ಸಮುದಾಯದತ್ತ ಕಾರ್ಯಕ್ರಮ – 2025

ಸಮುದಾಯದತ್ತ ಕಾರ್ಯಕ್ರಮ – 2025

ಸಮುದಾಯದತ್ತ ಕಾರ್ಯಕ್ರಮ – 2025

ಕಲಬುರ್ಗಿ, ಏಪ್ರಿಲ್ 8: ಸೇಡಂ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜನತಾ ಕಾಲೋನಿ ಹೂಡಾ (ಎಂ), ಸೇಡಂದಲ್ಲಿ "ಸಮುದಾಯದತ್ತ - 2025" ಕಾರ್ಯಕ್ರಮವು ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ 9:30ಕ್ಕೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರು ಬನಶಂಕರ ಸರ್, ಆರ್.ಪಿ ಉಮಾಕಾಂತ ಬಿ ಸರ್, ಶಿಕ್ಷಕಿಯರಾದ ಕೌಸರಬೇಗಂ, ಅಂಬಿಕಾ ಗುಡುಗುಂಟಿ, ಜ್ಯೋತಿ ಉಮಾರಾಣಿ ಮತ್ತು ಕೋಕಿಲ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಕ್ಷಕರ ವೈಯಕ್ತಿಕ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, 1ರಿಂದ 7ನೇ ತರಗತಿಯ ಪರೀಕ್ಷಾ ವಹಿಗಳನ್ನು ಪರಿಶೀಲಿಸಲಾಯಿತು. ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳ ಪಠ್ಯವನ್ನು ಓದುವಂತೆ ಮಾರ್ಗದರ್ಶನ ನೀಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ:

ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರೆದವು. ಪ್ರಾರ್ಥನೆಗೀತೆವನ್ನು ಲಕ್ಷ್ಮೀ ಹಾಗೂ ಸಂಗಡಿಗರು ಹಾಡಿದರು. ವಿಶೇಷ ಅಗತ್ಯವಿರುವ ಮಾರುತಿ ಇಂಗ್ಲಿಷ್ ವರ್ಣಮಾಲೆಯನ್ನು ಸರಿಯಾಗಿ ಜೋಡಿಸಿ ಗಮನಸೆಳೆದರು. ತಿಮ್ಮಯ್ಯ 2ರಿಂದ 20ರ ವರೆಗೆ ಮಗ್ಗಿ ಓದಿದನು. ಅನೀಲ್ ಮತ್ತು ಸಂಗಡಿಗರು ಹಿಂದಿ ಗೀತೆ ಹಾಡಿದರು. ನಲಿ ಕಲಿ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆಯನ್ನು ಓದಿ  ಸಲ್ಲಿಸಿದರು. ಬಸವರಾಜ ಹಾಗೂ ಅನೀಲ್ ನೃತ್ಯ ಪ್ರದರ್ಶನದ ಮೂಲಕ ನೆರೆದವರ ಗಮನ ಸೆಳೆದರು. 

ಕಾರ್ಯಕ್ರಮದ ನಿರೂಪಣೆಯನ್ನು ಜ್ಯೋತಿ ಉಮಾರಾಣಿ ಮಾಡಿದರು. ಸಮುದಾಯದತ್ತ ಮೇಲ್ವಿಚಾರಕಿ ಚಂದ್ರಕಲಾ ಎಂ. ಪಾಟೀಲ್ ಅವರು ಸಮುದಾಯದತ್ತದ ಮಹತ್ವದ ಬಗ್ಗೆ ಮಾತನಾಡಿದರು. ಮುಖ್ಯ ಗುರು ಬನಶಂಕರ ಸರ್ ಮಾತನಾಡುತ್ತಾ, ಶಾಲೆಗೆ ಮಾರ್ಗದರ್ಶನ ನೀಡಿದ ಪಾಟೀಲ್ ಮೇಡಂಗೆ ಧನ್ಯವಾದ ವ್ಯಕ್ತಪಡಿಸಿದರು ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲಾತಿಗಳನ್ನು ಸುಧಾರಿಸುವುದಾಗಿ ಹೇಳಿದರು.

ಅಂಬಿಕಾ ಗುಡುಗುಂಟಿ ಶಿಕ್ಷಕಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿದ ಪಾಟೀಲ್ ಮೇಡಂ ಅವರ ಸ್ಪೂರ್ತಿದಾಯಕ ಮಾತುಗಳು ಬಹುಮಾನಾರ್ಹವಾದವು ಎಂದು ಅಭಿಪ್ರಾಯಪಟ್ಟರು. ಎಸ್‌ಡಿಎಂಸಿ ಪೋಷಕರ ಸಹಭಾಗಿತ್ವ ಹೆಚ್ಚಿಸಲು ಮುಂದಿನ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಗಮನ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ವಂದನಾರ್ಪಣೆಯನ್ನು ಶಿಕ್ಷಕಿ ಕೋಕಿಲ ಅವರು ನೆರವೇರಿಸಿದರು.

ವರದಿ: ಚಂದ್ರಕಲಾ ಎಂ. ಪಾಟೀಲ್  ಶಿಕ್ಷಕರು, ಕಲಬುರ್ಗಿ