ಭಾಷಣ ಮತ್ತು ಬರವಣಿಗೆ ಕೌಶಲ್ಯ ವ್ಯಕ್ತಿತ್ವ ರೂಪಿಸುತ್ತವೆ – ಕೆ.ಎಂ.ವಿಶ್ವನಾಥ ಮರತೂರ ಅಭಿಮತ.
ಭಾಷಣ ಮತ್ತು ಬರವಣಿಗೆ ಕೌಶಲ್ಯ ವ್ಯಕ್ತಿತ್ವ ರೂಪಿಸುತ್ತವೆ – ಕೆ.ಎಂ.ವಿಶ್ವನಾಥ ಮರತೂರ ಅಭಿಮತ.
ಚಿತ್ತಾಪೂರ : ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪಠ್ಯದಾಚೆಗಿನ ಜೀವನ ಕೌಶಲ್ಯಗಳನ್ನು ಕಲಿಸುವುದು, ಅದರ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಲು ಅವಕಾಶ ಮಾಡಿಕೊಡುವುದು ಅವಶ್ಯಕ, ಭಾಷಣ ಮತ್ತು ಬರವಣಿಗೆ ಕೌಶಲ್ಯ ವ್ಯಕ್ತಿತ್ವ ರೂಪಿಸುತ್ತವೆ ಎಂದು ಶಿಕ್ಷಣ ತಜ್ಞ ಯುವ ಬರಹಗಾರ ಕೆ.ಎಂ.ವಿಶ್ವನಾಥ ಮರತೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸಿಂಹವಾಣಿ ಕರ್ನಾಟಕ ಹಾಗೂ ನಾಗಾವಿ ಶಿಕ್ಷಣ ಸಂಸ್ಥೆಯ ನಾಗಾವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಮತ್ತು ಬರವಣಿಗೆ ಕೌಶಲ್ಯ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರ ನಡೆಸಿಕೊಡುತ್ತಾ ಈ ಮೇಲಿನ ಮಾತನ್ನು ಹೇಳಿದರು.
ಈ ಕಾರ್ಯಾಗಾರದಲ್ಲಿ ಭಾಷಣ ಎಂದರೇನು? ಭಾಷಣ ಕೌಶಲ್ಯದ ಮಹತ್ವವೇನು? ಭಾಷಣ ಕಲೆಯನ್ನು ಕಲಿಯಲು ಸಾಮಾನ್ಯವಾಗಿ ಇರುವ ತೊಂದರೆಗಳೇನು? ಅವಕಾಶಗಳೇನು? ಭಾಷಣ ಕಲೆಯನ್ನು ಏಕೆ ಕಲಿಯಬೇಕು? ಈ ಭಾಷಣ ಕಲೆಯಿಂದ ವ್ಯಕ್ತಿತ್ವ ಹೇಗೆ ರೂಪುಗೊಳ್ಳುತ್ತದೆ.
ಬರವಣಿಗೆ ಹೇಗೆ ಹುಟ್ಟುತ್ತದೆ? ಬರವಣಿಗೆ ಕಲಿಯುವ ವಿಧಾನಗಳು ಯಾವವು? ಯಾವ ರೀತಿಯ ಬರವಣಿಗೆ ಇವತ್ತಿನ ದಿನ ಅವಶ್ಯಕ, ಬರವಣಿಗೆಯಿಂದ ಬದುಕು ಕಟ್ಟಿಕೊಳ್ಲಬಹುದೆ? ಬರವಣಿಗೆಯ ವಿಧಗಳು ಯಾವವು? ಹೇಗೆ ಬರೆಯಬೇಕು? ಲೇಖನ, ಕಥೆ, ಕವನ, ಪುಸ್ತಕ ಬರವಣಿಗೆಗೆ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ವಿವರಿಸಿದರು.
ಈ ಕಾರ್ಯಾಗಾರದಲ್ಲಿ ಪ್ರಮುಖವಾಗಿ ಭಾಷಣ ಮತ್ತು ಬರವಣಿಗೆ ಕೌಶಲ್ಯಕ್ಕೆ ಸಂಬಂಧಿಸಿದಂತೆ ಚಟುವಟಿಕೆ ಆಧಾರಿತ ಪ್ರಾಯೋಗಿಕವಾಗಿ ಕಲಿಸಲಾಯಿತು. ವಿದ್ಯಾರ್ಥಿಗಳು ಗುಂಪಿನಲ್ಲಿ, ವೇದಿಕೆಯ ಬಳಕೆ ಮಾಡಿ ಎರಡು ಕೌಶಲ್ಯಗಳನ್ನು ಕಲಿತರು. ವಿವಿಧ ರೀತಿಯ ಪ್ರಾತಕ್ಷಿಕೆಗಳನ್ನು ಈ ಕಾರ್ಯಾಗಾರದಲ್ಲಿ ಬಳಕೆ ಮಾಡಲಾಯಿತು ವಿದ್ಯಾರ್ಥಿಗಳಿಗೆ ಮನದಟ್ಟಾಗುವುದರ ಜೊತೆಗೆ ಬದುಕಿನಲ್ಲಿ ಉತ್ತಮವಾದ ಗುಣಗಳನ್ನು ಅಳವಡಿಸಿಕೊಂಡು ಹೇಗೆ ಬದುಕಬೇಕೆಂದು ತಿಳಿಸಿದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕಾಲೇಜಿನ ಪ್ರಾಂಶುಪಾಲರಾದ ವೀರಾರಡ್ಡಿ ಶೇರಿ ಅವರು ನಮ್ಮ ಕಾಲೇಜಿನ ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿಗೆ ಇಂತಹ ಕಾರ್ಯಾಗಾರ ಸಹಕಾರವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಎಲ್ಲವೂ ಗೃಹಿಸಬಲ್ಲ ತಿಳಿಯಬಲ್ಲ ಶಕ್ತಿ ಸಾಮರ್ಥ್ಯ ಅಡಗಿರುತ್ತದೆ ನಾವು ಅದನ್ನು ಹೊರಗೆಳೆಯಲು ಈ ಕಾರ್ಯಾಗಾರ ಸಹಕಾರಿಯಾಗಿದೆ ಎಂದರು.
ಕಾರ್ಯಾಗಾರದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ಒಟ್ಟು ೭೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪರೀಕ್ಷಾ ಪ್ಯಾಡ ವಿತರಿಸಲಾಯಿತು.
