ಇಂದಿರಾ ಕ್ಯಾಂಟಿನ್ ನ ಗ್ಯಾಸ್ ಸಿಲೆಂಡರ್ ಕದ್ದ ಕಳ್ಳರು
ಇಂದಿರಾ ಕ್ಯಾಂಟಿನ್ ನ ಗ್ಯಾಸ್ ಸಿಲೆಂಡರ್ ಕದ್ದ ಕಳ್ಳರು
ನಾಗರಾಜ್ ದಂಡಾವತಿ ವರದಿ
ಶಹಾಬಾದ : - ತಾಲ್ಲೂಕಿನ ನಗರದ ನಗರ ಸಭೆಯ ಮುಂಭಾಗದಲ್ಲಿ ಉದ್ಘಾಟನೆ ಗೊಂಡು ಕೇವಲ ಒಂದು ತಿಂಗಳು ಗತಿಸಿಲ್ಲ, ಆದರೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ, ಹಾಡಹಗಲೇ ಕಳ್ಳರು ಇಂದಿರಾ ಕ್ಯಾಂಟಿನ್ ನಲ್ಲಿ ಬಡವರಗಾಗಿ ಮುಂಜಾನೆ,ಮದ್ಯಾಹ್ನ ಮತ್ತು ಸಾಯಂಕಾಲ ತಯಾರಿಸಲು ಬಳಸು ಗ್ಯಾಸ್ ಸಿಲೆಂಡರ್ ನ್ನು ಹಾಡುಹಗಲೇ ಕದ್ದು ಪರಾರಿಯಾಗಿದ್ದಾರೆ.
ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳು ಮದ್ಯಾಹ್ನದ ಊಟ ಮುಗಿದ ನಂತರ ತಮ್ಮ ಮುಂದಿನ ಕೆಲಸ ಮಾಡಲು ಒಳಗಡೆ ತಯಾರಿಯಲ್ಲಿದ್ದಾಗ ಮದ್ಯಾಹ್ನ ವೇಳೆ ಕಳ್ಳರು ಅಡುಗೆಗಾಗಿ ಕನೇಕ್ಷನ ಮಾಡಿಟ್ಟ ಗ್ಯಾಸ್ ಸಿಲೆಂಡರ್ ಕದ್ದು ಪರಾರಿಯಾಗಿದ್ದಾರೆ.
ಗ್ಯಾಸ್ ಸಿಲೆಂಡರ್ ಇಲ್ಲದ ನ್ನು ಕಂಡು ಕ್ಯಾಂಟಿನ್ ನ ಮ್ಯಾನೇಜರ್ ನಿಂಗಣ್ಣಗೌಡ ಪಾಟೀಲ ಪೋಲಿಸ ಠಾಣೆಗೆ ಹೋಗಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪೋಲಿಸರು ಗ್ಯಾಸ್ ಸಿಲೆಂಡರ್ ಕಳ್ಳತನ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
