದ ಹೋರಾಟಕ್ಕೆ ಎಲ್ಲರೂ ಆಗಮಿಸಿ ಬೆಂಬಲ ಸೂಚಿಸಬೇಕು ಎಂದು ತಿಳಿಸಿದರು. 

ಗದಗ ಜಿಲ್ಲಾ ಯವ ಘಟಕದ ಅಧ್ಯಕ್ಷ ನಿಂಬಣ್ಣ ಮಡಿವಾಳರ ಮಾತನಾಡಿ ಈ ವರದಿಯನ್ನು ಜಾರಿಗೆ ತರಲು ನಮ್ಮ ಸಮುದಾಯದ ಡಾ. ಶ್ರೀ ಬಸವ ಮಾಚೀದೇವ ಸ್ವಾಮೀಜಿ, ಶ್ರೀ ಮಾಚಿದೇವ ಮಹಾಸಂಸ್ಥಾನ ಮಠ ಚಿತ್ರದುರ್ಗ, ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಉತ್ತರ ಕರ್ನಾಟಕ ಮಡಿವಾಳರ ಸಂಘಟನೆಗಳು ಒಟ್ಟುಗೂಡಿ ರಾಜ್ಯದ ೨೨೪ ಶಾಸಕರನ್ನು ಖುದ್ದು ಭೇಟಿ ಮಾಡಿ ಮನವಿಯನ್ನು ಮಾಡಲಾಗಿದೆ. ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಉತ್ತರ ಕರ್ನಾಟಕ ಮಡಿವಾಳರ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ೧೯ ಮಂತ್ರಿಗಳು ಹಾಗೂ ರಾಜ್ಯದ ೧೩೭ ಶಾಸಕರುಗಳಿಂದ ತಿಫಾರಸ್ಸು ಪತ್ರಗಳನ್ನು ಪಡೆದಿದೆ. ಈವರೆಗೆ ಪ್ರೊಫೆಸರ್ ಡಾ. ಅನ್ನಪೂರ್ಣ ವರದಿಯನ್ನು ಜಾರಿಗೊಳಿಸಲು ಒಟ್ಟು ೧೫೬ ಶಿಫಾರಸ್ಸು ಪತ್ರಗಳನ್ನು ಪಡೆದುಕೊಂಡಿದ್ದೆವೆ. ಇದನ್ನು ಮುಖ್ಯ ಮಂತ್ರಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯವರಿಗೆ ಸಲ್ಲಿಸಲಾಗಿದೆ. ಇಷ್ಟೆಲ್ಲಾ ಪ್ರಯತ್ನಗಳು ಮಾಡಿದ್ದರೂ ಸಹ ಸರ್ಕಾರ ನಮ್ಮ ಜನಾಂಗದ ಮನವಿಗಳನ್ನು ಸರಿಯಾಗಿ ಪರಿಗಣಿಸದೆ ನಮ್ಮ ಹಕ್ಕನ್ನು ಕಸಿದುಕೊಂಡಿದೆ. ನಮ್ಮ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ವರೆಗೂ ಆಹೋರಾತ್ರಿ ಪ್ರತಿಭಟನೆ ನಡೆಸಿ ನಮ್ಮ ಹಕ್ಕನ್ನು ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ. ಶಿವಪ್ಪ ಮಡಿವಾಳರ, ಗದಗ ತಾಲ್ಲೂಕು ಆನಂದ ಮಡಿವಾಳರ, ಯವ ಯುವ ಘಟಕದ ಅದ್ಯಕ್ಷ ವಿನೋದ ಮಡಿವಾಳರ, ಸಮಾಜದ ಹಿರಿಯರಾದ ಬಸಪ್ಪ ಮಡಿವಾಳರ, ನಿಂಗಬಸಪ್ಪ ಮಡಿವಾಳರ, ಮುತ್ತಪ್ಪ ಮಡಿವಾಳರ, ವೀರಪ್ಪ ಮಡಿವಾಳರ, ಅಶೋಕ ಮಡಿವಾಳರ.ಬಸಪ್ಪ ಮಡಿವಾಳರ, ಷಣ್ಮುಖಪ್ಪ ಮಡಿವಾಳರ.ಪರಸಪ್ಪ ಮಡಿವಾಳರ.ಆನಂದ ಮಡಿವಾಳರ.ಶಿವು ಮಡಿವಾಳರ.ಸುರೇಶ ಮಡಿವಾಳರ, ಪ್ರಭು ಮಡಿವಾಳರ, ಮಲ್ಲಿಕಾರ್ಜುನ ಮಡಿವಾಳರ ಹಾಗೂ ಸಮಾಜದ ಮುಖಂಡರು ಉಪಸ್ತಿತರಿದ್ದರು, 

ನರೇಗಲ್ಲ ಸಮಿಪದ ತೋಟಗಂಟಿ ಗ್ರಾಮದಲ್ಲಿ ಸೋಮವಾರ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಮಾ. ೧೬ ರಂದು ಬೆಂಗಳೂರಿನ ಫ್ರೀಡಮ್ ಪಾರ್ಕನಲ್ಲಿ ಅಹ್ಹೋರಾತ್ರಿ ಹೋರಾಟ ನಡೆಸುವ ಬಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ