ಸಾರ್ವಜನಿಕರು ತಮಗೆ ನೀಡುವ ಮನವಿ ಪತ್ರಗಳನ್ನು ನಿಯಮಾನುಸಾರವಾಗಿ ಇಲಾಖಾವಾರು ಕ್ರಮ ಕೈಗೊಳಬೇಕೆಂದು ಸಿಎಂಗೆ ಸಂದೀಪ ಪಿ.ಭರಣಿ ಮನವಿ

ಸಾರ್ವಜನಿಕರು ತಮಗೆ ನೀಡುವ ಮನವಿ ಪತ್ರಗಳನ್ನು ನಿಯಮಾನುಸಾರವಾಗಿ ಇಲಾಖಾವಾರು ಕ್ರಮ ಕೈಗೊಳಬೇಕೆಂದು ಸಿಎಂಗೆ ಸಂದೀಪ ಪಿ.ಭರಣಿ ಮನವಿ
ಕಲಬುರಗಿ: ಸಾರ್ವಜನಿಕರು ತಮಗೆ ನೀಡುವ ಮನವಿ ಪತ್ರಗಳನ್ನು ನಿಯಮಾನುಸಾರವಾಗಿ ಇಲಾಖಾವಾರು ಕ್ರಮ ಕೈಗೊಳಬೇಕೆಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಂದೀಪ ಪಿ.ಭರಣಿ ಅವರು ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಮುಖ್ಯಮಂತ್ರಿಗಳು ಜಿಲ್ಲಾವಾರು ಪ್ರವಾಸ ಕೈಗೊಂಡಿರುವ ಸಂಧರ್ಭದಲ್ಲಿ ಸಾರ್ವಜನಿಕರು ನೂರಾರು ಮನವಿ ಪತ್ರಗಳನ್ನು ತಮಗೆ ಸಲ್ಲಿಸುತ್ತಾರೆ. ಆದರೆ ಮುಖ್ಯಮಂತ್ರಿಗಳು ಸಾರ್ವಜನಿಕರಿಂದ ಸ್ವೀಕೃತವಾದ ಮನವಿ ಪತ್ರಗಳನ್ನು ಮೂಲೆಗುಂಪು ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಸಾರ್ವಜನಿಕರು ತಮ್ಮ ತೊಂದರೆಗಳನ್ನು ತೆಗೆದುಕೊಂಡು ಬೆಂಗಳೂರಿಗೆ ತಮ್ಮನ್ನು ಭೇಟಿಯಾಗಲು ಸಾಧ್ಯವಾಗದ ಕಾರಣ ತಾವು ಪ್ರವಾಸ ಕೈಗೊಳ್ಳುವ ಜಿಲ್ಲೆಗಳಿಗೆ ಬಂದು ಮನವಿ ಪತ್ರಗಳನ್ನು ಸಲ್ಲಿಸುತ್ತಾರೆ. ಸುತ್ತಮುತ್ತಲಿನ ತಾಲೂಕುಗಳಿಂದ ಸಾರ್ವಜನಿಕರು ತಮ್ಮ ಸ್ವಂತ ದುಡ್ಡು ಖರ್ಚು ಮಾಡಿಕೊಂಡು ಬಂದು ತಮಗೆ ಮನವಿ ಸಲ್ಲಿಸುತ್ತಾರೆ.
ಅದನ್ನು ತಾವುಗಳು ಸಂಬAಧಪಟ್ಟ ಇಲಾಖೆಗಳಿಗೆ ರವಾನಿಸಿ ಸೂಕ್ತ ಕ್ರಮ ಕೈಗೊಂಡಿದ್ದಲ್ಲೇ ಆದರೆ ಸಾರ್ವಜನಿಕರ ಸಮಸ್ಯೆಗಳು ಸ್ವಲ್ಪಮಟ್ಟಿಗಾದರೂ ಬಗೆಹರಿಸಲು ಸಾಧ್ಯ. ಆದರೆ ತಾವುಗಳು ಸಾರ್ವಜನಿಕರಿಂದ ಸ್ವೀಕರಿಸಿ ಮನವಿ ಪತ್ರಗಳನ್ನು ಯಾವುದೇ ಕ್ರಮ ಕೈಗೊಳ್ಳದೇ ಮೂಲೆಗುಂಪು ಮಾಡುತ್ತಿರುವುದು ಸಾರ್ವಜನಿಕರಿಗೆ ನೋವುಂಟು ಮಾಡಿದಂತಾಗುತ್ತಿದೆ.
ಆದ್ದರಿಂದ ಮುಖ್ಯಮಂತ್ರಿಗಳು ಜಿಲ್ಲಾವಾರು ಪ್ರವಾಸ ಕೈಗೊಂಡಿರುವ ಸಂಧರ್ಭದಲ್ಲಿ ಸಾರ್ವಜನಿಕರು ಸಲ್ಲಿಸುವ ಮನವಿಪತ್ರಗಳಿಗೆ ನಿಯಮಾನುಸಾರ ಸ್ಪಂದಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೀರಿ.
ಮುಂದಿನ ದಿನಗಳಲ್ಲಿ ಸಾರ್ವಜನಿಕರು ನೀಡುವ ಮನವಿ ಪತ್ರಗಳಿಗೆ ಹಿಂಬರಹವನ್ನು ನೀಡುವ ಕೆಲಸವಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾವು ಕಲಬುರಗಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ತಮಗೆ ಕಪ್ಪುಪಟ್ಟಿ ಪ್ರದರ್ಶಿಸಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ
.