ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ : ಅಮೃತರಾವ ವಡಗಾಂವೆ
ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ : ಅಮೃತರಾವ ವಡಗಾಂವೆ
ಕಮಲನಗರ: ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹೊಂದಾಣಿಕೆ ಮನೋಭಾವನೆ ಬರುತ್ತದೆ ಎಂದು ಶಾಲಾ ಸಲಹಾ ಸಮಿತಿ ಅಧ್ಯಕ್ಷ ಅಮೃತರಾವ ವಡಗಾಂವೆ ಹೇಳಿದರು.
ಪಟ್ಟಣದ ಶಾಸ್ರೀ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಕ್ರೀಡೋತ್ಸವಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಶಿಕ್ಷಕ ಮತ್ತು ಪಾಲಕರು ಹಾಗೂ ಪೋಷಕರ ಮಧ್ಯೆ ದಿನನಿತ್ಯ ಮಕ್ಕಳು ಓದು, ಬರಹ, ಹೋಮ್‍ವರ್ಕ್ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಒಂದೆರಡು ದಿನವನ್ನು ಕ್ರೀಡಾ ಚಟುವಟಿಗಾಗಿ ಮಿಸಲಿಡುವುದರಿಂದ ಮಕ್ಕಳ ಮನೋಲ್ಲಾಸ ಹೆಚ್ಚುವುದರೊಂದಿಗೆ ಮುಕ್ತವಾಗಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಹೋಮ್‍ವರ್ಕ್ ಒತ್ತಡ ಮರೆಸುತ್ತದೆ. ಕ್ರೀಡೆಗಳು ವಾರ್ಷಿಕ ಒಂದು ಬದಲಾಗಿ ತಿಂಗಳಿಗೊಂದು ಕ್ರೀಡೋತ್ಸವ ಆಯೋಜನೆ ಮಾಡಿದರೆ, ಕ್ರೀಡೆಯ ಬಗ್ಗೆ ಆಸಕ್ತಿ ಕೀಡಾಮನೋಭಾವ ಬರುತ್ತದೆ ಎಂದು ತಿಳಿಸಿದರು.
ಮುಖ್ಯಶಿಕ್ಷಕ ಮನೋಜಮಾರ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ರೀಡೆಯನ್ನು ಸ್ಪಧಾ ಮನೋಭಾವದಿಂದ ಸ್ವೀಕರಿಸಿದಾಗ ಮಾತ್ರ ಸೋಲು-ಗೆಲುವನ್ನು ಸಮಾನವಾಗಿ ಕಾಣಬಹುದು ಎಂದು ಹೇಳಿದರು.
ಈ ಸಂರ್ದಭದಲ್ಲಿ ಸಂಗಮೇಶ ಬಿರಾದಾರ, ಅರವಿಂದ ಚ್ಯಾಂಡೇಶ್ವರೆ, ಮಲ್ಲಿಕಾರ್ಜುನ, ಶ್ರೀದೇವಿ, ದೀಪಮಾಲಾ, ಸಂಗೀತಾ, ರಾಜಶ್ರೀ, ಅಂಬಿಕಾ, ರಾಣಿ, ವಾಣಿಶ್ರೀ ಹಾಗೂ ಮಕ್ಕಳು ಉಪಸ್ಥಿತರಿದ್ದರು.
