ಉಚಿತ, ಹಟಗಾರ ವಧು–ವರರ ಆಯ್ಕೆ ಸಮಾವೇಶ

ಉಚಿತ, ಹಟಗಾರ ವಧು–ವರರ ಆಯ್ಕೆ ಸಮಾವೇಶ

ಉಚಿತ, ಹಟಗಾರ ವಧು–ವರರ ಆಯ್ಕೆ ಸಮಾವೇಶ

ಕಲಬುರಗಿ : ದಿನಾಂಕ 28-12-2025 (ರವಿವಾರ) ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಸದ್ಗುರು ಶಿವಶರಣ ಮಠ ಅಕ್ಕಲಕೋಟೆ ನಗರದಲ್ಲಿ ಬೃಹತ್ ಹಟಗಾರ ವಧು–ವರರ ಆಯ್ಕೆ ಸಮಾವೇಶನ್ನು ಹಮ್ಮಿಕೊಳ್ಳಲಾಗಿದೆ.

ಅಕ್ಕಲಕೋಟದ ಶಂಕರ ದೊಡ್ಡಮನಿ ಹಾಗೂ ಶಿವರಾಜ ನಾಗಠಾಣ ರವರ ಹಟಗಾರ ಶಿವಾಚಾರ್ಯ ಪ್ರತಿಷ್ಠಾನದ ನೈತೃತ್ವದಲ್ಲಿ ಹಾಗೂ ಶಂಕರ ಮಾಲಾಪುರೆ ರವರ ಸ್ಥಾಪಿತ ಅವ್ವ ಅಪ್ಪಾ ವೀರಶೈವ ಲಿಂಗಾಯತ ಕೃಪಾಶೀರ್ವಾದ ,ವೃದ್ಧಾಶ್ರಮ (ಟ್ರಸ್ಟ್)ದ ಸಹಕಾರದೊಂದಿಗೆ ಈ ಸಮಾವೇಶ ನಡೆಯಲಿದೆ.

ಸಮಾವೇಶವನ್ನು ಹಿರಿಯ ವಕೀಲರಾದ ಸುನೀಲ ಜೇವುರೆ, ಪತ್ರಕರ್ತ ಓಂಶಂಕರ ಹುಲಗೇರಿ, ಸಮಾಜ ಸೇವಕರಾದ ಸೋಮಶೇಖರ್ ಅಷ್ಟಗಿ,ಶಿವಾನಂದ ಕಲಬುರಗಿ,ಸಿದ್ದಲಿಂಗ ಮೇತ್ರೆ,ಅಂಬಾದಾಸ ಖರಾಡೆ ಹಾಗೂ ವಿಜಯಕುಮಾರ ಜುಂಜಾ ಸೇರಿದಂತೆ ಸಾಮಾಜಿಕ ಕಳಕಳಿ ಉಳ್ಳ ಏಳು ಜನರು ಸಂಯುಕ್ತವಾಗಿ ಆಯೋಜಿಸಿದ್ದಾರೆ. ಇವರು ಎಲ್ಲರೂ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಎಲ್ಲಾ ಹಟಗಾರ ಕೊಷ್ಠಿ ಜನ ಸಮುದಾಯದವರು ಈ ಉಚಿತ ವಧು–ವರರ ಆಯ್ಕೆ ಸಮಾವೇಶದ ಸದುಪಯೋಗ ಪಡೆದುಕೊಳ್ಳುವಂತೆ ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಪರವಾಗಿ ಹಾಗೂ ನೇಕಾರ ಮಹಾಸಭಾದ ಸಂಚಾಲಕರು ಮತ್ತು ನ್ಯಾಯವಾದಿಗಳಾದ ಜೆ.ಎಸ್. ವಿನೋದಕುಮಾರ ಅವರು ಮನವಿ ಮಾಡಿದ್ದಾರೆ.