ಬುದ್ಧಗಯಾ ವಿವಾದ: ಬೌದ್ಧ ಬಿಕ್ಕುಗಳ ಮೇಲೆ ದೌರ್ಜನ್ಯ – ಕಲಬುರಗಿಯಲ್ಲಿ ಭಾರಿ ಪ್ರತಿಭಟನೆ

ಬುದ್ಧಗಯಾ ವಿವಾದ: ಬೌದ್ಧ ಬಿಕ್ಕುಗಳ ಮೇಲೆ ದೌರ್ಜನ್ಯ – ಕಲಬುರಗಿಯಲ್ಲಿ ಭಾರಿ ಪ್ರತಿಭಟನೆ
ಕಲಬುರಗಿ, ಫೆಬ್ರವರಿ 28, 2025: ಬೌದ್ಧ ಧರ್ಮೀಯರಿಗೆ ಮಹತ್ವದ ತೀರ್ಥಕ್ಷೇತ್ರವಾದ ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧ ಸಮುದಾಯಕ್ಕೆ ಒಪ್ಪಿಸಬೇಕೆಂಬ ಬೇಡಿಕೆಗೆ ಪ್ರಚೋದನೆ ನೀಡುವಂತೆ, ಫೆಬ್ರವರಿ 12ರಿಂದ ಬೌದ್ಧ ಬಿಕ್ಕು ಸಂಘ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ. ಆದರೆ, ಫೆಬ್ರವರಿ 27ರ ರಾತ್ರಿ ಬಿಹಾರ ಸರ್ಕಾರ ಮತ್ತು ಕೇಂದ್ರ ಸರಕಾರದ ಆದೇಶದ ಮೇರೆಗೆ ಪೊಲೀಸರು ಬಿಕ್ಕುಗಳ ಮೇಲೆ ದೌರ್ಜನ್ಯ ಎಸಗಿದ್ದು, ಮಹಿಳಾ ಬಿಕ್ಷುಣಿಯರ ಮೇಲೂ ಅನುಚಿತ ವರ್ತನೆಯ ಆರೋಪಗಳು ಕೇಳಿಬಂದಿವೆ.
ಈ ಘಟನೆಯು ದೇಶಾದ್ಯಂತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ಹುಟ್ಟುಹಾಕಿದ್ದು, ಹಲವೆಡೆ ಪ್ರತಿಭಟನೆಯ ಅಲೆ ಎದ್ದಿದೆ. ಕಲಬುರಗಿಯಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾರೀ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುತ್ತಿದೆ. ಈ ಮೆರವಣಿಗೆಗೆ ಅಖಿಲ ಭಾರತ ಬೌದ್ಧ ವೇದಿಕೆ (AIBF) ನೇತೃತ್ವ ನೀಡಲಿದ್ದು, ವಿವಿಧ ಸಂಘಟನೆಗಳ ಸಹಭಾಗಿತ್ವವಿರಲಿದೆ.
ಪೈಶಾಚಿಕ ದೌರ್ಜನ್ಯ – ಬೌದ್ಧ ಸಮುದಾಯದ ಆಕ್ರೋಶ
ಬೌದ್ಧ ಬಿಕ್ಕುಗಳ ಮೇಲೆ ನಡೆಸಿದ ದೌರ್ಜನ್ಯ ಖಂಡನೀಯವಾಗಿದೆ ಎಂದು ಬೌದ್ಧ ನಾಯಕರು ಹೇಳಿದ್ದಾರೆ. ಈ ಹೋರಾಟವು ಸಂವಿಧಾನದ ಕಲಂ 13, 25 ಮತ್ತು 29ರಂತೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ನಡೆದ ಪ್ರಜಾಪ್ರಭುತ್ವ ವಿರೋಧಿ ಕ್ರಮವೆಂದು ಬೌದ್ಧಪಂಥೀಯರು ಆಕ್ಷೇಪಿಸಿದ್ದಾರೆ.
ಸತ್ಯಾಗ್ರಹ ಮತ್ತು ಮುಂದಿನ ಹೋರಾಟ
ಬುದ್ಧಗಯಾದ ಮೇಲಿನ ಹಿಂದೂ ಪೂಜಾರಿಗಳ ಅಧಿಪತ್ಯವನ್ನು ತೆರವುಗೊಳಿಸಿ, 1949ರ ಬಿ.ಟಿ ಆಕ್ಟ್ ಅನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಬೌದ್ಧ ಸಮುದಾಯ ಒತ್ತಾಯಿಸುತ್ತಿದೆ. ಇದನ್ನು ಅನುಷ್ಠಾನಗೊಳಿಸಲು ನಿರಾಕರಿಸಿದರೆ, ಹೋರಾಟ ಇನ್ನಷ್ಟು ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಬೌದ್ಧ ಸಂಘಟನೆಗಳು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಕ್ಕೆ ಮನವಿ
ಪ್ರಸ್ತುತ, ಈ ಹೋರಾಟವನ್ನು ವಿಶ್ವದಾದ್ಯಂತ ಬೆಂಬಲಿಸಲಾಗಿದ್ದು, ಬೌದ್ಧಪಂಥೀಯರು ತಮ್ಮ ಧಾರ್ಮಿಕ ಹಕ್ಕುಗಳಿಗಾಗಿ ನ್ಯಾಯ ದೊರಕಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಸರ್ಕಾರ ಈ ಬಗ್ಗೆ ತಕ್ಷಣ ಸ್ಪಂದಿಸಬೇಕು ಮತ್ತು ಬೌದ್ಧ ಧಾರ್ಮಿಕ ಕಾನೂನುಗಳ ಉಲ್ಲಂಘನೆ ತಪ್ಪಿಸಬೇಕು ಎಂಬುದು ಕಲಬುರಗಿ ಬೌಧ ಉಪಸಕ /ಉಪಾಸಕಿಯರ ಸಂಘ ಹೋರಾಟಗಾರರು ಇಂದು ಕಲಬುರಗಿ ನಗರದಲ್ಲಿ ಪ್ರತಿಭಟನೆ ನಡೆಸಿ ಘನತೆವೆತ್ತ ರಾಜ್ಯಪಾಲರಿಗೆ ಕಲಬುರಗಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಉಪಾಸಕರಾದ ಮರೆಪ್ಪ ಹಳ್ಳಿ ,ದೇವೆಂದ್ರ ಹೆಗಡೆ,ಸೂರ್ಯಕಾಂತ ನಿಂಬಾಳಕರ್, ಅರ್ಜುನ/ಭಧ್ರೆ ಉಪಾಸಕರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ.ಅಂಬಾರಾಯ ಅಷ್ಠಗಿ,ಹೆಚ್. ಬೋಧನರ್ಕ,ಹಣಮಂತ ಯಳಸಂಗಿ,ಶಾಂತಪ್ಪ ಕೂಡಲಗಿ,ಸಂತೋಷ ಮೇಲಿನಮನಿ,ಬಸವರಾಜ್ ಬೆಣ್ಣೂರ , ದಿನೇಶ ದೊಡ್ಡಮನಿ ,ಸುರೇಶ ಮೆಂಗನ್ ,ದಯಾನಂದ ದೊಡ್ಡಮನಿ,ಸೋಮಶೇಖರ ಮೇಲ್ಮನಿ ,ಪ್ರಕಾರ ಔರಾದಕರ್,ದೇವಿಂದ್ರ ಸಿನೂರ,ಸುರೆಶ ಹಾದಿಮನಿ,ಲಕ್ಷ್ಮೀಕಾಂತ ಹುಬಳಿ,ಶಳ್ಳಗಿ ದೇವೆಂದ್ರ,ಮಲ್ಲಪ್ಪ ಹೊಸ್ಮನಿ,ಶಿವಾ ಅಷ್ಠಗಿ,ಸಂತೋಷ,ಮಾಪಣ್ಣ ಪಾಳಾ ಸೇರಿದಂತೆ ಸಾವಿರಾರು ಮುಖಂಡರು ಪಾಲ್ಗೊಂಡಿದ್ದರು
KKP News Report