ಬದುಕು ಸುಂದರವಾಗಲು ಸ್ವಚ್ಛತೆಯಿಂದ ಕೂಡಿರಬೇಕು: ಡಾ! ವಿಶ್ವನಾಥ್ ಕಿವಡೆ ಹೇಳಿಕೆ

ಬದುಕು ಸುಂದರವಾಗಲು ಸ್ವಚ್ಛತೆಯಿಂದ ಕೂಡಿರಬೇಕು: ಡಾ! ವಿಶ್ವನಾಥ್ ಕಿವಡೆ ಹೇಳಿಕೆ

ಬದುಕು ಸುಂದರವಾಗಲು ಸ್ವಚ್ಛತೆಯಿಂದ ಕೂಡಿರಬೇಕು: ಡಾ! ವಿಶ್ವನಾಥ್ ಕಿವಡೆ ಹೇಳಿಕೆ 

ಕಮಲನಗರ:ತಾಲ್ಲೂಕಿನ ಸಿದ್ದರಾಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಇಂದಿನ ಬದುಕು ಮಾನಸಿಕ ಭಿನ್ನತೆಯಿಂದ ಕೂಡಿದೆ ಒತ್ತಡದ ಬದುಕು ಆಗಿದೆ ಅದಕ್ಕಾಗಿ ನಾವು ಮಾಡುವ ಯಾವುದೇ ಕೆಲಸದ ಒತ್ತಡ ಬದುಕು ಬದಿಗೊತ್ತಿ ಸೇವಾ ಮನೋಭಾವನೆಯಿಂದ ಮತ್ತು ರಾಷ್ಟ್ರದ ಬಗ್ಗೆ ಕಾಳಜಿ ವಹಿಸಬೇಕು.ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛಗೊಳಿಸಿ ನಿತ್ಯವೂ ನಾವು ಬದುಕಬೇಕು ಇದರಿಂದ ನಮ್ಮ ಬದುಕು ಸುಂದರವಾಗುತ್ತದೆ ಎಂದು ಪ್ರಾಚಾರ್ಯ ಡಾ ವಿಶ್ವನಾಥ್ ಕಿವಡೆ ನುಡಿದರು.

ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛತಾ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಸ್ವಚ್ಛತೆಯಲ್ಲಿ ದೇವರು ಅಡಗಿದ್ದಾರೆ ಎಂದರು.

ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಡಾ.ರಮೇಶ ಚವ್ಹಾಣ ಮಾತನಾಡಿ ನಾವು ಇಂದಿನ ಯುವಕರಲ್ಲಿ ದುಡಿಯುವ ಮನೋಭಾವನೆಯನ್ನು ಕಡಿಮೆ ಇರೋದನ್ನು ನೋಡ್ತಾ ಇದ್ದೀವಿ ಅದಕ್ಕಾಗಿ ರಾಷ್ಟ್ರದ ಬಗ್ಗೆ ಪ್ರೀತಿ ಒಲವು ತೋರಬೇಕು. ನಮ್ಮ ಬದುಕಿನ ಪ್ರತಿಯೊಂದು ಕೆಲಸ ನಾವು ಸ್ವತಃ ನಾವೇ ಮಾಡಬೇಕು ಅಲ್ಲಿ ಇರುವುದು ರಾಷ್ಟ್ರೀಯ ಸೇವಾ ಯೋಜನೆಯ ಫಲ ಎಂದು ಹೇಳಿದರು. 

ಡಾ. ಬಾಲಾಜಿ ಬೊಂಡ್ಲೆ, ಪ್ರವೀಣ್ ಶಿಂಧೆ, ಉಮಾಕಾಂತ ಬಚ್ಚಣ್ಣ ಬಿಕೆಆಯಟಿ ಕಾಲೇಜಿನ ಸಾಯಿ ಕುಮಾರ್, ಸರಸ್ವತಿ ಗುಂಗೆ, ನೀಲಾಂಬಿಕೆ ಶಿವಕುಮಾರ್ ಪಾಟೀಲ್ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಂದ ಕಾಲೇಜು ಆವರಣ ಸ್ವಚ್ಛಗೊಳಿಸಲಾಯಿತು.