ಪಡಿತರ ವಿತರಣೆ ಸರ್ವರ್ ಸಮಸ್ಯೆ ಗ್ರಾಹಕರ ಪರದಾಟ
ಪಡಿತರ ವಿತರಣೆ ಸರ್ವರ್ ಸಮಸ್ಯೆ ಗ್ರಾಹಕರ ಪರದಾಟ
ಚಿತ್ತಾಪುರ: ಅಕ್ಟೋಬರ್ ತಿಂಗಳ ಸಾರ್ವಜನಿಕರ ಆಹಾರ ವಿತರಣೆ ವ್ಯವಸ್ಥೆಯಲ್ಲಿ ಪಡಿತರ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಗಳ ಮುಖಾಂತರ ವಿತರಣೆ ಮಾಡುವುದಕ್ಕಾಗಿ ಸರ್ವರ್ ಸಮಸ್ಯೆ ತುಂಬಾ ಉಂಟಾಗಿದೆ. ಇದರಿಂದ ಗ್ರಾಹಕರು ಪಡಿತರ ಅಂಗಡಿ ಮಾಲೀಕರಿಗೆ ಹಾಗೂ ಸರ್ಕಾರಕ್ಕೆ ಇಡೀ ಶಾಪ ಹಾಕುತ್ತಿದ್ದಾರೆ ಎಂದು ಅಧ್ಯಕ್ಷರು ಚಿತ್ತಾಪುರ ತಾಲೂಕ ಪಡಿತರ ವಿತರಕರ ಸಂಘ ಹಾಗೂ ಕಲಬುರ್ಗಿ ಜಿಲ್ಲಾ ಪಡಿತರ ವಿತರಕರ ಸಂಘದ ಉಪಾಧ್ಯಕ್ಷ ಧನರಾಜ್ ಯಾದವ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಆಹಾರ ಇಲಾಖೆಯವರು ಈ ಮೊದಲು ಎನ್ಐಸಿ ಸರ್ವರ್ ಮುಖಾಂತರ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಆದರೆ ಇಂದು ಹೊಸದಾಗಿ ಕೆ ಎಸ್ ಡಿ ಸಿ ಸರ್ವರ್ ಅಳವಡಿಸಲಾಗಿದೆ. ಈ ಸರ್ವರ್ ಮುಖಾಂತರ ಅಕ್ಟೋಬರ್ ತಿಂಗಳ ಪಡಿತರ ವಿತರಣೆ ಮಾಡಲು ತಿಳಿಸಿದ್ದಾರೆ.
ಆದರೆ ಈ ತಿಂಗಳ 20 ದಿನಗಳು ಕಳೆದಿವೆ. ಕೆ ಎಸ್ ಡಿ ಸಿ ಸರ್ವರ್ ಸರಿಯಾಗಿ ಬರುತ್ತಿಲ್ಲ ಇದರಿಂದ ದಿನಕ್ಕೆ 8 ರಿಂದ 10 ಕಾಡುಗಳನ್ನು ವಿಚಾರಣೆ ಮಾಡಲು ಸಾಧ್ಯವಾಗುತ್ತಿದೆ. ಈ ಮೊದಲು ಏನ್ ಐ ಸಿ ಸರ್ವರ್ ಇದ್ದಾಗ ದಿನಕ್ಕೆ 200 ಕಾಡುಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿತ್ತು. ಈಗ ಸರ್ವರ್ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಆಹಾರ ಧಾನ್ಯ ಪಡೆಯಲು ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು, ವೃದ್ಧರು ಬಿಸಿಲಿನಲ್ಲಿ ನಿಂತು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೂ ಸಾರ್ವಜನಿಕರು ಇಡೀ ಶಾಪ ಹಾಕುತ್ತಿದ್ದಾರೆ. ಇದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರು ತುಂಬಾ ಮನನೊಂದಿದ್ದಾರೆ.
ಸರ್ವರ್ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತಂದರು. ಯಾವುದೇ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಆರೋಪಿಸಿದ್ದರು.
ಇನ್ನೂ ಒಂದು ವಾರದೊಳಗೆ ದೀಪಾವಳಿ ಹಬ್ಬ ಇರುವ ಕಾರಣ ಸಾರ್ವಜನಿಕರಿಗೆ ಪಡಿತರ ವಿತರಣೆ ಮಾಡಲು ಸಮಯ ಬಹಳ ಕಡಿಮೆ ಇದೆ. ಅತಿ ಶೀಘ್ರದಲ್ಲಿ ಸರ್ವರ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಇಲ್ಲದಿದ್ದರೆ ಸಾರ್ವಜನಿಕರು ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರ ವಿರುದ್ಧ ರೊಚ್ಚಿಗೆದ್ದು ಪ್ರತಿಭಟನೆ ಮಾಡುವಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕಾಗಿ ಸಂಬಂಧಿಸಿದ ಆಹಾರ ಮಂತ್ರಿ ಕೆ.ಎಚ್ ಮುನಿಯಪ್ಪ ಅವರು ಹಾಗೂ ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಹಾರ ಇಲಾಖೆ ಆಯುಕ್ತರು ಕಲ್ಬುರ್ಗಿ ಜಿಲ್ಲಾಧಿಕಾರಿಗಳು, ಕಲ್ಬುರ್ಗಿ ಜಿಲ್ಲೆಯ ಆಹಾರ ಇಲಾಖೆ ನಿರ್ದೇಶಕರಗಳಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ತಕ್ಷಣ ಸರ್ವ ಸಮಸ್ಯೆಯನ್ನು ಬಗೆಹರಿಸಿ ಆಹಾರಧಾನ್ಯ ವಿತರಣೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.
ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿ ಮಾಲೀಕರ ಸಮಯಭಾವದಿಂದ ಶೇಕಡ 100 ರಷ್ಟು ಪಡಿತರ ಆಹಾರ ವಿತರಣೆ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ನ್ಯಾಯಬೆಲೆ ಅಂಗಡಿಯ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಂಭವವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಾಗರಾಜ್ ಹೂಗಾರ, ಅಬ್ದುಲ್ ರೆಹಮಾನ್, ಸಂಜೀವ ಕೊಟ್ರಕಿ, ಸಂತೋಷ ಸುಗಂಧಿ, ನಾಗರಾಜ ಚಕ್ಕಡಿ, ಮಲ್ಲಿಕಾರ್ಜುನ ಸುಲಹಳ್ಳಿ ಇದ್ದರು.