ಬಾಲಮ್ಮ ಮಹಾದೇವಪ್ಪ ಕಡೇಚೂರ್ ನಿಧನ

ಬಾಲಮ್ಮ ಮಹಾದೇವಪ್ಪ ಕಡೇಚೂರ್ ನಿಧನ

ಬಾಲಮ್ಮ ಮಹಾದೇವಪ್ಪ ಕಡೇಚೂರ್ ನಿಧನ

ಕಲಬುರಗಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ ಮಹಾದೇವಪ್ಪ ಕಡೇಚೂರ್ ಅವರ ಧರ್ಮಪತ್ನಿ ಕಲಬುರ್ಗಿ ನಗರದ ಜಗತ್ ಬಡಾವಣೆಯ ಬಾಲಮ್ಮ ಮಹಾದೇವಪ್ಪ ಕಡೇಚೂರ್ (83) ಮಾರ್ಚ್ ಐದರಂದು ಬುಧವಾರ ನಿಧನರಾದರು.

ವಯೋಸಹಜ ಕಾಯಿಲೆಯಿಂದಿದ್ದ ಬಾಲಮ್ಮ ಕಡೇಚೂರ್ ಅವರನ್ನು ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ಬುಧವಾರ ಬೆಳಿಗ್ಗೆ ದಾಖಲಿಸಲಾಗಿತ್ತು.

  ಉದ್ಯಮಿ ವೆಂಕಟೇಶ್ ಕಡೇಚೂರ್, ಕೆಎಎಸ್ ಅಧಿಕಾರಿ ಪ್ರಮೀಳಾ ಪೆರ್ಲ, ಡಾ.ರಾಜೇಶ್ ಕಡೇಚೂರ್ ಸೇರಿ ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗು ಅಳಿಯ ಡಾ.ಸದಾನಂದ ಪೆರ್ಲ ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

   ಪಾರ್ಥೀವ ಶರೀರದ ಅಂತ್ಯಕ್ರಿಯೆ ಬುಧವಾರ ಸಂಜೆ ವೀರೇಶ್ ನಗರದ ಸ್ವಂತ ಜಮೀನಿನಲ್ಲಿ ಜರುಗಿತು.

ಗಣ್ಯರ ಸಂತಾಪ

ಬಾಲಮ್ಮ ಕಡೇಚೂರ್ ಅಂತಿಮ ಸಂಸ್ಕಾರದಲ್ಲಿ ಈಡಿಗ ಗುರುಗಳಾದ ಡಾ.ಪ್ರಣವಾನಂದ ಸ್ವಾಮೀಜಿ, ಪೂಜ್ಯ ಲಿಂಗರಾಜಪ್ಪ ಅಪ್ಪ, ಸತೀಶ್ ವಿ. ಗುತ್ತೇದಾರ್,ನೀಲಕಂಠ ರಾವ್ ಮೂಲಗೆ,ಬಾಲರಾಜ್ ಗುತ್ತೇದಾರ್,ನಿತಿನ್ ವಿ ಗುತ್ತೇದಾರ್,ಶಿವ ಕುಮಾರ್ ಪಾಟೀಲ್ ತೇಲ್ಕೂರ್ ಸೇಡಂ, ಮಹಾದೇವ ಗುತ್ತೇದಾರ್, ಜಿಮ್ಸ್ ನಿರ್ದೇಶಕರಾದ ಡಾ.ಉಮೇಶ್ ರೆಡ್ಡಿ, ಸೂಪರಿಂಟೆಂಡೆಂಟ್ ಡಾ.ಶಿವಕುಮಾರ್,ಶರಣು ಅಲ್ಲಮಪ್ರಭು ಪಾಟೀಲ್,ಆಂಜನೇಯ ಮುತ್ಯಾ,ಪ್ರಶಾಂತ್ ಶೆಟ್ಟಿ,ಹೋಟೆಲ್ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್, ದ. ಕ.ಸಂಘದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ರಾಜು ಗುತ್ತೇದಾರ್ ಸಿಂಧಗಿ, ಪ್ರವೀಣ್ ಜತ್ತನ್, ಡಾ.ಅರುಣ್ ಹರಿದಾಸ್,ಪ್ರವೀಣ್ ಗುತ್ತೇದಾರ್, ಡಾ.ಶರಣು ನಾಗರಾಳ, ಎಂ ಎನ್ ಎಸ್ ಶಾಸ್ತ್ರಿ,ಸತ್ಯನಾಥ್ ಶೆಟ್ಟಿ,ಸಂತೋಷ್ ವಿ ಗುತ್ತೇದಾರ್, ಆರ್ ಪಿ.ರೆಡ್ಡಿ, ವೀರಯ್ಯ ಗುತ್ತೇದಾರ್, ಸುಭಾಷ್ ಗುತ್ತೇದಾರ್ ದೇವಳ ಗಾಣಗಾಪುರ,

ಆಕಾಶವಾಣಿಯ ಎಸ್ ಎಸ್ ರುಳಿ, ಹರ್ಷಾನಂದ ಗುತ್ತೇದಾರ್ ಆಳಂದ ಸಿದ್ದಾಜಿ ಪಾಟೀಲ್ ಮತ್ತಿತರ ಅನೇಕ ಗಣ್ಯರು ಪಾಲ್ಗೊಂಡು ತಮ್ಮ ಸಂತಾಪ ಸಲ್ಲಿಸಿದರು.