ಗಡಿಲಿಂಗದಳ್ಳಿ 4 ತಾಸು ಹೆದ್ದಾರಿ ತಡೆ ನಡೆಸಿದ ಶಾಲಾ ಮಕ್ಕಳು
ಗಡಿಲಿಂಗದಳ್ಳಿ: 4 ತಾಸು ಹೆದ್ದಾರಿ ತಡೆ ನಡೆಸಿದ ಶಾಲಾ ಮಕ್ಕಳು
ಚಿಂಚೋಳಿ: ತಾಲ್ಲೂಕಿನ ಗಡಿಲಿಂಗದಳ್ಳಿ ಪುನರ್ ವಸತಿ ಕೇಂದ್ರ-1ರಲ್ಲಿ ವಿವಿಧ ಶಾಲೆ ಕಾಲೇಜಿನವಿದ್ಯಾರ್ಥಿಗಳು 4 ತಾಸು ಹೆದ್ದಾರಿ ತಡೆ ನಡೆಸಿ ಸಾರಿಗೆ ಸಂಸ್ಥೆಗೆ ಇಲಾಖೆಗೆ ಬಿಸಿ ಮುಟ್ಟಿಸಿದರು. ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಬೆ.10ರಿಂದ 2 ಗಂಟೆವರೆಗೆ ಭಾಲ್ಕಿ ಚಿಂಚೋಳಿ ರಾಜ್ಯ ಹೆದ್ದಾರಿ 75ರಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಗಡಿಲಿಂಗದಳ್ಳಿ ಗ್ರಾಮಕ್ಕೆ ಬರುವ ಬಸಗಳು ಸಮಯ ಪಾಲಿಸುತ್ತಿಲ್ಲ ಇದರಿಂದ ಸರ್ಕಾರಿ ಪ್ರೌಢ ಶಾಲೆ ಐನಾಪುರ ಮತ್ತು ಪಿಯು ಕಾಲೇಜು ಚಿಟ್ಟಗುಪ್ಪ ತೆರಳುವ ಮಕ್ಕಳಿಗೆ ತೊಂದರೆಯಾಗುತ್ತಿದೆ ಮಕ್ಕಳು ಅಲವತ್ತುಕೊಂಡರು. ಪ್ರತಿಭಟನೆಯಿಂದ ಬಸ್ ಹಾಗೂ ಇನ್ನಿತರ ವಾಹನಗಳು ದಾರಿ ಮಧ್ಯೆ ನಿಂತಿವೆ.
ಭಾಲ್ಕಿ ಚಿಂಚೋಳಿ ರಾಜ್ಯ ಹೆದ್ದಾರಿ 75ರಲ್ಲಿ ಬರುವ ಪುನರ್ ವಸತಿ ಕೇಂದ್ರ-1ರಿಂದಲೇ ಹಾದು ಹೋಗುತ್ತವೆ. ಬಸ್ಸುಗಳು ಸಮಯ ಪಾಲಿಸದೇ ಇರುವುದರಿಂದ ನಾವು ಮೊದಲ ತರಗತಿ ಪ್ರಾರಂಭವಾದ ಮೇಲೆ ಹೋಗುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ತಿಳಿಸಿದರು. ಹೀಗಾಗಿ ದಾರಿ ಕಾಣದೇ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಮಕ್ಕಳು ತಿಳಿಸಿದರು. ಪಲ್ಲವಿ ಭಾಗ್ಯಶ್ರೀ ಆರತಿ ಐಶ್ವರ್ಯ ಲಕ್ಷ್ಮಿ ಸವಿತಾ ಕಾರ್ತಿಕ್ ಮೌನೇಶ ರೋಶನ ಮತ್ತು ಗ್ರಾಮಸ್ಥರಾದ ಭಾಗ್ಯಶ್ರೀ ಮತ್ತು ನಾಗಪ್ಪ ಮುತ್ತಂಗಿ ಮತ್ತು ನರಸಿಂಗ ರಾಠೋಡ, ಸಿದ್ದಣ್ಣಾ ಭುಜುರ್ಕೆ ಮತ್ತು ಗ್ರಾಮದ ಅನೇಕರು ಇದ್ದರು