ಸರಕಾರಿ ಆಸ್ಪತ್ರೆಗೆ ಲೋಕಾಯುಕ್ತರ ದಿಢೀರ ಭೇಟಿ: ಪರಿಶೀಲನೆ

ಸರಕಾರಿ ಆಸ್ಪತ್ರೆಗೆ ಲೋಕಾಯುಕ್ತರ ದಿಢೀರ ಭೇಟಿ: ಪರಿಶೀಲನೆ

ಸರಕಾರಿ ಆಸ್ಪತ್ರೆಗೆ ಲೋಕಾಯುಕ್ತರ ದಿಢೀರ ಭೇಟಿ: ಪರಿಶೀಲನೆ

ನಾಗರಾಜ್ ದಂಡಾವತಿ ವರದಿ ಶಹಾಬಾದ: ನಗರದ ಸಮುದಾಯ ಆರೋಗ್ಯ ಕೇಂದ್ರ (ಸರಕಾರಿ ಆಸ್ಪತ್ರೆ)ಗೆ ಲೋಕಾಯುಕ್ತ ಡಿವೈಎಸಪಿ ಯಾದಗಿರ ಜೆ.ಎಚ್ ಇನಾಮದಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳವಾರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಸಿಬ್ಬಂದಿ, ಸ್ವಚ್ಚತೆ, ಔಷಧಿಗಳ ಸ್ಟಾಕ್ ಬಗ್ಗೆ ವಿಚಾರಿಸಿದಲ್ಲದೇ ಪರಿಶೀಲನೆ ನಡೆಸಿದರು, ಆಸ್ಪತ್ರೆಯ ಪ್ರತಿ ವಾರ್ಡ್ ಗಳಿಗೆ ತೆರಳಿ ಸರಿಯಾಗಿ ಚಿಕಿತ್ಸೆ ದೊರೆಯುತಿದೆಯೇ, ಶೌಚಾಲಯ, ಊಟದ ವ್ಯವಸ್ಥೆ ಸರಿಯಾಗಿದೆಯೇ?

ಎಂದು ರೋಗಿಗಳಿಂದ ಮಾಹಿತಿ ಪಡೆದುಕೊಂಡರು.

ವೈದ್ಯರ ಬಗ್ಗೆ ವಿಚಾರಿಸಿದರು, ಔಷಧಿಗಳನ್ನು ಹೊರಗೆ ತರಲು ಚೀಟಿ ಬರೆದುಕೊಡುತ್ತಾರ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಆಸ್ಪತ್ರೆಯ ಸ್ವಚ್ಛತೆ ಬಗ್ಗೆ ತಾವೆ ಖುದ್ದಾಗಿ ವೀಕ್ಷಣೆ ಮಾಡಿ ಸಲಹೆ ನೀಡಿದರು.

ಈ ವೇಳೆ ಸ್ಥಳದಲ್ಲಿದ್ದ ಆಸ್ಪತ್ರೆಯ ಡಾ.ಸಂತೋಷ ಪಾಟೀಲ, ಸಂಜಯ ರಾಠೋಡ, ಯೂಸುಫ ನಾಕೇದಾರ ಮತ್ತು ಲೋಕಾಯುಕ್ತದ ಮಲ್ಲಿಕಾರ್ಜನ ಎಚಸಿ, ಮಲ್ಲಿನಾಥ ಪಿಸಿ ಹಾಗು ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.