ಶರಣ ನಗರದಲ್ಲಿ ಗಾರ್ಡನ್ ಕಾಂಪೌಂಡ್ ವಾಲ್ ನಿರ್ಮಾಣಕ್ಕೆ ಭೂಮಿ ಪೂಜೆ"

ಶರಣ ನಗರದಲ್ಲಿ ಗಾರ್ಡನ್ ಕಾಂಪೌಂಡ್ ವಾಲ್ ನಿರ್ಮಾಣಕ್ಕೆ ಭೂಮಿ ಪೂಜೆ"

 "ಶರಣ ನಗರದಲ್ಲಿ ಗಾರ್ಡನ್ ಕಾಂಪೌಂಡ್ ವಾಲ್ ನಿರ್ಮಾಣಕ್ಕೆ ಭೂಮಿ ಪೂಜೆ"  

ಕಲಬುರಗಿ:ನಗರದ ವಾರ್ಡ್ ಸಂಖ್ಯೆ 55 ರ ಶರಣ ನಗರದಲ್ಲಿ 25 ಲಕ್ಷ ರೂ. ವೆಚ್ಚದ ಗಾರ್ಡನ್ ಕಾಂಪೌಂಡ್ ವಾಲ್ ನಿರ್ಮಾಣ ಕಾಮಗಾರಿಗೆ ಶಾಸಕ ಅಲ್ಲಂಪ್ರಭು ಪಾಟೀಲ್ ಭೂಮಿ ಪೂಜೆ ನೆರವೇರಿಸಿದರು.  

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಯಲ್ಲಪ್ಪ ನಾಯ್ಕೋಡಿ, ರಾಘವೇಂದ್ರ ಮಾನವಿಕರ್, ಸಂಜು ಹಂಚನಾಳ, ರವಿಂದ್ರ ವಿಭೂತಿ, ಮಹೇಶಕುಮಾರ ಹೋಸೂರಕರ್, ದೀನೇಶ ದೊಡ್ಡಮನಿ, ಚಂದ್ರಶೇಖರ್ ಅನಾದಿ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.  

ಈ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಬಳಸಲು ಲಭ್ಯವಾಗುವುದರಿಂದ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿದೆ. ಶರಣ ನಗರದಲ್ಲಿ ಹಸಿರು ಪರಿಸರದ ಸಂರಕ್ಷಣೆಗಾಗಿ ಈ ಗಾರ್ಡನ್ ಅಭಿವೃದ್ಧಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಜನಪ್ರತಿನಿಧಿಗಳು ಅಭಿಪ್ರಾಯಪಟ್ಟರು.