ಶಹಾಬಾದ್ ನಗರ ಮತ್ತು ಹಳ್ಳಿಗಳ ಮುಖ್ಯ ರಸ್ತೆ ದುರಸ್ತಿಗೆ ಆಗ್ರಹ : ಡಾ.ಮಹೇಂದ್ರ ಕೋರಿ

ಶಹಾಬಾದ್ ನಗರ ಮತ್ತು ಹಳ್ಳಿಗಳ ಮುಖ್ಯ ರಸ್ತೆ  ದುರಸ್ತಿಗೆ ಆಗ್ರಹ : ಡಾ.ಮಹೇಂದ್ರ ಕೋರಿ

ಶಹಾಬಾದ ದಿಂದ ಜೇವರ್ಗಿ ಹಾಗೂ ಕಲಬುರಗಿ ಹೋಗುವ ರಸ್ತೆ ತಗ್ಗು ಬಿದ್ದಿವೆ: ಡಾ.ಮಹೇಂದ್ರ ಕೋರಿ

ಶಹಾಬಾದ್: ಅಪಾಯಕ್ಕೆ ಅವ್ವಾನಿಸುವ ಶಹಾಬಾದ್ ಮುಖ್ಯ ರಸ್ತೆಯ ತುಂಬಾ ತಗ್ಗು ಗುಂಡಿಗಳು ಇವೆ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರು ಗಮನಹರಿಸಿ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಲು ಡಾ.ಮಹೇಂದ್ರ ಕೋರಿ ಒತ್ತಾಯಿಸಿದ್ದಾರೆ.

 ಕಳೆದ ನಾಲ್ಕೂ ಐದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಹಸ್ತವ್ಯವಸ್ಥೆಗೊಂಡಿದ್ದು ಪಟ್ಟಣದ ಆಂತರಿಕ ರಸ್ತೆಗಳು ಸೇರಿದಂತೆ ಹಾಗೂ ಶಹಾಬಾದ ನಗರ, ಗ್ರಾಮೀಣ ಪ್ರದೇಶದ ರಸ್ತೆಗಳೂ ಹದಗೆಟ್ಟಿದ್ದರಿಂದ ಸಂಚಾರಕ್ಕೆ ತೋಡಕುಉಂಟಾಗಿದೆ.  

 ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾ ಅಭ್ಯಾಸಕ್ಕೆ ನಗರ ಪ್ರದೇಶಗಳಿಗೆ ಹೋಗಿ ಬರಲು ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಇರುವುದಿಲ್ಲ . ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ