ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ನರೇಗಲ್ಲದಲ್ಲಿ ಆಚರಣೆ
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ನರೇಗಲ್ಲದಲ್ಲಿ ಆಚರಣೆ
ನರೇಗಲ್ಲ: ದೇಶದ ಸ್ವಾತಂತ್ರ್ಯ ಹೋರಾಟದ ಪ್ರೇರಕ ಶಕ್ತಿ, ಶೌರ್ಯಮೂರ್ತಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಇಂದು ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ನರೇಗಲ್ಲದಲ್ಲಿ ಭಾವಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯೆಯಾದ ಶ್ರೀಮತಿ ಬಿ. ಜಿ. ಶಿರ್ಸಿ ವಹಿಸಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಶ್ರೀಮತಿ ವಿ. ಪಿ. ಗ್ರಾಮಪುರೋಹಿತ, ಎಸ್. ವಿ. ಹಿರೇಮಠ, ವಿ. ಎಸ್. ಜಾದವ್, ಎಸ್. ಕೆ. ಕುಲಕರ್ಣಿ, ಸಾವಿತ್ರಿ ಮಾನ್ವಿ, ಎಂ. ಎಂ. ಸಿಳ್ಳಿನ್, ಗೀತಾ ಶಿಂಧೆ ಹಾಗೂ ಶಿಕ್ಷಕರಾದ ಕೆ. ಆಯ್. ಕೋಳಿವಾಡ, ಆಯ್. ಬಿ. ಒಂಟೇಲಿ, ಎನ್. ಜೆ. ಸಂಗನಾಳ, ಜೆ. ವಿ. ಕೆರಿಯವರ, ಅಕ್ಕಮಹಾದೇವಿ ಅಯ್ಯನಗೌಡ್ರ, ರಾಜೇಶ್ವರಿ ಈಟಿ, ಗೀತಾ ಕಂಬಳಿ, ರಜಿಯಾಬೇಗಂ, ವಿದ್ಯಾ ಮುಗಳಿ, ಜಯಶ್ರೀ ಮೆಣಸಗಿ, ಎಂ. ಎಸ್. ಧರ್ಮಾಯತ, ಎಸ್. ಎ. ಚೋಳಿನ, ಪದ್ಮಾವತಿ ಅಂಬಿಗೇರ, ಶ್ವೇತಾ ಶಿ. ಹಿರೇಮಠ, ನೇತ್ರಾ ಸೋಬಾನ, ನಂದಿತಾ ಎಂ. ರಾಜೂರ, ಕು. ಪಿ. ಎಸ್. ಅಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಮಕ್ಕಳು ರಾಣಿ ಚೆನ್ನಮ್ಮನ ವೀರಗಾಥೆ, ರಾಷ್ಟ್ರಪ್ರೇಮ ಹಾಗೂ ಮಹಿಳಾ ಸಬಲೀಕರಣದ ಕುರಿತು ಭಾಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು.
ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ
ಕಲ್ಯಾಣ ಕಹಳೆ, ಗದಗ
