ವಿಶ್ವ ಹತ್ತಿ ದಿನಾಚರಣೆಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯ ಆರ್ಥಿಕ ಅಭಿವೃದ್ಧಿಯಲ್ಲಿ ಹತ್ತಿಯ ಕೊಡುಗೆ ಅನನ್ಯ

ವಿಶ್ವ ಹತ್ತಿ ದಿನಾಚರಣೆಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯ ಆರ್ಥಿಕ ಅಭಿವೃದ್ಧಿಯಲ್ಲಿ ಹತ್ತಿಯ ಕೊಡುಗೆ ಅನನ್ಯ

ವಿಶ್ವ ಹತ್ತಿ ದಿನಾಚರಣೆಯಲ್ಲಿ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯ

ಆರ್ಥಿಕ ಅಭಿವೃದ್ಧಿಯಲ್ಲಿ ಹತ್ತಿಯ ಕೊಡುಗೆ ಅನನ್ಯ 

ಕಲಬುರಗಿ: ರೈತರು ಬೆಳೆಯುವ ಪ್ರಮುಖ ವಾಣ ಜ್ಯ ಬೆಳಗಲ್ಲಿ ಒಂದಾದ ಹತ್ತಿಯು ಬಹುಪಯೋಗಿ ಹೊಂದಿದೆ. ಹತ್ತಿ ಬಟ್ಟೆಗಳು ಧರಿಸುವುದು ಆರೋಗ್ಯಕ್ಕೆ ಹಿತಕಾರ. ನೀರು ಸಂಸ್ಕರಣ, ಕೈಗಾರಿಕೆಗಳ ಉತ್ಪನ್ನ, ರೈತರಿಗೆ ಅಧಿಕ ಆದಾಯದ ಬೆಳೆ, ವೈದ್ಯಕೀಯ ಕ್ಷೇತ್ರ, ಗ್ರಹೋಪಯೋಗಿ ವಸ್ತುಗಳು ಸೇರಿದಂತೆ ವಿವಿಧೆಡೆ ಬಳಕೆಯಾಗುವ ಹತ್ತಿಯು ದೇಶದ ಆರ್ಥಿಕ ಅಭಿವೃದ್ಧಿಗೆ ಅನನ್ಯವಾದ ಕೊಡುಗೆಯನ್ನು ನೀಡುತ್ತಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.

         ಪ್ರಗತಿಪರ ರೈತ ಸಂತೋಷ ರೆಡ್ಡಿ ಅವರ ಹತ್ತಿಯ ಹೊಲದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ವಿಶ್ವ ಹತ್ತಿ ದಿನಾಚರಣೆ’ಯಲ್ಲಿ ಹತ್ತಿ ಬೆಳೆಗಳಿಗೆ ಪೂಜೆ ಸಲ್ಲಿಸಿ ನಂತರ ಅವರು ಮಾತನಾಡಿದರು.

         ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ಮಾತನಾಡಿ, ‘ಹತ್ತಿಗೆ ಹತ್ತು ಕುತ್ತು’ ಎಂಬ ಮಾತಿಗೆ. ಅಂದರೆ ಬೆಳೆಗೆ ಆಗಾಗ್ಗೆ ರೋಗಗಳು ಉಂಟಾಗುತ್ತವೆ. ಅದಕ್ಕಾಗಿ ಬಿತ್ತನೆ ಕಾರ್ಯದಿಂದ ಫಸಲಿನವರೆಗೆ ಸೂಕ್ತ ನಿರ್ವಹಣೆ ಮಾಡಬೇಕು. ರೈತರು ಸ್ವಲ್ಪ ಕಷ್ಟಪಟ್ಟರೆ ಉತ್ತಮ ಇಳುವರಿ ಪಡೆಯಬಹುದು. ಕೃಷಿ ವಿಜ್ಞಾನಿಗಳ ಸೂಕ್ತ ಸಲಹೆಗಳನ್ನು ಪಡೆಯಬೇಕು. ಮಿಶ್ರ ಬೆಳೆ ಪದ್ಧತಿ ಅನುಸರಿಸುವುದು ಅಗತ್ಯವಾಗಿದೆ ಎಂದರು.

        ಈ ಸಂದರ್ಭದಲ್ಲಿ ಸುರೇಶ್ ರಾಠೋಡ, ಗಣಪತಿ ಪೂಜಾರಿ, ಮಲ್ಲಿಕಾರ್ಜುನ ಚಳಕೆ, ರಾಜಕುಮಾರ, ಬಸವರಾಜ, ಶರಣಬಸಪ್ಪ ಸೇರಿದಂತೆ ಇನ್ನಿತರರಿದ್ದರು.