ಸಂಘಟನಾ ಚತುರ ಆರ್,ಎಂ.ನಾಟೇಕಾರ - ರಾಮಣ್ಣ ಸಾದ್ಯಾಪುರ
ಸಂಘಟನಾ ಚತುರ ಆರ್,ಎಂ.ನಾಟೇಕಾರ - ರಾಮಣ್ಣ ಸಾದ್ಯಾಪುರ
ಯಾದಗಿರಿ : ನಿರಂತರ ಸೇವಾ ಮನೋಭಾವದ ವ್ಯಕ್ತಿ,ಸಮಾಜದ ಏಳಿಗೆಗಾಗಿ ತಮ್ಮ ವೃತ್ತಿ ಬದುಕಿನ ಒತ್ತಡದಲ್ಲೂ ಸಮಯ ಮೀಸಲಿಟ್ಟು ಸಮಾಜವನ್ನು ಕಟ್ಟುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸಂಘಟನಾ ಚತುರ ಆರ್.ಎಂ.ನಾಟೇಕಾರ ಎಂದು ಹಿರಿಯ ರೈತ ಮುಖಂಡ ರಾಮಣ್ಣ ಸಾದ್ಯಾಪುರ ಹೇಳಿದರು.
ಯಾದಗಿರಿ ನಗರದಲ್ಲಿ ರಾಜ್ಯ ಸರಕಾರಿ ಎಸ್ಸಿ,ಎಸ್ಟಿ,ಸಮನ್ವಯ ಸಮಿತಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದ ಪ್ರಯುಕ್ತ ರಾಜ್ಯ ಸರಕಾರಿ ಎಸ್ಸಿ,ಎಸ್ಟಿ,ನೌಕರರ ಸಂಘದ ಅಧ್ಯಕ್ಷರಾದ ಆರ್.ಎಂ. ನಾಟೇಕರ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಸೇವಾ ಮನೋಭಾವದ,ಸರಳ ಜೀವಿ ರಂಗಪ್ಪ ನಾಟೇಕಾರ ಎಂದರೆ ತಪ್ಪಾಗಲಾರದು ಅವರು ಯಾವತ್ತೂ ಪ್ರಚಾರ,ಕೀರ್ತಿ ಮತ್ತು ಪ್ರತಿಫಲವನ್ನು ಬಯಸದೆ ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡುವ ವ್ಯಕ್ತಿಯಾಗಿದ್ದಾರೆ. ಇಂಥವರು ಸರಳ ಜೀವನ ಶೈಲಿ, ಪ್ರಾಮಾಣಿಕತೆ,ಸಹನೆ ಮತ್ತು ಸಹಕಾರ ಮನೋಭಾವವನ್ನು ಹೊಂದಿದ್ದಾರೆ,ಅಲ್ಲದೆ ಬುದ್ಧ,ಬಸವ,ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಮಾಧಾನದ ಮೂಲಕ,ಸಮಾಜಕ್ಕೆ ಕೊಡುಗೆ ನೀಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಸಂಘದ ಪದಾಧಿಕಾರಿ ಶರಣಬಸವ ನುಡಿದರು.
ಕಷ್ಟ ಅಂತ ಇವರ ಹತ್ತಿರ ಬಂದವರಿಗೆ ಕೊಡುಗೆ ದಾನಿಯಾಗಿದ್ದಾರೆ ಹಲವಾರು ಸಂಘ ಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಾರೆ,ಸದಾ ಕನ್ನಡ ನಾಡು ನುಡಿ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ,ಚಂದ್ರಕಾಂತ,ಮಲ್ಲಿಕಾರ್ಜುನ,ಶಿವಕುಮಾರ,ಶಿವಪ್ರಕಾಶ ಹಾಗೂ ಎಸ್ಸಿ.ಎಸ್ಟಿ.ನೌಕರರ ಸಂಘದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು
