ಪೌರಾಡಳಿತ ಸಚಿವರಿಗೆ ಭೇಟಿ ಮಾಡಿದ ಪುರಸಭೆ ಅಧ್ಯಕ್ಷ ಆನಂಕುಮಾರ್ ಎನ್ ಟೈಗರ್ ಚಿಂಚೋಳಿ ಪುರಸಭೆ ಸಮಗ್ರ ಅಭಿವೃದ್ಧಿಗೆ 20 ಕೋಟಿ ಅನುದಾನ ಬಿಡುಗಡೆಗೆ ಸಚಿವರಿಗೆ ಮನವಿ ಸಲ್ಲಿಕೆ

ಪೌರಾಡಳಿತ ಸಚಿವರಿಗೆ ಭೇಟಿ ಮಾಡಿದ ಪುರಸಭೆ ಅಧ್ಯಕ್ಷ ಆನಂಕುಮಾರ್ ಎನ್ ಟೈಗರ್  ಚಿಂಚೋಳಿ ಪುರಸಭೆ ಸಮಗ್ರ ಅಭಿವೃದ್ಧಿಗೆ 20 ಕೋಟಿ ಅನುದಾನ ಬಿಡುಗಡೆಗೆ ಸಚಿವರಿಗೆ ಮನವಿ ಸಲ್ಲಿಕೆ

ಪೌರಾಡಳಿತ ಸಚಿವರಿಗೆ ಭೇಟಿ ಮಾಡಿದ ಪುರಸಭೆ ಅಧ್ಯಕ್ಷ ಆನಂಕುಮಾರ್ ಎನ್ ಟೈಗರ್ 

ಚಿಂಚೋಳಿ ಪುರಸಭೆ ಸಮಗ್ರ ಅಭಿವೃದ್ಧಿಗೆ 20 ಕೋಟಿ ಅನುದಾನ ಬಿಡುಗಡೆಗೆ ಸಚಿವರಿಗೆ ಮನವಿ ಸಲ್ಲಿಕೆ

ಚಿಂಚೋಳಿ : ಪುರಸಭೆಯ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಕೋರಿ ಪೌರಾಡಳಿತ ಸಚಿವ ರಹಿಂಖಾನ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪುರಸಭೆ ಅಧ್ಯಕ್ಷ ಆನಂದಕುಮಾರ ಎನ್ ಟೈಗರ್ ಬೆಂಗಳೂರು ಅಲ್ಲಿ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. 

ಚಿಂಚೋಳಿ ಪುರಸಭೆ ವಾರ್ಡ್ಗಳು ಹಲವು ಸಮಸ್ಯೆ ಗಳು ಎದುರುಸುತ್ತಿದ್ದು, ಪರಿಹಾರಕ್ಕೆ ಅನುದಾನದ ಕೊರತೆ ಆಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ, ಚರಂಡಿ, ಸಿಸಿ ರಸ್ತೆಗಳು ಸೇರಿದಂತೆ ವಿವಿಧ ಜ್ವಲಂತ್ ಸಮಸ್ಯೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪುರಸಭೆ ಸಮಗ್ರ ಅಭಿವೃದ್ಧಿಗೆ ಕಾರ್ಯಕೈಗೊಳಲು ಅಂದಾಜು 20 ಕೋಟಿ ರು ಅನುದಾನ ಅವಶ್ಯಕತೆ ಇದೆ ಎಂದು ಸಚಿವರಿಗೆ ಅಧ್ಯಕ್ಷ ಟೈಗರ್ ಮನವರಿಕೆ ಮಾಡಿದ್ದು, 

ಅಧ್ಯಕ್ಷರ ಮನವಿಗೆ ಸಚಿವ ರಹೀಮ್ ಖಾನ್ ಮತ್ತು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದು, ಆದಷ್ಟು ಬೇಗ ಅನುದಾನ ಒದಗಿಸುವ ಭರವಸೆಯ ಸ್ಪಂದನೆ ದೊರಕಿದೆ. ಇನ್ನೂ ಪುರಸಭೆಯ ತಾಲೂಕ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಮಕ್ಕಳ ತಜ್ಞ ವೈದ್ಯರು ಇಲ್ಲದೆ ಜನರು ಸಮಸ್ಯೆ ಎದುರುಸುವಂತೆ ಆಗಿದ್ದು, ಕೂಡಲೇ ಚಿಂಚೋಳಿ ತಾಲೂಕ ಆಸ್ಪತ್ರೆಗೆ ಮಕ್ಕಳ ತಜ್ಞ ವೈದ್ಯರನ್ನು ನೇಮಿಸಬೇಕೆಂದು ಆರೋಗ್ಯ ಸಚಿವ ದಿನೇಶ ಗುಂಡೆರಾವ ಅವರನ್ನು ಭೇಟಿ ನೀಡಿ ಮನವಿ ಮಾಡಿಕೊಳಲಾಗಿದೆ ಎಂದು ಅಧ್ಯಕ್ಷ ಆನಂದಕುಮಾರ ಎನ್ ಟೈಗರ್ ಅವರು ಸುದ್ಧಿಗಾರರಿಗೆ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ನಿಂಗಮ್ಮ ಬಿರಾದಾರ, ಯುವ ಮುಖಂಡ ವಿಶ್ವನಾಥ ಧೂಳಪ್ಪ ಹೊಡೆಬೀರನಳ್ಳಿ, ಲೋಕೇಶ ಐನೋಳಿ, ಆನಂದ ಚಿಂತಲ್, ರಾಜಕುಮಾರ ಕೊಳ್ಳೂರ್, ಚಂದು ಪಾಟೀಲ್ ಅವರು ಇದ್ದರು.