ಮಾರ್ಚ್ 8 ರಂದು ಡಾ. ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ

ಮಾರ್ಚ್ 8 ರಂದು ಡಾ. ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ
ಕಲಬುರಗಿ: ಹಸಿರು ಕ್ರಾಂತಿ ಹರಿಕಾರರು ಭಾರತದ ಮಾಜಿ ಉಪ ಪ್ರಧಾನಿ ದೀನ ದಲಿತರ ಆಶಾಕಿರಣರಾದ ಡಾ. ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತೋತ್ಸವದ ಅಂಗವಾಗಿ ಮಾರ್ಚ್ 8 ರಂದು ಶನಿವಾರ ಬೆಳಗ್ಗೆ 10.ಕ್ಕೆ ಕಾಳಗಿಯ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ಹಸಿರು ಕ್ರಾಂತಿ ಹರಿಕಾರರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜಯಂತೋತ್ಸವ ಕಾಳಗಿ ತಾಲೂಕಾ ಅಧ್ಯಕ್ಷ ರವಿ ಸಿಂಗೆ ಅರಣಕಲ್ ತಿಳಿಸಿದ್ದಾರೆ. ಈ ಸಭೆಯಲ್ಲಿ ಜಯಂತೋತ್ಸವದ ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳಿಗೆ ನೇಮಕ ಮಾಡಲಾಗುವುದು.ಸಮಾಜದ ಹಿರಿಯ ಮುಖಂಡರು , ಹೋರಾಟಗಾರರು, ಮಾದಿಗ ಸಮಾಜದ ಎಲ್ಲಾ ಕುಲಬಾಂಧವರು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.