ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಣದಿನ
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಣದಿನ
ಕಲಬುರಗಿ: ನಗರದ ಕನ್ನಡ ಭವನದಲ್ಲಿ ಸ್ಲಂ ಜನರ ಸಂಘಟನೆ ಆರ್ ಕೆ ಎಸ್ ಕೆ ಸ್ನೇಹಿತರ ಬಳಗ ಕಲಬುರಗಿ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಣ ದಿನದ ಅಂಗವಾಗಿ ನಗರದ ವಿವಿಧ ಕೊಳಚೆ ಪ್ರದೇಶದ 85ಕ್ಕೂ ಹೆಚ್ಚು ಬಡ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ವಿತರಿಸಲಾಯಿತು. ಮಕ್ತಂಪೂರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರೇಣುಕಾ ಕಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಿವಕುಮಾರ್ ಕಾಂಬಳೆ, ಬಾಬುರಾವ ದಂಡಿನಕರ್, ಅಲ್ಲಮಪ್ರಭು ನಿಂಬರ್ಗಾ, ಅಮರೇಶ್ ಇಟಗಿಕರ, ಮಲ್ಲಿಕಾರ್ಜುನ ಸಿಂಗೆ, ಬ್ರಹ್ಮಾನಂದ ಮಿಂಚಾ, ಮಲ್ಲಿಕಾರ್ಜುನ ಕಾಂಬಳೆ, ಅನಿಲಕುಮಾರ್ ಚಕ್ರ, ಕಿರಣ ತೆಲ್ಲೂರ್ಕರ್, ಶಿವಕುಮಾರ್ ಚಿಂಚೋಳಿ, ಕರಣ್ ಬಂದಾರವಾಡ ಮುಂತಾದವರು ಭಾಗವಹಿಸಿದರು.