ನಗರದಲ್ಲಿಯೇ ಕಚೇರಿಗಳು ನಿರ್ಮಿಸಿ'ಮರಿಯಪ್ಪ ಹಳ್ಳಿ ಆಗ್ರಹಿಸಿದರು.

ನಗರದಲ್ಲಿಯೇ ಕಚೇರಿಗಳು ನಿರ್ಮಿಸಿ'ಮರಿಯಪ್ಪ ಹಳ್ಳಿ ಆಗ್ರಹಿಸಿದರು.

ನಗರದಲ್ಲಿಯೇ ಕಚೇರಿಗಳು ನಿರ್ಮಿಸಿ'ಮರಿಯಪ್ಪ ಹಳ್ಳಿ ಆಗ್ರಹಿಸಿದರು.

ಶಹಾಬಾದ್: 'ತಾಲ್ಲೂಕು ಆಸ್ಪತ್ರೆ ಸೇರಿದಂತೆ ಸರ್ಕಾರಿ ಕಚೇರಿ ಕಟ್ಟಡಗಳನ್ನು ನಗರದಲ್ಲಿನ ಮರಗೋಳ ಕಾಲೇಜು ಬಳಿ ನಿರ್ಮಿಸಬೇಕು' ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

'ನಗರದ ಮರಗೋಳ ಕಾಲೇಜು ಬಳಿ 20 ಎಕರೆ ಸರ್ಕಾರಿ ಜಮೀನು ಲಭ್ಯವಿದೆ. ನಗರದಿಂದ ದೂರವಿರುವ ತರನಳ್ಳಿ ಗ್ರಾಮದ ಹತ್ತಿರ ಇರುವ ತಾಲ್ಲೂಕು ಆಸ್ಪತ್ರೆ ಸೇರಿದಂತೆ ಸರ್ಕಾರಿ ಕಚೇರಿ ಕಟ್ಟಡಗಳಿಗೆ ನಿರ್ಮಿಸುವ ಯೋಚನೆ ಕೈಬಿಡಬೇಕು. ಶಾಸಕರಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ ದಾರಿ ತಪ್ಪಿಸುತ್ತಿದ್ದಾರೆ' ಎಂದು ಹೇಳಿದರು.

'ಒಂದು ವೇಳೆ ನಗರದಿಂದ ದೂರದಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲು ಮುಂದಾದರೆ ಶಹಾಬಾದ್‌ನ ಪ್ರಗತಿಪರ ಹೋರಾಟಗಾರರು ಹಾಗೂ ಜನರನ್ನು ಒಂದುಗೂಡಿಸಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.

ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ