ಕಿರಣಾ ವರ್ತಕರ ಸಂಘದ ತಾಲೂಕು ಅಧ್ಯಕ್ಷರಾಗಿ ರಾಜು ಆನೆಗುಂದಿ ಆಯ್ಕೆ.
ಕಿರಣಾ ವರ್ತಕರ ಸಂಘದ ತಾಲೂಕು ಅಧ್ಯಕ್ಷರಾಗಿ ರಾಜು ಆನೆಗುಂದಿ ಆಯ್ಕೆ.
ಶಹಾಪುರ : ತಾಲೂಕು ಘಟಕದ ಕಿರಣಾ ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ,ನಗರದ ಯುವ ಉದ್ಯಮಿ ರಾಜು ಆನೆಗುಂದಿ ಅವರು ನಿನ್ನೆ ಜರುಗಿದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡಿದ್ದು,ಕಿರಣಾ ವರ್ತಕರ ಸಂಘದ ಸಮಸ್ಯೆಗಳಿಗೆ ಸ್ಪಂದಿಸಿ,ನನಗೆ ವಹಿಸಿರುವ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತೇನೆಂದು ನೂತನ ಅಧ್ಯಕ್ಷ ರಾಜು ಆನೆಗುಂದಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಎಲ್ಲರೂ ಸೇರಿಕೊಂಡು ಒಗ್ಗಟ್ಟಿನಿಂದ,ಪರಸ್ಪರ ಸ್ನೇಹ ಪ್ರೀತಿಯಿಂದ ಇರೋಣ ಅಲ್ಲದೆ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿ ಕೊಡುವ ರೀತಿಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ನುಡಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಮುಖಂಡರಾದ ಚಂದ್ರಶೇಖರ ರಾಂಪುರ,ಶ್ರೀ ಗಂಗಾಧರ ಲಾಳಸಂಗಿ,ಬಸನಗೌಡ ಕಂಚಲಕವಿ,ಚನ್ನಬಸಪ್ಪ ಕೊಲ್ಲೂರ,ರಾಜು ಜೈನ್,ರಾಚಯ್ಯ ಸ್ವಾಮಿ,ಅಶೋಕ ಮಾಗಾ, ಬಸವರಾಜ ಮದ್ದಿನ್,ಹಿತೇಶ್ ಜೈನ್,ಹಾಜಿ ಹೈಯಾಳ,ಪ್ರಶಾಂತ ಸಜ್ಜನ್,ಗುರು ಶಿರ್ಣಿ,ಸಿದ್ದು ಯಂಬಿರಾಳ,ಗುರು ಮ್ಯಾಳ್ಗಿ, ಬಸವರಾಜ ತೋಟಗೇರ, ಬಸವರಾಜ ಕಡಗಂಚಿ,ಸಿದ್ದಯ್ಯ ಸ್ವಾಮಿ ಕನ್ಯಾಕುಳ್ಳೂರ,ಚೆನ್ನಯ್ಯ ಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.
