ಚಿಕ್ಕ ಮಕ್ಕಳಲ್ಲಿ ಕಂಡುಬರುವ ಥೈರಾಯ್ಡ್ ಮೈಕ್ಸಿಡಿಮಾ ಕೋಮಾದ ಯಶಸ್ವಿ ಚಿಕಿತ್ಸೆ

ಚಿಕ್ಕ ಮಕ್ಕಳಲ್ಲಿ ಕಂಡುಬರುವ ಥೈರಾಯ್ಡ್ ಮೈಕ್ಸಿಡಿಮಾ ಕೋಮಾದ ಯಶಸ್ವಿ ಚಿಕಿತ್ಸೆ
ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯು ವೈಧ್ಯರು ಚಿಕ್ಕ ಮಕ್ಕಳಲ್ಲಿ ಕಂಡುಬರುವ ಥೈರಾಯ್ಡ್ ಮೈಕ್ಸಿಡಿಮಾ ಕೋಮಾಕ್ಕೆ ಚಿಕಿತ್ಸೆ ನೀಡಿ ಯಶಸ್ವಿಯಾಗಿದ್ದಾರೆ.
ಇದೊಂದು ಅಸಾಧಾರಣ ಖಾಯಿಲೆ ಯಾಗಿದ್ದು. ಸಾನಿಯಾ ಎಂಬ 6 ವರ್ಷದ ಹೆಣ್ಣು ಮಗು ಪುಣೆ ನಗರದಲ್ಲಿ ಈ ರೋಗದಿಂದ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಅವಳ ಪೋಷಕರು ಅಲ್ಲಿಯ ವೈದ್ಯಕೀಯ ಸಲಹೆಯನ್ನು ತಿರಸ್ಕರಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು.ಅಪಾಯಕಾರಿ ಸ್ಥಿತಿಯಲ್ಲಿದ್ದ ಮಗುವನ್ನು ಅವಳ ಪೋಷಕರು ಬಸವೇಶ್ವರ ಆಸ್ಪತ್ರೆಯ ಚಿಕ್ಕ ಮಕ್ಕಳ ತೀವ್ರ ನಿಗಾ ಘಟಕದಲ್ಲಿ (PICU) ದಾಖಲು ಮಾಡಿದರು. ದಾಖಲಾದ ಮಗುವನ್ನು ಪರೀಕ್ಷಿಸಿದ ಆಸ್ಪತ್ರೆಯ ವೈದ್ಯರು ಆಕೆಯ ರಕ್ತದೊತ್ತಡ ಅತ್ಯಂತ ಕಡಿಮೆಯಿರುವುದನ್ನು ಗಮನಿಸಿದರು.ಇದು ಅತ್ಯಂತ ಅಪಾಯ ಮಟ್ಟಕ್ಕೆ ತಲುಪಿತ್ತು.ಆಕೆಯ ಥೈರಾಯ್ಡ್ ಹಾರ್ಮೋನ್ (TSH) ಮಟ್ಟವು 150 ಕ್ಕೆ ಏರಿಕೆಯಾಗಿ ಥೈರಾಯ್ಡ್ ಮೈಕ್ಸಿಡಿಮಾ ಕೋಮಾ ಎಂಬ ಅಪಾಯಕಾರಿ ಯಾದ ಸ್ಥಿತಿಗೆ ತಲುಪಿ ಮಗು ಕೋಮಾ ಸ್ಥಿತಿಗೆ ಹೋಗಿತ್ತು.
ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯ ವೈದ್ಯರಾದ ಡಾ ಮಹೇಶ್ ಹಾಕ್ಕೇ, ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ ರೂಪಾ ಮಂಗಶೆಟ್ಟಿ,ಡಾ ಬಸವರಾಜ ಪಾಟೀಲ ಅವರೆಲ್ಲರೂ ಆ ಮಗುವಿಗೆ ಸೂಕ್ತ ಚಿಕಿತ್ಸೆಗೆ ಮುಂದಾದರು ಇವರ ಸೂಕ್ತ ಚಿಕಿತ್ಸೆ ಫಲವಾಗಿ ಅವಳಲ್ಲಿ ಸುಧಾರಣೆ ಕಂಡು ಬಂತು ಆರು ದಿನಗಳ ತೀವ್ರ ನಿಗಾ ಬಳಿಕ ಅವಳು ಸಂಪೂರ್ಣ ಗುಣಮುಖವಾಗಿ ಮನೆಗೆ ತೆರಳಿದಳು.
ಈ ಪ್ರಕರಣದಿಂದಾಗಿ ನಮ್ಮ ಭಾಗದಲ್ಲಿ ಚಿಕ್ಕ ಮಕ್ಕಳ ಥೈರಾಯ್ಡ್ ಸಂಭಂದಿತ ಖಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಆಸ್ಪತ್ರೆಯ ಎಂಡೋಕ್ರೈನಾಜಿಲಿಸ್ಟ ಡಾ ಮಹೇಶ್ ಹಾಕ್ಕೇ ಅಭಿಪ್ರಾಯ ಪಡುತ್ತಾರೆ. ಇಂತಹ ಎಲ್ಲ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಲು ಬಸವೇಶ್ವರ ಆಸ್ಪತ್ರೆಯ ವೈದ್ಯರು ಸಮರ್ಥರಾಗಿದ್ದಾರೆ ಎಂದು ಹೇಳಿದರು.
ಇಂತಹ ಅಪಾಯಕಾರಿ ರೋಗಕ್ಕೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ವೈದ್ಯ ತಂಡಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಸಂಚಾಲಕರಾದ ಡಾ ಕಿರಣ್ ದೇಶಮುಖ್, ಹಾಗೂ ಆಡಳಿತ ಮಂಡಳಿ ಸದಸ್ಯರು, ವೈದ್ಯಕೀಯ ಅಧಿಕ್ಷಕರಾದ ಡಾ ಆನಂದ ಗಾರಂಪಳ್ಳಿ ಅಭಿನಂದಿಸಿದ್ದಾರೆ.