ಬಿಸಿಲಲ್ಲಿ ಟ್ರಾಫಿಕ್ ಸಿಗ್ನಲ್ ಬಂದ್ ಲಿಂಗರಾಜ ಸಿರಗಾಪೂರ ಆಗ್ರಹ

ಬಿಸಿಲಲ್ಲಿ ಟ್ರಾಫಿಕ್ ಸಿಗ್ನಲ್ ಬಂದ್ ಲಿಂಗರಾಜ ಸಿರಗಾಪೂರ ಆಗ್ರಹ
ಕಲಬುರಗಿ: ಕಲಬುರಗಿ ನಗರದಾದ್ಯಂತ ಬಿಸಿಲಿನ ತಾಪಮಾನ ಏರಿಕೆಯಾಗಿರುವುದರಿಂದ ನಗರದ ಪ್ರಮುಖ ವೃತ್ತಗಳಲ್ಲಿರುವ ಟ್ರಾಫಿಕ್ ಸಿಗ್ನಲ್ (ಸಂಚಾರಿ ದೀಪ) ಗಳನ್ನು ಬಂದ್ ಮಾಡಬೇಕು ಹಾಗೂ ಹೆಲ್ಮೆಟ್ ಕಡ್ಡಾಯ ನೆಪದಲ್ಲಿ ದಂಡ ವಿಧಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕೆಂದು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಜಿಲ್ಲೆಯಾದ್ಯಂತ ಈಗಾಗಲೇ ಬಿಸಿಲಿನ ತಾಪಮಾನ ಸುಮಾರು 42 ಡಿಗ್ರಿ ಸೆಲ್ಸಿಯಸ್ ತಲುಪಿದ್ದು,ವಾಹನ ಸವಾರರು ಪರದಾಡುವಂತಾಗಿದೆ.ಮೇಲಿಂದ ನಗರದಲ್ಲಿ ವಿವಿಧ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಜನರು ಉರಿ ಬಿಸಿಲಿನಲ್ಲಿ ನಿಲ್ಲಬೇಕು.ಕೆಲವೋಮ್ಮೆ ಸಂಚಾರ ದಟ್ಟಣೆ ಇರುವ ಸಿಗ್ನಲ್ ಗಳಲ್ಲಿ ಎರಡು ಮೂರು ಸಂಚಾರ ದೀಪಗಳನ್ನು ದಾಟಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಅಧಿಕ ಬಿಸಿಲು ಇರುವುದರಿಂದ ವಯಸ್ಕರಿಗೆ ಸಿಗ್ನಲ್ ಗಳಲ್ಲಿ ನಿಲ್ಲಲಾಗುವುದಿಲ್ಲ.ಆರೋಗ್ಯ ಸಮಸ್ಯೆಯೂ ಉದ್ಭವಿಸುತ್ತದೆ.ಮಧ್ಯಾಹ್ನ12 ಗಂಟೆಯಿಂದ ಸಂಜೆ 5 ರವರೆಗೆ ಸಿಗ್ನಲ್ ಗಳನ್ನು ಬಂದ್ ಮಾಡಬೇಕು.ಸಂಜೆಯಿಂದ ರಾತ್ರಿ ವರೆಗೆ ಕಾರ್ಯನಿರ್ವಹಿಸಿದರೆ ತೊಂದರೆ ಇಲ್ಲ.
ಇನ್ನು ದ್ವೀಚಕ್ರ ವಾಹನಗಳ ತಪಾಸಣೆ ವೇಳೆ ಎಲ್ಲಾ ದಾಖಲೆಗಳು ಇದ್ದರೂ ಹೆಲ್ಮೆಟ್ ಧರಿಸದವರನ್ನು ಹೆಲ್ಮೆಟ್ ಕಡ್ಡಾಯ ಎಂದು ಹೇಳಿ ಸಂಚಾರಿ ಪೊಲೀಸರು ದಂಡ ವಿಧಿಸುತ್ತಾರೆ.ಬೇಸಿಗೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಲ್ಮೆಟ್ ಕಡ್ಡಾಯದಿಂದ ಪ್ರತಿ ವರ್ಷ ಸರಕಾರ ವಿನಾಯಿತಿ ನೀಡುತ್ತದೆ.ವಾಹನ ಸವಾರರನ್ನು ಸಂಚಾರಿ ಪೊಲೀಸರು ತೊಂದರೆ ಮಾಡುತ್ತಿದ್ದಾರೆ.ಕೂಡಲೇ ಇದನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.