ನೆಲ್ಲೋಗಿ ಪ್ರೌಢಶಾಲೆಯಲ್ಲಿ ಅದ್ದೂರಿಯಾಗಿ ಜರುಗಿದ ಗುರುವಂದನಾ ಕಾರ್ಯಕ್ರಮ..
ನೆಲ್ಲೋಗಿ ಪ್ರೌಢಶಾಲೆಯಲ್ಲಿ ಅದ್ದೂರಿಯಾಗಿ ಜರುಗಿದ ಗುರುವಂದನಾ ಕಾರ್ಯಕ್ರಮ..
ಜೆವರ್ಗಿ ತಾಲೂಕಿನ ನೆಲ್ಲೋಗಿ ಪ್ರೌಢಶಾಲೆಯಲ್ಲಿ ಗುರು ವಂದನಾ ಕಾರ್ಯಕ್ರಮವನ್ನೂ 2011-12ನೇಯ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದರು. ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಕಸ್ತೂರಿ ಮೇಡಂ ಅವರು ಮುಖ್ಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು ಮುಖ್ಯ ಅತಿಥಿ ಸ್ಥಾನವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ತಾಯಮ್ಮ ಕಿರಣಗಿ ಹಾಗೂ ಉಪಾಧ್ಯಕ್ಷರಾದ ಗುರು ಪಾಟೀಲ್ ಅವರು ಅವರು ವಹಿಸಿಕೊಂಡಿದ್ದರು ಅತಿಥಿ ಸ್ಥಾನವನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಶಿವರಾಜ್ ಹಳ್ಳಿಯವರು ವಹಿಸಿಕೊಂಡಿದ್ದರು ಈ ಸಂದರ್ಭದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರ್ಥನಾ ಗೀತೆಯೊಂದಿಗೆ ಶಾಲೆಯ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಡೆಸಿಕೊಟ್ಟರು ಅದೇ ರೀತಿಯಾಗಿ 2011 -12 ಸಾಲಿನ ವಿಶೇಷ ಆಹ್ವಾನಿತರಾಗಿ ಶಿಕ್ಷಕರು ಹಾಗೂ ಗುರು ಮಾತೆಯರು ಭಾಗವಹಿಸಿ ಗುರುವಂದನ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು ಕಾರ್ಯಕ್ರಮದ ನಿರೂಪಕರಾಗಿ 2011-12ನೇ ಸಾಲಿನ ಹಳೆಯ ವಿದ್ಯಾರ್ಥಿ ಅನಿಲ್ ಹೂಗಾರ್ ಶ್ವೇತಾ ಕುಲಕರ್ಣಿ ಅವರು ವಹಿಸಿಕೊಂಡಿದ್ದರು ಸ್ವಾಗತ ಭಾಷಣವನ್ನು ಸಾಬಣ್ಣ ಮೈನಾಳ್ ಅವರು ವಹಿಸಿಕೊಂಡಿದ್ದರು ಗುರುವಂದನ ಕಾರ್ಯಕ್ರಮದಲ್ಲಿ ಗುರುವಿನ ಕುರಿತು ಸವಿಸ್ತಾರವಾಗಿ ತಮ್ಮ ಅನಿಸಿಕೆಯನ್ನು ಶ್ರೀಶೈಲ್ ಬಿರಾದರವರು ಪ್ರೀತಿ ಶಾಹಪುರ್ ದಾನಮ್ಮ ಸಾಗರ ಸಿ ಅವರು ಗುರುವಿನ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು ಅದೇ ರೀತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗುರುಗಳಿಗೆ ನೆನಪಿನ ಕಾಣಿಕೆಯನ್ನು ಕೊಟ್ಟು 2011 -12 ಸಾಲಿನ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು
ವರದಿ ಜೆಟ್ಟಪ್ಪ ಎಸ್ ಪೂಜಾರಿ