ಅನನ್ಯ ವಿದ್ಯಾ ದೇಗುಲ ಹಾಗೂ ಆಚಾರ್ಯಶ್ರೀ ಪ್ರಶಸ್ತಿಗೆ ವಿ ಜಿ ಪದವಿ ಪೂರ್ವ.ಕಾ ಉಪನ್ಯಾಸಕಿ - ಶ್ರೀಮತಿ ರಷ್ಮೀ ಅಂಟೂರಮಠ ಆಯ್ಕೆ
ಅನನ್ಯ ವಿದ್ಯಾ ದೇಗುಲ ಹಾಗೂ ಆಚಾರ್ಯಶ್ರೀ ಪ್ರಶಸ್ತಿಗೆ ವಿ ಜಿ ಪದವಿ ಪೂರ್ವ.ಕಾ ಉಪನ್ಯಾಸಕಿ - ಶ್ರೀಮತಿ ರಷ್ಮೀ ಅಂಟೂರಮಠ ಆಯ್ಕೆ
ಕಲಬುರಗಿ ನಗರದ ಪ್ರತಿಷ್ಠಿತ ಹೈ.ಕ.ಶಿ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಮತಿ ರಷ್ಮೀ ಅಂಟೂರಮಠ ಅವರಿಗೆ ಬಸವ ಪರಿಷತ್ ಬೆಂಗಳೂರು ವತಿಯಿಂದ ಉತ್ಕೃಷ್ಟ ಶಿಕ್ಷಣ ಸಂಸ್ಥೆ ಹಾಗೂ ಅತ್ಯುತ್ತಮ ಸಾಧನೆಗೈದ ಬೋಧಕರನ್ನು ಗುರುತಿಸಿ ಗೌರವಿಸುವ ಅನನ್ಯ ವಿದ್ಯಾದೇಗುಲ ಹಾಗೂ ಆಚಾರ್ಯಶ್ರೀ
ಪ್ರಶಸ್ತಿ ಲಭಿಸಿದೆ. ದಿನಾಂಕ ೨೬.೧೦.೨೦೨೪ ರಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪ್ರಾಂಗಣ, ಅರಮನೆ ರಸ್ತೆ ಯಲ್ಲಿ ಆಯೋಜಿಸಲಾದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶ್ರೀಮತಿ ರಷ್ಮೀ ಅಂಟೂರಮಠ ಅವರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಉಪನ್ಯಾಸಕರಾದ ಶ್ರೀಮತಿ ರಷ್ಮೀ ಅಂಟೂರಮಠ ಅವರ ಸಾಧನೆಗೆ ಎಚ್‌ಕೆಇ ಸೊಸೈಟಿ ಅಧ್ಯಕ್ಷರಾದ ಶ್ರೀ ಶಶಿಲ್ ಜಿ ನಮೋಶಿ, ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯ ಚಿಂಚೋಳಿ, ಜಂಟಿ ಕಾರ್ಯದರ್ಶಿ ಕೈಲಾಸ ಪಾಟೀಲ ಹಾಗೂ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರಾದ ಡಾ. ಮೋಹನರಾಜ ಪತ್ತಾರ ಹಾಗೂ ಎಲ್ಲಾ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿದರು ಎಂದು ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪತ್ರಿಕಾ ಮಾಧ್ಯಮದ ಸಂಯೋಜಕರಾದ ಶ್ರಿ. ಐ. ಕೆ. ಪಾಟೀಲ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.