ದಲಿತರ ಕೇರಿಗೆ ರಸ್ತೆ ನಿರ್ಮಿಸಿ - ಅಶೋಕ್ ಹೊಸಮನಿ ಆಗ್ರಹ

ದಲಿತರ ಕೇರಿಗೆ ರಸ್ತೆ ನಿರ್ಮಿಸಿ  - ಅಶೋಕ್ ಹೊಸಮನಿ ಆಗ್ರಹ

ದಲಿತರ ಕೇರಿಗೆ ರಸ್ತೆ ನಿರ್ಮಿಸಿ - ಅಶೋಕ್ ಹೊಸಮನಿ ಆಗ್ರಹ

ಶಹಾಪುರ : ತಾಲೂಕಿನ ವಿಭೂತಿಹಳ್ಳಿ ಗ್ರಾಮದ ದಲಿತರ ಕೇರಿಗೆ ಸಂಚರಿಸುವುದಕ್ಕಾಗಿ ದಾರಿ ಇಲ್ಲದೆ ಪರದಾಡುವಂಥಾಗಿದೆ ಕೂಡಲೇ ರಸ್ತೆ ನಿರ್ಮಿಸಿ ಕೊಡಬೇಕು ಎಂದು ದಲಿತ ಸೇನೆಯ ಜಿಲ್ಲಾಧ್ಯಕ್ಷ ಅಶೋಕ್ ಹೊಸಮನಿ ಆಗ್ರಹಿಸಿದ್ದಾರೆ. 

ವಿಭೂತಿಹಳ್ಳಿ ಗ್ರಾಮದಲ್ಲಿ ನಮ್ಮ ಸಮಾಜದ ಜನರು ವಾಸಿಸುವ ಮನೆಗಳಿಗೆ ತಲುಪಲು ಹೊಸ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು,ಆದರೆ ಉದ್ದೇಶಪೂರ್ವಕವಾಗಿ ಅನ್ಯ ಸಮಾಜದ ಜನರು ಕಾಮಗಾರಿಯನ್ನು ತಡೆಹಿಡಿದು ರಸ್ತೆ ನಿರ್ಮಾಣಕ್ಕೆ ಅಡೆತಡೆ ಉಂಟು ಮಾಡಿ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ,

ಹಿಂಗ್ ರಸ್ತೆ ಬಂದ್ ಮಾಡಿದರ ನಾವ್ ಹ್ಯಾಂಗ್ ತಿರುಗಾಡಬೇಕು ನೀವೇ ಹೇಳ್ರಿ ಎಂದು ದಲಿತ ಸಮಾಜದ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನಮ್ಮ ಸಮಾಜದ ಜನರಿಗೆ ನ್ಯಾಯ ಒದಗಿಸಿ ಕೊಡಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ,ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಸ್ವಾತಂತ್ರ್ಯ ಸಿಕ್ಕು 78 ವರ್ಷಗಳು ಗತಿಸಿದರು ದಲಿತರಿಗೆ ಇನ್ನೂ ಸ್ವಾತಂತ್ರ್ಯ ಮರಿಚಿಕೆಯಾಗಿದೆ,ಅವರ ಮನೆಗಳಿಗೆ ತೆರಳಲು ಸರಿಯಾದ ರಸ್ತೆ ಇಲ್ಲ ಹಾಗೂ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದ್ದಾರೆ,ಜಿಲ್ಲಾ ಉಸ್ತುವಾರಿ ಸಚಿವರು,ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರಗತಿಪರ ಚಿಂತಕರು ನ್ಯಾಯ ಒದಗಿಸಿಕೊಡಲು ಮುಂದಾಗ ಬೇಕಿದೆ ಎಂದು ಹೇಳಿದರು.