ಇಜೇರಿ ರೈತನಿಗೆ ಹತ್ತು ಕ್ವಿಂಟಲ್ ತೊಗರಿ ಪರಿಹಾರ ದೊರಕಿಸಿ ಕೊಟ್ಟ ಹೋರಾಟಗಾರರು

ಇಜೇರಿ ರೈತನಿಗೆ ಹತ್ತು ಕ್ವಿಂಟಲ್ ತೊಗರಿ ಪರಿಹಾರ ದೊರಕಿಸಿ ಕೊಟ್ಟ ಹೋರಾಟಗಾರರು

ಇಜೇರಿ ರೈತನಿಗೆ ಹತ್ತು ಕ್ವಿಂಟಲ್ ತೊಗರಿ ಪರಿಹಾರ ದೊರಕಿಸಿ ಕೊಟ್ಟ ಹೋರಾಟಗಾರರು

ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದ ರೈತ ಬಸವರಾಜ ಹೂಗಾರ ರವರು ಕಳಪೆ ಮಟ್ಟದ ಕ್ರಿಮಿನಾಶಕ (AK47) ತೊಗರಿ ಬೆಳೆಗೆ ಸಿಂಪಡಣೆ ಮಾಡಿದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ತೊಗರಿ ಗಿಡ ಹಾಳಾಗಿತ್ತು,ಕಳಪೆ ಮಟ್ಟದ ಕ್ರಿಮಿನಾಶಕ ಮಾರಾಟ ಮಾಡಿದ ಏಜೆನ್ಸಿ ಬಳಿ ಹೋಗಿ ರೈತ ನನ್ನ ತೊಗರಿ ಕ್ರಿಮಿನಾಶಕ ಸಿಂಪಡಣೆ ಮಾಡಿದ ಕಾರಣ ಹೂ ಘೋನಿ ಫಲವತ್ತಾದ ಬೆಳೆ ಹಾಳಾಗಿದ್ದು, ನನಗೆ ಸೂಕ್ತ ಪರಿಹಾರ ಕೊಡಬೇಕೆಂದು ಬೇಡಿಕೊಂಡರು ಕೂಡ ರೈತನಿಗೆ ಯಾವುದೇ ಪರಿಹಾರ ನೀಡಿರುವುದಿಲ್ಲ,ರೈತ ಬಸವರಾಜ ಹೂಗಾರ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸದಸ್ಯರ ಬಳಿ ಬಂದು ನನಗೆ ಬಹಳ ಅನ್ಯಾಯವಾಗಿದೆ ನಾನು ಬಳಿದ ತೊಗರಿ ಬೆಳೆ ಕಳಪೆ ಮಟ್ಟದ ಕ್ರಿಮಿನಾಶಕ ಸಿಂಪಡಣೆ ಮಾಡಿದ ಕಾರಣ ಸಂಪೂರ್ಣವಾಗಿ ಬೆಳೆ ಹಾಳಾಗಿದ್ದು, ತಾವುಗಳು ನ್ಯಾಯ ಕೊಡಿಸಬೇಕೆಂದು ಕೋರಿಕೊಂಡರು ಇಜೇರಿ ಗ್ರಾಮದ ಸಂಘಟನೆಗಳ ನೇತೃತ್ವದಲ್ಲಿ ಹೋರಾಟಕ್ಕೆ ಇಳಿದ ಹೋರಾಟಗಾರರು ಸಂಬಂಧಪಟ್ಟ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕರು ಅವರಿಗೆ ದೂರು ನೀಡಿದ ಕೂಡಲೇ ದೂರಿಗೆ ಸ್ಪಂದಿಸಿ, ಸಂಬಂಧಿಸಿದ ಏಜೆನ್ಸಿಗೆ ನೋಟಿಸ್ ನೀಡಿದರು ಏಜೆನ್ಸಿ ಮಾಲೀಕರು ರೈತನಿಗೆ ಆದ ನಷ್ಟ ಪರಿಹಾರ ನಾನು ಕೊಡುತ್ತೇನೆ ಎಂದು ಹತ್ತು ಕ್ವಿಂಟಲ್ ತೊಗರಿಯನ್ನು ಪರಿಹಾರ ರೂಪದಲ್ಲಿ ರೈತನಿಗೆ ಹೋರಾಟಗಾರರ ನೇತೃತ್ವದಲ್ಲಿ ಒಪ್ಪಿಸಲಾಯಿತು.ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಶ್ರವಣಕುಮಾರ ಡಿ ನಾಯಕ, ಅಲ್ಲಾಪಟೇಲ ಮಾಲೀಬಿರಾದಾರ ರಾಜ್ಯ ಕಾರ್ಯದರ್ಶಿಗಳು ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆ, ಹೊನ್ನಪ್ಪ ಬಡಿಗೇರ, ಇಜೇರಿ ವಲಯ ಅಧ್ಯಕ್ಷ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ, ನಿಂಗಣ್ಣ ಚಿಗರಹಳ್ಳಿ ಇಜೇರಿ ಗ್ರಾಮ ಘಟಕ ಇಜೇರಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ,ಈರಣ್ಣ ಬಿದರಾಣಿ ಜಿಲ್ಲಾ ಅಹಿಂದ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು,ಮಹಿಬೂಬ ಸೌದಗಾರ ಮಾಜಿ ಅಧ್ಯಕ್ಷ ಗ್ರಾಮ ಪಂಚಾಯತ್ ಇಜೇರಿ, ಸೈಯದಪಟೇಲ್ ಪೋಲಿಸ ಬಿರಾದಾರ,ರಮೇಶ ಮೇಲಗಿರಿ,ದೌಲತರಾಯ ನೀರಲಕೋಡ ಮತ್ತು ಇನ್ನಿತರರು ಇದ್ದರು.

  ವರದಿ ಜೇಟ್ಟೆಪ್ಪ ಎಸ್ ಪೂಜಾರಿ