ಬೆಂಗಳೂರು ಪ್ರಜಾತತ್ವ ಮಾನವ ಹಕ್ಕುಗಳ ಫೌಂಡೇಶನ್ ನ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ ಧ್ವನಿ ಇಲ್ಲದವರ ಜನರ ಧ್ವನಿಯಾಗಿ ಕೆಲಸ ಮಾಡಲಿದೆ ಪ್ರಜಾತತ್ವ ಫೌಂಡೇಶನ್

ಬೆಂಗಳೂರು ಪ್ರಜಾತತ್ವ ಮಾನವ ಹಕ್ಕುಗಳ ಫೌಂಡೇಶನ್ ನ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ  ಧ್ವನಿ ಇಲ್ಲದವರ  ಜನರ ಧ್ವನಿಯಾಗಿ ಕೆಲಸ ಮಾಡಲಿದೆ  ಪ್ರಜಾತತ್ವ ಫೌಂಡೇಶನ್

ಬೆಂಗಳೂರು ಪ್ರಜಾತತ್ವ ಮಾನವ ಹಕ್ಕುಗಳ ಫೌಂಡೇಶನ್ ನ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ 

ಧ್ವನಿ ಇಲ್ಲದವರ ಜನರ ಧ್ವನಿಯಾಗಿ ಕೆಲಸ ಮಾಡಲಿದೆ ಪ್ರಜಾತತ್ವ ಫೌಂಡೇಶನ್

 ಚಿಂಚೋಳಿ: ಸರ್ಕಾರ ಮಟ್ಟದಲ್ಲಿ ಅನ್ಯಾಯಕ್ಕೆ ಒಳಗಾದ ಧ್ವನಿ ಇಲ್ಲದವರ ಜನರ ಧ್ವನಿಯಾಗಿ ಕೆಲಸ ಮಾಡಲಿದೆ ಮತ್ತು ಸಂತ್ರಸ್ತರ ಪರನಿಂತು ಅದರ ವಿರುದ್ದ ಹೋರಾಟ ನಡೆಸಿ, ನ್ಯಾಯ ದೊರಕಿಸುವ ಕೆಲಸ ಪ್ರಜಾತತ್ವ ಮಾನವ ಹಕ್ಕುಗಳ ಸಂಘಟನೆಯ ಫೌಂಡೇಶನ್ ಮಾಡಲಿದೆ ಎಂದು ಹಾಗೂ ಬೆಂಗಳೂರು ಮಾನವ ಹಕ್ಕುಗಳ ಫೌಂಡೇಶನ್ ನ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಆಷಾರಾಣಿ ಬಿ. ಬಿ ಅವರು ಹೇಳಿದರು. ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅತಿಯಾಗಿ ಭ್ರಷ್ಟಾಚಾರಕ್ಕೆ ಸಂವಿಧಾನ ಬದ್ಧವಾದ ಸರಕಾರದ ಸೌಲಭ್ಯ ಗಳು ಪಡೆದುಕೊಳ್ಳುವುದರಿಂದ ಜನಸಾಮಾನ್ಯರು, ವೃದ್ಧರು, ನಿರ್ಗತಿಕ ಬಡವರ ಪರ ನಿಂತು ಅವರ ಧ್ವನಿಯಾಗಿ ಶಾಂತ ರೀತಿಯ ಹೋರಾಟದ ಮೂಲಕ ಸಂವಿಧಾನ ಬದ್ಧ ನ್ಯಾಯ ಕೊಡಿಸುವ ಕೆಲಸ ಫೌಂಡೇಶನ್ ನ ಮೂಲ ಧ್ಯೆಯವಾಗಿದೆ. ಫೌಂಡೇಶನ್ ಸ್ಥಾಪನೆಗೊಂಡು ನಾಲ್ಕು ವರ್ಷ ದಲ್ಲಿ ಐದು ಸಾವಿರ ಜನ ನೋಂದಾಯಿಸಿಕೊಂಡು ಸದಸ್ಯರಾಗಿದ್ದಾರೆ ಎಂದರು. ಸಂಸ್ಥಾಪಕ ಅಧ್ಯಕ್ಷ ನಾರಾಯಣ್ಣ ರೆಡ್ಡಿ, ಕಾರ್ಯಕಾರಿಣಿ ಸಮಿತಿ ಅಧ್ಯಕ್ಷ ಉಮೇಶ ಕೆ. ಸಿ ಅವರು ಮಾತನಾಡಿದರು.  

ತಾಲೂಕ ಘಟಕದ ಪದಾಧಿಕಾರಿಗಳ ಆಯ್ಕೆ : 

ಪ್ರಜಾತತ್ವ ಮಾನವ ಹಕ್ಕುಗಳ ಫೌಂಡೇಶನ್ ಸಂಘಟನೆ ಯ ಚಿಂಚೋಳಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಚೆನ್ನೂರ್, ಉಪಾಧ್ಯಕ್ಷ ರಾಗಿ ನರೇಶ ರೆಡ್ಡಿ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶಕುಂತಲಾ ಎಸ್. ಹುಲಿ, ಗೌರವಧ್ಯಕ್ಷರಾಗಿ ಸುರೇಶ ದೇಶಪಾಂಡೆ ಅವರನ್ನು ನೇಮೀಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ನಾರಾಯಣ ರೆಡ್ಡಿ ತಿಳಿಸಿದರು. 

ರೇವನಸಿದ್ದಪ್ಪ ದಾದಾಪೂರ್, ಸಿದ್ದಣ್ಣ ಟೇಲರ್ ಸೋಮಲಿಂಗದಳ್ಳಿ, ಚಂದ್ರಶೇಖರ ಪಾರಾ, ಪುಂಡಲೀಕ್ ಮಡಿವಾಳ, ವಿಜಯಕುಮಾರ ಬೆಳಕೇರಿ, ಸೂರ್ಯಕಾಂತ ಹುಲಿ, ಜಗನಾಥ ಬೀರನಳ್ಳಿ, ಮಂಜುನಾಥ ಸುಣಗಮಠ, ಸಂತೋಷ ಕಶೆಟ್ಟಿ, ನಾಗರಾಜ ಕಾಳಗಿ, ಗಣಪತಿ ಹೂಗಾರ ಸಂಜೀವಕುಮಾರ ಪಾಟೀಲ್ ಯಂಪಳ್ಳಿ, ಸೋಮಶೇಖರ ಮುಸ್ತರಿ ಇದ್ದರು.