ವಿದ್ಯಾನಗರದ ಹಿರಿಯ ದಿಗ್ಗಜ ಈರಣ್ಣ ದಸ್ಮಾ ನಿಧನ

ವಿದ್ಯಾನಗರದ ಹಿರಿಯ ದಿಗ್ಗಜ ಈರಣ್ಣ ದಸ್ಮಾ ನಿಧನ

ನಿಧನ ವಾರ್ತೆ : ಈರಣ್ಣ ದಸ್ಮಾ ಇನ್ನಿಲ್ಲ 

ಕಲಬುರಗಿ, ಏಪ್ರಿಲ್ 7 : ವಿದ್ಯಾನಗರ ಕಾಲೋನಿಯ ಹಿರಿಯ ನಾಗರಿಕ ಹಾಗೂ ಸಮಾಜಸೇವಕ ಈರಣ್ಣ ದಸ್ಮಾ (88) ಇಂದು ನಿಧನರಾದರು. ಕಾಲೋನಿಯ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ ದಿಗ್ಗಜರನ್ನು ಕಳೆದುಕೊಂಡು ನಗರವು ಶೋಕಸ್ತಬ್ಧವಾಗಿದೆ.

ಮಾಜಿ ಅಡಿಟ್ ಕೊಆಪರೇಟಿವ್ ಡೆಪ್ಯೂಟಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ ಅವರು, ನಿವೃತ್ತಿಯ ನಂತರ ಕಾಲೋನಿಯ ಅಭಿವೃದ್ಧಿಗಾಗಿ ವಿದ್ಯಾನಗರ ವೆಲ್ಫೇರ್ ಸೊಸೈಟಿಯನ್ನು ಸ್ಥಾಪಿಸಿ, ಮೊದಲ ಅಧ್ಯಕ್ಷರಾಗಿ ನಿರಂತರ 25 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸಮಾಜದಲ್ಲಿ ಪುರಾತನ ಸಂಸ್ಕೃತಿಯ ಬಿಂಬವನ್ನು ಪ್ರತಿಫಲಿಸಿದ ಸಾಧನೆ ಅವರಿಗೆ ಹೆಗ್ಗಳಿಕೆಯಾಗಿದೆ.

ವಚನೋತ್ಸವ ಸಮಿತಿಯ ಸಂಚಾಲಕರಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ವಚನ ಸಾಹಿತ್ಯದ ಬೋಧನೆಗೆ ಹೆಸರಾಗಿದ್ದರು. ಅವರ ಧರ್ಮಪತ್ನಿ ರೇವತಿಬಾಯಿ, ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಇಂದು ರಾತ್ರಿ ಭಜನೆ ಮೂಲಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಅಂತ್ಯಕ್ರಿಯೆ ನಾಳೆ (08-04-2025) ಬೆಳಿಗ್ಗೆ 11 ಗಂಟೆಗೆ ನೆಹರು ಗಂಜ ರುದ್ರಭೂಮಿಯಲ್ಲಿ ಜರುಗಲಿದೆ.

ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಭಗವಂತನು ಶಕ್ತಿ ನೀಡಲಿ ಎಂಬುದು ನಗರದ ಜನತೆಯ ಪ್ರಾರ್ಥಿಸಿದ್ದಾರೆ.

ವರದಿ:ನಾಗರಾಜ್ ದಂಡಾವತಿ