ಭಕ್ತಂಪಳ್ಳಿ ಶಾಲೆಗೆ ಉಚಿತ ಶಾಲಾ ಬ್ಯಾಗ್
ಭಕ್ತಂಪಳ್ಳಿ ಶಾಲೆಗೆ ಉಚಿತ ಶಾಲಾ ಬ್ಯಾಗ್
ಚಿಂಚೋಳಿ - ಭಕ್ತಂಪಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತಾಲೂಕ ಚಿಂಚೋಳಿ ಇಲ್ಲಿ ಅಭ್ಯಾಸ ಮಾಡುತ್ತಿರುವ ಮೂವತ್ತೆಂಟು ಮಕ್ಕಳಿಗೆ ನೋವೆಲ್ ಹೋಪ್ ಫೌಂಡೇಶನ್ ಸಂಸ್ಥೆ ಬೆಂಗಳೂರು ಇವರ ವತಿಯಿಂದ ಗುರುವಾರ ಉಚಿತ ಶಾಲಾ ಬ್ಯಾಗ್ ವಿತರಿಸಲಾಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀಮತಿ ಶಾಂತಮ್ಮ, ಸದಸ್ಯರಾದ ನರಸರೆಡ್ಡಿ ಗೌರವರ್ , ಕೃಷ್ಣರಾಜ ಮುನ್ನೂರ್ ಅಲ್ಲದೆ ಎಸ್ಡಿಎಂಸಿ ಅಧ್ಯಕ್ಷರಾದ ಬಸವರಾಜ ಬೊಂಬೈ, ಮಾಜಿ ಅಧ್ಯಕ್ಷರಾದ ಇಮಾಮಸಾಬ ಬಳಗಾರ, ಮು ಗು ಬಸವರಾಜ ಐನೋಳಿ,ಅತಿಥಿ ಶಿಕ್ಷಕರಾದ ಆಶಿಫ್ ಪಟೇಲ್ ಹಾಗೂ ಶ್ರೀಮತಿ ನಾಗಮ್ಮ ಶರಣರೆಡ್ಡಿ ಶೇರಿಕಾರ್ ಉಪಸ್ಥಿತರಿದ್ದರು. ಶಾಲಾ ಬ್ಯಾಗ್ ಗಳು ಭಕ್ತಂಪಳ್ಳಿ ಶಾಲೆಗೆ ತರುವಲ್ಲಿ ಸಹಕರಿಸಿದ ಶ್ರೀಮತಿ ಸುನಂದಾ ವಿಜಯಕುಮಾರ ಚೌದ್ರಿ ಹಾಗೂ ಶ್ರೀಮತಿ ಅಶ್ವಿನಿ ಅನೀಲಕುಮಾರ ಹೂಗಾರ ಅವರ ಸೇವೆಯನ್ನು ಸ್ಮರಿಸಲಾಯಿತು.
