ಮಾನವೀಯತೆ ಮೆರೆದ ಯಡ್ರಾಮಿ ಪಿಎಸ್ಐ ವಿಶ್ವನಾಥ್ ಮುದರೆಡ್ಡಿ: ಸಾರ್ವಜನಿಕರಿಂದ ಮೆಚ್ಚುಗೆ

ಮಾನವೀಯತೆ ಮೆರೆದ ಯಡ್ರಾಮಿ  ಪಿಎಸ್ಐ ವಿಶ್ವನಾಥ್ ಮುದರೆಡ್ಡಿ: ಸಾರ್ವಜನಿಕರಿಂದ ಮೆಚ್ಚುಗೆ

ಮಾನವೀಯತೆ ಮೆರೆದ ಯಡ್ರಾಮಿ  ಪಿಎಸ್ಐ ವಿಶ್ವನಾಥ್ ಮುದರೆಡ್ಡಿ: ಸಾರ್ವಜನಿಕರಿಂದ ಮೆಚ್ಚುಗೆ

ಯಡ್ರಾಮಿ, ಎಪ್ರಿಲ್ 8 (ಯಡ್ರಮ್ಮಿ ಸುದ್ದಿ):  

ಯಡ್ರಾಮಿ ಪಟ್ಟಣದ ಸರ್ದಾರ್ ಶರಣಗೌಡ ವೃತ್ತದಲ್ಲಿ ಇಂದು ಮನುಷ್ಯತ್ವದ ಜೀವಂತ ಉದಾಹರಣೆಯೊಂದು ನೋಡುಗರನ್ನು ಭಾವುಕರನ್ನಾಗಿ ಮಾಡಿತು. ಯತ್ನಾಳ ಗ್ರಾಮದ ಬಡ ಕುಟುಂಬದ ಮಹಿಳೆಯೊಬ್ಬರು ತಮ್ಮ ಮಗುವಿಗೆ ತೀವ್ರ ಜ್ವರ ಬಂದು ತುರ್ತು ಚಿಕಿತ್ಸೆಗಾಗಿ ದಿಕ್ಕು ತಪ್ಪಿದಂತೆ ರಸ್ತೆ ಬದಿಯಲ್ಲಿ ಅಳುತ್ತಾ ಕುಳಿತಿದ್ದರು. 

ಈ ದೃಶ್ಯವನ್ನು ಗಮನಿಸಿದ ಯಡ್ರಾಮಿ ಪೊಲೀಸ್ ಠಾಣಾಧಿಕಾರಿ ವಿಶ್ವನಾಥ್ ಮುದರೆಡ್ಡಿ ತಕ್ಷಣವೇ ಮಹಿಳೆಗೆ ಸಾಂತ್ವನ ಹೇಳಿ, ಚಿಕಿತ್ಸೆಗಾಗಿ ತಮ್ಮ ಸ್ವಂತ ಹಣವನ್ನು ನೀಡಿ ಸಹಾಯ ಮಾಡಿದರು. ಅಲ್ಲದೆ ತಾವು ಸವಾರಿ ಮಾಡುತ್ತಿದ್ದ ಸ್ವಂತ ಕಾರನ್ನು ತುರ್ತುವಾಗಿ ಆ ಮಗುವನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು.

ವಿಶ್ವನಾಥ್ ಮುದರೆಡ್ಡಿಯವರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. "ಪೊಲೀಸ್ ಪದವಿಗೆ ಮಾನವೀಯತೆಯ ಸ್ಪರ್ಶ ನೀಡಿದಂತಾಗಿದೆ ಅವರ ನಡೆ," ಎಂದು ಸ್ಥಳೀಯರು ಪ್ರಶಂಸಿಸಿದ್ದಾರೆ.

ವರದಿ: ಜೆಟ್ಟೆಪ್ಪ ಎಸ ಪೂಜಾರಿ