ಸೊಳ್ಳೆಗಳ ಕಾಟ ನಿಯಂತ್ರಿಸಲು - ಶಾಂತಗೌಡ ಪಾಟೀಲ್ ಆಗ್ರಹ

ಸೊಳ್ಳೆಗಳ ಕಾಟ ನಿಯಂತ್ರಿಸಲು - ಶಾಂತಗೌಡ ಪಾಟೀಲ್ ಆಗ್ರಹ
ಶಹಪುರ : ತಾಲೂಕಿನ ನಾಗನಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸೈದಾಪುರ, ಗಂಗನಾಳ,ದರಿಯಾಪುರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ರಾತ್ರಿಗುತಿದ್ದಂತೆ ಸೊಳ್ಳೆಗಳ ಕಾಟ ಮಿತಿಮೀರಿದ್ದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕೆಂದು ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರ ಮಹಾಮಂಡಳದ ನಿರ್ದೇಶಕರಾದ ಶಾಂತಗೌಡ ಪಾಟೀಲ್ ಆಗ್ರಹಿಸಿದ್ದಾರೆ.
ಸೊಳ್ಳೆ ಕಡಿತದಿಂದ ಡೆಂಗ್ಯೂ ಜ್ವರ ಹರಡುವ ಬೀತಿ ಜನರಲ್ಲಿ ಕಾಡುತ್ತಿದ್ದು,ವಿಶ್ವದಾದ್ಯಂತ 2500 ಮಿಲಿಯನ್ ಜನರು ಸೋಂಕಿಗೆ ಪ್ರತಿ ವರ್ಷ ಒಳಗಾಗುತ್ತಿದ್ದಾರೆ ಮತ್ತು 100 ಕ್ಕೂ ಹೆಚ್ಚು ದೇಶಗಳಲ್ಲಿ ವರ್ಷಕ್ಕೆ 20 ಮಿಲಿಯನ್ ಪ್ರಕರಣಗಳು ದಾಖಲಾಗುತ್ತಿವೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ರೈತರು ಭತ್ತ ನಾಟಿ ಮಾಡಿದ್ದರೆ ಸಲುವಾಗಿ ವಿಪರೀತ ಸೊಳ್ಳೆಗಳ ಕಾಟದಿಂದ ಜನ ಮತ್ತು ಜಾನುವಾರಗಳು ತುಂಬಾ ತೊಂದರೆ ಅನುಭವಿಸುವಂಥಾಗಿದೆ ಇದರಿಂದ ಸಾರ್ವಜನಿಕರು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದು ಕೂಡಲೇ,ಇದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಡಿವಾಣ ಹಾಕಿ ಸೊಳ್ಳೆಗಳ ನಾಶಕ್ಕೆ ಮುಂದಾಗಿ ಔಷಧಿ (ಡಿಡಿಟಿ) ಸಿಂಪರಣೆ ಮಾಡಿ ಸೊಳ್ಳೆ ಮುಕ್ತ ಗ್ರಾಮಗಳನ್ನಾಗಿ ಮಾರ್ಪಾಡು ಮಾಡಬೇಕೆಂದು ಎಲ್ಲಾ ಗ್ರಾಮಗಳ ಸಾರ್ವಜನಿಕ ಪರವಾಗಿ ಮನವಿ ಮಾಡಿಕೊಂಡರು.