ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಮೂಲಾಧಾರ: ಡಾ. ಶಿವರಂಜನ ಸತ್ಯಂಪೇಟೆ

ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಮೂಲಾಧಾರ: ಡಾ. ಶಿವರಂಜನ ಸತ್ಯಂಪೇಟೆ

ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಮೂಲಾಧಾರ: ಡಾ. ಶಿವರಂಜನ ಸತ್ಯಂಪೇಟೆ

ಕಲಬುರಗಿ: ಇಂದಿನ ಕಾಲದಲ್ಲಿ ಪತ್ರಿಕೋದ್ಯಮದ ಮಹತ್ವವನ್ನು ಕಡೆಗಣಿಸುವಂತಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ಇದು ಸಮಾಜದಲ್ಲಿ ಮತ್ತು ಪ್ರಪಂಚದಾದ್ಯಂತ ನಡೆಯುತ್ತಿರುವ ಘಟನೆಗಳ ಬಗ್ಗೆ ಜನರಿಗೆ ತಿಳಿಹೇಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಡಾ. ಶಿವರಂಜನ ಸತ್ಯಂಪೇಟೆ ಯವರು ಹೇಳಿದರು. 

ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಆರಂಭಿಸಲಾದ "ಪತ್ರಿಕೋದ್ಯಮ" ವ್ಯಾಲ್ಯೂ ಅಡೆಡ್ ಕೋರ್ಸ್ ಅನ್ನು ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು ಇಂದಿನ ಡಿಜಿಟಲ್ ಯುಗವು ಮುಂದುವರೆದಂತೆ, ಪತ್ರಿಕೋದ್ಯಮವು ಕೆಲವು ನಿರ್ಣಾಯಕ ರೂಪಾಂತರಗಳನ್ನು ತನಲ್ಲಿ ಅಳವಡಿಸಿಕೊಂಡಿದೆ ಎಂದು ಹೇಳಿದರು. ಸಂವಿಧಾನದ 4 ನೇ ಅಂಗ ಎಂದೇ ಕರೆಯಲ್ಪಡುವ ಪತ್ರಿಕಾರಂಗ ಇಂದು ಉದ್ಯಮವಾಗಿ ಬೆಳೆದಿದೆ.ಶಾಸಕಾಂಗ,ಕಾರ್ಯಾಂಗ, ನ್ಯಾಯಾಂಗ ಹಾದಿ ತಪ್ಪಿದಾಗ ಸರಿ ದಾರಿಗೆ ತರುವ ಕೆಲಸ ಮಾಡುವ ಪತ್ರಿಕಾ ರಂಗ ಇಂದು ಟಿಆರ್ಪಿ ಗೆ ಬೆನ್ನು ಬೀಳುತ್ತಿರುವದಕ್ಕೆ ಖೇದ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದ ಕಾವಲು ನಾಯಿಯಾಗಿರುವ ಪತ್ರಿಕಾರಂಗ ಇಂದು ಧನಾತ್ಮಕ ವಿಚಾರಗಳಿಗೆ ಮಹತ್ವ ಕೊಡಬೇಕಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ವಹಿಸಿಕೊಂಡು ಪತ್ರಿಕೋದ್ಯಮದ ಕುರಿತು ಆರಂಭವಾದ ಈ ವ್ಯಾಲ್ಯೂ ಅಡ್ಡೆಡ ಕೋರ್ಸ್ ದಿಂದ ವಿದ್ಯಾರ್ಥಿಗಳಿಗೆ ಬಹಳ ಆವಶ್ಯಕವಾದ ಜ್ಞಾನ ದೊರಕಲಿದೆ ಎಂದು ನುಡಿದರು.

ವಿಭಾಗದ ಮುಖ್ಯಸ್ಥರಾದ ಡಾ ಪ್ರೇಮಚಂದ ಚವ್ಹಾಣ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಲಗನ್ನಾಡಿದರು.

ವಿಭಾಗದ ಉಪನ್ಯಾಸಕಿ ಶ್ರೀಮತಿ ಕವಿತಾ ಠಾಕೂರ್ ಅವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ರೀಮತಿ ಸುಷ್ಮಾ ಕುಲಕರ್ಣಿಯವರು ವಂದಿಸಿದರು, ಕುಮಾರಿ ಸಾಕ್ಷಿ ಜೈನ್ ಅವರು ಪ್ರಾರ್ಥನಾ ಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಐ ಕೆ ಪಾಟೀಲ್ ಕಾಲೇಜಿನ ಡಾ. ಮಹೇಶ ಗಂವ್ಹಾರ, ಡಾ. ಮೋಹನರಾಜ ಪತ್ತಾರ, ಶ್ರೀಮತಿ ಶಿವಲೀಲಾ ಧೋತ್ರೆ, ಹಲವಾರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.