ಹೆಣ್ಣು- ಗಂಡಿನ ತಾರಮ್ಯ ಬೇಡ- ಡಾ.ರುಮ್ಮಾ

ಹೆಣ್ಣು- ಗಂಡಿನ ತಾರಮ್ಯ ಬೇಡ- ಡಾ.ರುಮ್ಮಾ
ತಳಜಾತಿಯ ಮಕ್ಕಳ ನ್ಯೂನತೆಯ ಮಕ್ಕಳು ಹುಟ್ಟುತ್ತಿದ್ದಾರೆ. ಆಹಾರದ ಸಮಸ್ಯೆ ಕಾಡುತ್ತಿದೆ.
ಮಹಿಳೆಯರು ಪೌಷ್ಟಿಕಾಂಶದ ಕೊರೆತೆಯಿಂದ ಬಳಲುತ್ತಿದ್ದಾರೆ. ಗಂಡು ಮಕ್ಕಳಿಗೆ ಬಾದಮ ಪೌಷ್ಟಿಕಾಂಶದ ಆಹಾರ ಕೊಡುತ್ತೇವೆ ಹೆಣ್ಣುಮಕ್ಕಳು ಈ ಅವಕಾಶದಿಂದ ವಂಚಿತರಾಗಿದ್ದಾರೆ. ಹೆಣ್ಣು ಮತ್ತು ಗಂಡಿನ ನಡುವಿನ ತಾರತಮ್ಯವನ್ನು ನಿವಾರಿಸುವ ಕಡೆಗೆ ಚಿಂತನೆಗಳು ವೇದಿಕೆಯ ಮೂಲಕ ನಡೆಯಬೇಕು ಕನ್ನಡ ಪ್ರಾಧ್ಯಾಪಕರು ಮತ್ತು ಮಹಿಳಾ ಚಿಂತಕಿ ಡಾ.ಶಿವಗಂಗಾ ರುಮ್ಮಾ ನುಡಿದರು.
ರಂಗಾಯಣದಲ್ಲಿ ಸಿರಿಗನ್ನಡ ಜಿಲ್ಲಾ ವೇದಿಕೆ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಸಾವಿತ್ರಿಬಾಯಿ ಫುಲೆ, ಫಾತಿಮಾಶೇಖ್, ರಮಾಬಾಯಿ ಅಂಬೇಡ್ಕರ್ ಕೂಡಲ ಸಂಗಮ ಉತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿ ಮುಂದಿದ್ದಾಳೆಂದರು.
ಅತಿಥಿಗಳಾದ ಡಾ. ಸಂಧ್ಯಾ ಕಾನೇಕರ ಮಹಿಳೆಯರು ಅಪೌಷ್ಟಿಕತೆಯಿಂದ ಮಹಿಳೆ ಬಾಳುತ್ತಿದ್ದಾಳೆ.ಗ್ರಾಮೀಣ ಪ್ರದೇಶದ ಮಹಿಳೆಯರ ಸ್ಥಿತಿ ಶೋಚನೀಯ ಎಂದರು
ವಿಶ್ರಾಂತ ಪ್ರಾಧ್ಯಾಪಕ ಡಾ.ಭಗವಂತಪ್ಪ ಬುಳ್ಳಾ ಮಹಿಳೆಯರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕೆಂದರು.
ಅಧ್ಯಕ್ಷತೆವಹಿಸಿದ ಜಿಲ್ಲಾಧ್ಯಕ್ಷ ಡಾ. ಗವಿಸಿದ್ಧಪ್ಪ ಪಾಟೀಲ ಮಾತನಾಡಿ ಜಾತಿ, ಮತ, ಧರ್ಮ ಮೀರಿ ಶಿಕ್ಷಣ ನೀಡಿದ ಸಾವಿತ್ರಿ ಬಾಯಿ, ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಗೆ ಅದರಲ್ಲೂ ಅಹಿಂದ ವರ್ಗದ ಮಹಿಳೆಗೆ ಶಿಕ್ಷಣ ಕೊಟ್ಟರೆ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿಯಾಗಿದ್ದವರು ಫಾತಿಮಾಶೇಖ್ ಮತ್ತು ರಮಾಬಾಯಿ ಶಿಕ್ಷಕಿ ಆಗದಿದ್ದರೂ ಸಹಿತ ಅಂಬೇಡ್ಕರ್ ಅವರಿಗೆ ಶಿಕ್ಷಣ ಕಲಿಯಲು ಪ್ರೇರಕರು. ವಿದ್ಯಾರ್ಥಿಗಳಿಗೆ ವಸತಿ ನಿಲಯದ ಊಟವಿಲ್ಲದಾಗ ಚಿನ್ನದ ಬಳೆ ಕೊಟ್ಟು ಶಿಕ್ಷಣಕ್ಕೆ ಧಾರೆ ಎರೆದವರು. ಅವರ ಸಂಗಮ ಕೂಡಲಸಂಗಮವಾಗಿದೆ ಎಂದರು.
ಗ್ರೇಡ್-೧ ಅಧೀಕ್ಷಕ ಡಾ. ಲೋಕೇಶ್ ಶ್ರೀಚಂದ, ವಾಣಿಜ್ಯತೆರಿಗೆ ಅಧಿಕಾರಿ ಡಾ.ಅಂಬಾದಾಸ ಕಾಂಬಳೆ ವೇದಿಕೆಯಲ್ಲಿ ಉಪಸ್ಥಿತಿ ಇದ್ದರು. ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಡಾ.ವಿಶಾಲಾಕ್ಷಿ ಕರಡ್ಡಿ ಮತ್ತು ಡಾ.ಸಂಗೀತಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಪ್ರಶಸ್ತಿ ಪುರಸ್ಕೃತರು:
ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕೃತರು: ಡಾ. ಸುನೀತಾ ಕಾಂಬಳೆ, ಡಾ. ಸಾಕೇರಾ ತನ್ವೀರ, ಗೋದಾವರಿ ಬಿ.ಪಾಟೀಲ, ಡಾ.ಅಕ್ಕಮ್ಮ ಹೊನ್ನಳ್ಳಿ, ಗಿರಿಜಾ ಪಟ್ಟಣಶೆಟ್ಟಿ, ವಿಜಯಲಕ್ಷ್ಮಿ ಪಾಟೀಲ, ಡಾ.ಅಂಜನಾ ಜೋಶಿ, ಡಾ.ಕರುಣಾ ತಂಬಾಕೆ, ಡಾ.ನೀತಾ ನೀಲಳ್ಳೆ, ಡಾ.ಅರುಣಾ ತೆಂಗಳೆ, ಡಾ.ಬಭೀತಾ ಫಂಡ, ಡಾ.ಸ್ಮಿತಾ ವಲ್ಲ್ಯಾಪುರ, ಡಾ.ಭಾರತಿ ಪಾಟೀಲ,
ಫಾತಿಮಾ ಶೇಖ್ ಪ್ರಶಸ್ತಿ ಪುರಸ್ಕೃತರು:
ಡಾ.ಚಂದ್ರಕಲಾ ಬಿದರಿ, ಗೀತಾರಾಣಿ ಐನೊಳ್ಳಿ, ಡಾ.ಕೌಸರ್
ಫಾತಿಮಾ, ಮಹಾದೇವಿ ಬಂಧು, ಡಾ.ಸವಿತಾ ಮಾಳಗೆ, ಡಾ.ಸುಜಾತಾ ಕಾಂಬಳೆ, ಡಾ.ಸಂಗೀತಾ ಸೈದಾಪುರ, ಫರವಿನ್ ನವಲ್ದಾರ, ಡಾ.ಕಾವೇರಿ, ಡಾ.ಕಾಶಮ್ಮ, ಡಾ.ರುಕ್ಮಣಿಬಾಯಿ
ರಮಾಬಾಯಿ ಪ್ರಶಸ್ತಿ ಪುರಸ್ಕೃತರು:
ರಾಖಿ ಪವಾರ, ಸುಜಾತ ಮಾಜಿಗೌಡರ, ಡಾ.ಮೀರಾಬಾಯಿ ಡಾ.ವಿದ್ಯಾ ಮಳ್ಳೂರು, ಅನುರಾಧಾ ಬಂಗಾರಿ, ಗೀತಾ ಹೊಸಮನಿ, ಶೈಲಜಸ ಕಮಲಾಪೂರ, ಡಾ.ಶೃತಿ ದೊಡ್ಡಮನಿ, ಡಾ.ಶ್ವೇತಾ ವಡ್ಡನಕೇರಿ, ಡಾ.ಮಮ್ಮಾದೇವಿ,
ನಂದಾ ಎಲಗೊಡ, ಮಂಜುಳಾ ಹೊನಿ ಅವರಿಗೆ ಪ್ರದಾನ ಮಾಡಲಾಯಿತು.
ಕಿರಣ ಪಾಟೀಲ ಅವರಿಂದ ಗೀತಗಾಯನ, ಪ್ರಾರ್ಥನೆ,; ಡಾ.ಸಿದ್ಧಪ್ಪ ಹೊಸಮನಿ ಸ್ವಾಗತ, ಡಾ. ರಾಜಕುಮಾರ ಮಾಳಗೆ, ಡಾ.ಶೀಲಾದೇವಿ ಎಸ್.ಬಿರಾದಾರ ನಿರೂಪಿಸಿದರು. ಡಾ.ಚಿದಾನಂದ ಕುಡ್ಡನ್ ವಂದಿಸಿದರು.
ಡಾ.ಶರಣಪ್ಪ ಸೈದಾಪೂರ, ಡಾ.ರಾಜಕುಮಾರ ಧುಮ್ಮನಸೂರು, ಬಸವರಾಜ ಐನೊಳ್ಳಿ, ಡಾ.ಕೆ.ಎಸ್.ಬಂಧು, ಮನೋಹರ ಮರಗುತ್ತಿ, ಆಕಾಶ ತೆಗನೂರ, ಡಾ.ಶರಣಬಸಪ್ಪ ವಡ್ಡನಕೇರಿ, ಡಾ.ಮಹಾದೇವ ಪೂಜಾರಿ, ಡಾ.ಶಿವಪುತ್ರ ಹೊಳ್ಕರ್, ಶೋಭಾದೇವಿ ಚಕ್ಕಿ ಇತರರು ಇದ್ದರು.