ಯುನೈಟೆಡ್ ಹಾಸ್ಪಿಟಲನಿಂದ ರಂಜಾನ್ ಪ್ರಯುಕ್ತ ಇಫ್ತಾರ್ ಕೂಟ

ಯುನೈಟೆಡ್ ಹಾಸ್ಪಿಟಲನಿಂದ ರಂಜಾನ್ ಪ್ರಯುಕ್ತ ಇಫ್ತಾರ್ ಕೂಟ
ಕಲಬುರಗಿ: ಯುನೈಟೆಡ್ ಹಾಸ್ಪಿಟಲ್‌ನಿಂದ ರಂಜಾನ್ ಪ್ರಯುಕ್ತ ಗುರುವಾರ ವಿಶೇಷ ಇಫ್ತಾರ್ ಕೂಟವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಮ ಸಿದ್ದಾರೆಡ್ಡಿ ಅವರು ಮುಸ್ಲಿಂ ಬಂಧುಗಳೊಂದಿಗೆ ಉಪಾಹಾರ ಸೇವಿಸಿ, ಈ ಪವಿತ್ರ ತಿಂಗಳ ಸಂದೇಶವನ್ನು ಹಂಚಿಕೊಂಡರು.
ಇಫ್ತಾರ್ ಕೂಟದಲ್ಲಿ ಹಲವು ವೈದ್ಯರು, ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಸ್ಲಿಂ ಮುಖಂಡರು ಭಾಗವಹಿಸಿದ್ದರು. ಡಾ. ವಿಕ್ರಮ ಸಿದ್ದಾರೆಡ್ಡಿ ಮಾತನಾಡಿ, "ರಂಜಾನ್ ಕೇವಲ ಉಪವಾಸ ಮತ್ತು ಪ್ರಾರ್ಥನೆಯ ಸಮಯವಷ್ಟೇ ಅಲ್ಲ, ಇದು ಸಹಾನುಭೂತಿ, ಭ್ರಾತೃತ್ವ ಮತ್ತು ಸಮಾಜದೊಂದಿಗೆ ಹಂಚಿಕೊಳ್ಳುವ ಮಹತ್ವದ ಅವಧಿಯಾಗಿದೆ" ಎಂದು ಹೇಳಿದರು.
ಅವರು ಇಂತಹ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಸೌಹಾರ್ದತೆಯ ಸಂಕೇತ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ದುವಾ ಸಲ್ಲಿಸಿ, ಸಮುದಾಯದ ಒಗ್ಗಟ್ಟಿಗೆ ಪ್ರಾರ್ಥಿಸಿದರು.