ಲೋಕಕಲ್ಯಾಣಕ್ಕಾಗಿ ಮೌನಾನುಷ್ಟಾನ ಪ್ರಾರಂಭ :..
ಲೋಕಕಲ್ಯಾಣಕ್ಕಾಗಿ ಮೌನಾನುಷ್ಟಾನ ಪ್ರಾರಂಭ :..
ಶಹಾಬಾದ : - ತಾಲೂಕಿನ ಭಂಕೂರ ಗ್ರಾಮದ ಬಸವನಗರದ ಮಹಾದೇವ ಮಾನಕರ ಅವರ ಮನೆಯಲ್ಲಿ ಶಹಾಬಾದ್‌ನ ಎರಡು ಕಾರ್ಖಾನೆ ಪುನರಾರಂಭ ಹಾಗೂ ಲೋಕ ಕಲ್ಯಾಣಕ್ಕಾಗಿ ಶಿರಗುಪ್ಪಾದ ಬಸವತತ್ವ ಚಿಂತಕ ಬಸವರಾಜ ವೆಂಕಟಾಪುರ ೨೧ ದಿನಗಳ ಕಾಲ ಮೌನಾನುಷ್ಠಾನವನ್ನು ಭಾನುವಾರದಿಂದ ಕೈಗೊಂಡರು.
ಬೆಳಗ್ಗೆ ಇಲ್ಲಿಯ ಬುತ್ತಿ ಬಸವಲಿಂಗೇಶ್ವರ ದೇವಸ್ಥಾನದಿಂದ ಬಸವಣ್ಣನವರ ಮೂರ್ತಿ, ವಚನ ಗಾಯನದೊಂದಿಗೆ ಮೆರವಣಿಗೆ ಮೂಲಕ ಅನುಷ್ಠಾನ ಸ್ಥಳಕ್ಕೆ ಪೂಜ್ಯರನ್ನು ಕರೆದುಕೊಂಡು ಹೋಗಲಾಯಿತು. ಬೆಳಗ್ಗೆ ೧೧ ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಪ್ರಸಾದದೊಂದಿಗೆ ಅನುಷ್ಠಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬಸವ ಸಮಿತಿ ಸದಸ್ಯರಾದ ಅಮೃತ ಮಾನಕರ್, ನೀಲಕಂಠ ಮುದುಗೋಳಕರ, ರೇವಣಸಿದ್ದ ಮುಸ್ತಾರಿ, ಅಮರಪ್ಪ, ಚಂದ್ರಕಾಂತ ಅಲ್ಮಾ ಹಾಗೂ ಅಕ್ಕನ ಬಳಗದ ಸದಸ್ಯರು ಪಾಲ್ಗೊಂಡಿದ್ದರು. ಡಿ.೨೮ಕ್ಕೆ ಮೌನಾನುಷ್ಠಾನದ ಮಹಾಮಂಗಲ ನಡೆಯಲಿದೆ.
ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ