ವಿಶ್ವ ವಿಕಲಚೇತನ ದಿನಾಚರಣೆಯಲ್ಲಿ ಸಾಧನ–ಸಲಕರಣೆ ವಿತರಿಸಿದ ಜಮಖಂಡಿ

ವಿಶ್ವ ವಿಕಲಚೇತನ ದಿನಾಚರಣೆಯಲ್ಲಿ ಸಾಧನ–ಸಲಕರಣೆ ವಿತರಿಸಿದ ಜಮಖಂಡಿ

ವಿಶ್ವ ವಿಕಲಚೇತನ ದಿನಾಚರಣೆಯಲ್ಲಿ ಸಾಧನ–ಸಲಕರಣೆ ವಿತರಿಸಿದ ಜಮಖಂಡಿ

ಕಲಬುರಗಿ: ನಗರದ ಬಿಆರ್‌ಸಿ ದಕ್ಷಿಣ ವಲಯ ಕೇಂದ್ರದಲ್ಲಿ ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ್ ಜಮಖಂಡಿ ಅವರು ಪಂಡಿತ್ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅವರು ಮಾತನಾಡಿ, “ವಿಶೇಷ ಚೇತನ ಮಕ್ಕಳು ಸಮಾಜದ ಅವಿಭಾಜ್ಯ ಅಂಗ. ಇವರ ಸಾಮರ್ಥ್ಯವನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವುದು ನಮ್ಮ ಜವಾಬ್ದಾರಿ. ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ದಾಖಲಿಸಿ, ಸರ್ಕಾರದಿಂದ ಲಭ್ಯವಿರುವ ಎಲ್ಲಾ ಸುಲಭ ಸೌಲಭ್ಯ ಹಾಗೂ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡರೆ, ಮಕ್ಕಳ ಭವಿಷ್ಯ ಇನ್ನಷ್ಟು ಭದ್ರವಾಗುತ್ತದೆ,”ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಕಲಚೇತನ ಮಕ್ಕಳ ಶಿಕ್ಷಣ ಮತ್ತು ದೈನಂದಿನ ಬದುಕಿಗೆ ಸಹಾಯಕವಾಗುವ ಸಾಧನ–ಸಲಕರಣೆಗಳನ್ನು ಜಮಖಂಡಿ ಅವರಿಂದ ವಿತರಿಸಲಾಯಿತು. ಮಕ್ಕಳು ಹಾಗೂ ಪಾಲಕರು ಈ ಸಹಕಾರಕ್ಕೆ ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ನಾಯ್ಕರ್ ವೀಣಾ, ಉಮಾ ಅಂಜುಮ್, BIERT ಸಿದ್ದಾರಾಮ ರಾಜಮಾನೆ, ಮಂಜುಳಾದೇವಿ, ಸುಮನ್ ಸೇರಿದಂತೆ ಬಿ.ಆರ್‌.ಸಿ, ಸಿ.ಆರ್.ಪಿ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವಿಶೇಷ ಚೇತನ ಮಕ್ಕಳಿಗೆ ಸಮಾಜದ ಎಲ್ಲಾ ವಲಯಗಳಿಂದ ಬೆಂಬಲ ದೊರೆತರೆ, ಅವರ ಪ್ರತಿಭೆಗೆ ಬೇಕಾದ ವೇದಿಕೆ ಸಿಗುತ್ತದೆ ಎಂಬ ಸಂದೇಶವನ್ನು ಈ ಕಾರ್ಯಕ್ರಮ ನೀಡಿತು.