ಮಠಾಧೀಶರಿಗೆ ಮಹಾಂತ ಶ್ರೀಗಳು ಆದರ್ಶ : ಸಿದ್ದಲಿಂಗ ಶ್ರೀಗಳು ಅಭಿಮತ

ಮಠಾಧೀಶರಿಗೆ ಮಹಾಂತ ಶ್ರೀಗಳು ಆದರ್ಶ : ಸಿದ್ದಲಿಂಗ ಶ್ರೀಗಳು ಅಭಿಮತ

ನಾಡಿನ ಮಠಾಧೀಶರಿಗೆ ಮಹಾoತ ಶ್ರೀಗಳು ಆದರ್ಶ : ಸಿದ್ದಲಿಂಗ ಶ್ರೀ 

ರಾವೂರ: ಬಸವತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಮಹಾoತ ಜೋಳಿಗೆಯ ಮೂಲಕ ದೇಶ ವಿದೇಶಗಳಲ್ಲಿ ಸಾಮಾಜಿಕ, ವೈಚಾರಿಕ ಕ್ರಾಂತಿಯನ್ನು ಮಾಡುತ್ತಾ ಸ್ವಾಸ್ಥ ಸಮಾಜಕ್ಕೆ ಪ್ರಯತ್ನಿಸಿದ ಇಳಕಲ್ ಚಿತ್ತರಗಿ ಸಂಸ್ಥಾನ ಮಠದ ಪೂಜ್ಯ ಮಹಾoತ ಶಿವಯೋಗಿಗಳ ಕಾರ್ಯ ನಾಡಿನ ಎಲ್ಲ ಮಠಾಧೀಶರಿಗೆ ಮಾದರಿ ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. 

  ಸಮಾಜದಲ್ಲಿ ಇಂದು ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ದುಶ್ಚಟ ಗಳಿಗೆ ಬಲಿಯಾಗಿ ಅವರ ಕುಟುಂಬಗಳು ಅನಾಥವಾಗುತ್ತಿವೆ. ಕುತೂಹಲ, ಒತ್ತಡ, ಸಹವಾಸ ದೋಷದಿಂದ ಪ್ರಾರಂಭವಾಗುವ ಈ ದುಶ್ಚಟಗಳು ನಿಧಾನವಾಗಿ ನಮ್ಮ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತಿವೆ. ಇಂತಹ ಸಂಗತಿಗಳನ್ನು ಮನಗಂಡು ಮಹಾoತ ಶಿವಯೋಗಿಗಳು ಜಾತಿ, ಕುಲ ಗೋತ್ರ ಎನ್ನದೇ ಸಮಾಜದ ಎಲ್ಲಾ ಸ್ಥರದಲ್ಲಿ ಹಬ್ಬಿರುವ ಈ ವ್ಯಾಸನಗಳನ್ನು ದೂರ ಮಾಡಲು ಮಹಾoತ ಜೋಳಿಗೆಯನ್ನು 1970 ರಲ್ಲಿ ಹಾಕಿಕೊಂಡು ಜನರ ಬಳಿಗೆ ಹೋದರು. ಜನಜಾಗೃತಿಯನ್ನು ಮೂಡಿಸಿದರು. ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ ಇವರ ಜನ್ಮದಿನವನ್ನು ವ್ಯಾಸನಮುಕ್ತ ದಿನ ಎಂದು ಘೋಷಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

   ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿದರು. ಮುಖ್ಯಗುರುಗಳಾದ ವಿದ್ಯಾಧರ ಖಂಡಾಳ, ಗಂಗಪ್ಪ ಕಟ್ಟಿಮನಿ, ಶಿಕ್ಷಕರಾದ ಈಶ್ವರಗೌಡ ಪಾಟೀಲ್, ವಿಜಯಲಕ್ಷ್ಮಿ ಬಮ್ಮನಳ್ಳಿ, ಸುಗುಣ ಕೊಳಕೂರ, ಭುವನೇಶ್ವರಿ ಎಂ, ಶಿವಕುಮಾರ್ ಸರಡಗಿ, ಈರಣ್ಣ ಹಳ್ಳಿ, ರೋಹಿತ್ ರಾವೂರಕರ, ಶ್ಯಾಮಸುಂದರ ದೊಡ್ಡಮನಿ, ಗೀತಾ ಜಮಾದಾರ, ಭಾರತಿ ಪರಿಟ್, ರಾಧಾ ರಾಥೋಡ್, ಬಸವರಾಜ, ಅನಿಲ್, ರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.